ಬ್ರೇಕಿಂಗ್ ನ್ಯೂಸ್
20-05-21 08:05 pm Mangaluru Correspondent ಕರಾವಳಿ
ಮಂಗಳೂರು, ಮೇ 20: ಕ್ರೈಸ್ತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ, ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜ ನಗರದ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲಸಿಕೆ ಪಡೆಯದಂತೆ ಕ್ರೈಸ್ತ ಸಮುದಾಯಕ್ಕೆ ಚರ್ಚ್ ಕಡೆಯಿಂದ ಸೂಚನೆ ನೀಡಲಾಗಿದೆ ಎಂದು ಸಂಸದೆ ಶೋಭಾ ಹೇಳಿಕೆ ನೀಡಿದ್ದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಕ್ರೈಸ್ತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಎಂಎಲ್ಸಿ ಐವಾನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಕಮಿಷನರನ್ನು ಭೇಟಿಯಾಗಿ ದೂರು ನೀಡಿದ್ದಾರೆ.


ಇದೇ ವೇಳೆ, ಮಾತನಾಡಿರುವ ಐವಾನ್ ಡಿಸೋಜ, ಲಸಿಕೆ ಕೊಡುವ ಯೋಗ್ಯತೆ ಇವರಿಗೆ ಇಲ್ಲ. ಆದರೂ ಕ್ರೈಸ್ತ ಸಮುದಾಯದ ಅತಿ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಸಮುದಾಯಕ್ಕೆ ಸೇರಿದ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಗಳನ್ನೂ ಮಾಡಲಾಗಿದೆ. ಶೋಭಾ ಕರಂದ್ಲಾಜೆ ಒಂದು ಸಮುದಾಯವನ್ನು ಕೀಳಾಗಿ ಬಿಂಬಿಸಿ ಹೇಳಿಕೆ ನೀಡಿದ್ದಾರೆ. ಇವರ ಕಚೇರಿಯ ಮುಂದೆ ಹತ್ತು ಸಾವಿರ ಮಂದಿಯನ್ನು ಸೇರಿಸಿ ಲಸಿಕೆ ಕೊಡಿ ಎಂದು ಪ್ರತಿಭಟನೆ ಮಾಡುತ್ತೇವೆ. ಇವರಿಗೆ ಲಸಿಕೆ ಕೊಡಿಸುವ ತಾಕತ್ತು ಇದೆಯಾ, ನೋಡೋಣ ಎಂದು ಸವಾಲು ಹಾಕಿದ್ದಾರೆ.

ಈ ಬಗ್ಗೆ ಐವನ್ ಡಿಸೋಜ ಅವರನ್ನು ಕೇಳಿದಾಗ, ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ಆಗಿದೆ. ಈಗಾಗಲೇ ಮಂಗಳೂರು ಡಯಾಸಿಸ್ ಅಡಿ ದ.ಕ. ಜಿಲ್ಲೆಯಾದ್ಯಂತ 40 ಕ್ಕೂ ಹೆಚ್ಚು ವಿವಿಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಗುಲ್ಬರ್ಗ, ಬೆಂಗಳೂರು, ಯಾದಗಿರಿ ಹೀಗೆ ಹಲವು ಕಡೆ ದೂರು ದಾಖಲಾಗಿದೆ. ಒಂದು ಸಮುದಾಯವನ್ನು ಅವಹೇಳನ ಮಾಡಿದ ಶೋಭಾರನ್ನು ಹಾಗೇ ಬಿಡುವುದಿಲ್ಲ ಎಂದು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
Congress Senior leader Ivan Dsouza files complaint against Udupi MP Shobha Karandlaje for her controversial statement against Churches over vaccine. A FIR has been registered against her at Pandeshwar Police Station. Speaking to Headline Karnataka Ivan said more then 40 cases has been registered against her in Dakshina Kannada by Catholic Diocese.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 05:12 pm
HK News Staffer
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am