ಬ್ರೇಕಿಂಗ್ ನ್ಯೂಸ್
17-05-21 10:30 pm Udupi Correspondent ಕರಾವಳಿ
ಉಡುಪಿ, ಮೇ 17: ಕೊರೊನಾ ಕಾರಣದಿಂದ ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಮೊಬೈಲ್, ವಿಡಿಯೋ ಗೇಮ್ ಹುಚ್ಚಿಗೆ ಬಿದ್ದು ಎಷ್ಟರ ಮಟ್ಟಿಗೆ ಮಾನಸಿಕ ಸ್ವಾಸ್ಥ್ಯ ಕಳಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ನಿದರ್ಶನ. ಇಲ್ಲೊಬ್ಬ 16 ವರ್ಷದ ಹುಡುಗನೊಬ್ಬ ತಂದೆ, ತಾಯಿ ಮೊಬೈಲ್ ನೋಡುತ್ತಿದ್ದುದಕ್ಕೆ ಗದರಿದರೆಂದು ಮನೆಯಿಂದ ಸ್ವಲ್ಪ ದೂರವಿರುವ ಸಾರ್ವಜನಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನಲ್ಲಿ ನಡೆದಿದೆ.

ಕಾಪು ತಾಲೂಕಿನ ಮಣಿಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಹೇಬತ್ ಅಸ್ಲಾಮಿಯಾ(16) ಮೃತ ದುರಂತ ಸಾವನ್ನಪ್ಪಿದ ಬಾಲಕ. ಈ ಬಗ್ಗೆ ಹುಡುಗನ ಹೆತ್ತವರಾದ ಜುಬೇದಾ ಮತ್ತು ಶಬಾನ್ ದಂಪತಿ ಕಾಪು ಠಾಣೆಗೆ ದೂರು ನೀಡಿದ್ದಾರೆ. ಅಸ್ಲಾಮಿಯಾ ದಿನವಿಡೀ ಮೊಬೈಲಿನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದುದಲ್ಲದೆ ತಂದೆ, ತಾಯಿ ಮಾತು ಕೇಳುತ್ತಿರಲಿಲ್ಲ. ಮೇ 15ರಂದು ಸಂಜೆ ಮೊಬೈಲ್ ಒತ್ತುತ್ತಿದ್ದ ಹುಡುಗನಿಗೆ ತಾಯಿ ಗದರಿದ್ದು, ಗೇಮ್ಸ್ ಆಡುವುದು ಬೇಡವೆಂದು ಹೇಳಿ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಹುಡುಗ, ತಾಯಿ ಬಳಿ ಕೋಪದಿಂದ ಮನೆಯ ಮೂಲೆಯಲ್ಲಿ ಕುಳಿತುಕೊಂಡಿದ್ದ.
ಆನಂತರ ಹುಡುಗನ ತಾಯಿ ನಮಾಜ್ ಮಾಡಲೆಂದು ಕೋಣೆಗೆ ತೆರಳಿದ್ದರೆ, ತಂದೆ ಬಾತ್ ರೂಮಿಗೆ ತೆರಳಿದ್ದರು. ನಮಾಜ್ ಮುಗಿಸಿದ ಬಳಿಕ ತಾಯಿ ಹೊರಬಂದಾಗ ಹುಡುಗ ಮನೆಯಲ್ಲಿ ಇರಲಿಲ್ಲ. ಬಳಿಕ ತಂದೆ, ತಾಯಿ ಇಬ್ಬರೂ ಮನೆ ಪರಿಸರದಲ್ಲಿ ಹುಡುಕಾಡಿದ್ದು, ಹೊರಗಡೆ ತೆರಳಿದಾಗ 200 ಮೀಟರ್ ದೂರದಲ್ಲಿ ಬಾವಿ ಬಳಿ ಜನ ಸೇರಿರುವುದು ಕಂಡುಬಂದಿದೆ. ಅಲ್ಲಿ ತೆರಳಿದಾಗ ಹುಡುಗ ಬಾವಿಗೆ ಹಾರಿರುವುದು ತಿಳಿದುಬಂದಿದ್ದು ಬಳಿಕ ಫೈರ್ ಸರ್ವಿಸ್ ನವರು ಬಂದು ಹುಡುಗನನ್ನು ಮೇಲೆತ್ತಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾನೆ. ಕಾಪು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
In an incident that highlights how mobile gaming addiction has taken over the lives of youngsters, a 16-year-old boy ended his life after being rebuked by her parents for playing video games on mobile phone. The incident occurred on the evening of May 15 at Manipur Kote, Manipura village, Udupi.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am