ಬ್ರೇಕಿಂಗ್ ನ್ಯೂಸ್
09-05-21 12:39 pm Udupi Correspondent ಕರಾವಳಿ
ಉಡುಪಿ, ಮೇ 9: ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದು ದಾಖಲಾಗುವ ಮಂದಿಗೆ ಜಿಲ್ಲಾಡಳಿತದಿಂದ ವೆಂಟಿಲೇಟರ್ ನೀಡಲು ಸಾಧ್ಯವಾಗುವುದಿಲ್ಲ. ತಮ್ಮ ಜೀವದ ಜೊತೆ ಅವರೇ ಆಟ ಆಡುತ್ತಿದ್ದಾರೆ. ಆ ರೀತಿ ಬಂದರೆ ನಮ್ಮಲ್ಲಿ ಎಷ್ಟು ಬೆಡ್ ಇದ್ದರೂ ಸಾಲುವುದಿಲ್ಲ. ಸಾರ್ವಜನಿಕರ ನಿರ್ಲಕ್ಷಕ್ಕೆ ನಾವು ಹೊಣೆಗಾರರಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಪಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿಗೆ ಆಸ್ಪತ್ರೆ ಅಗತ್ಯ ಇರುವುದಿಲ್ಲ. 10 ಶೇ. ಮಂದಿಗೆ ಮಾತ್ರ ಬೆಡ್ ಅಗತ್ಯವಿದ್ದು ಜಿಲ್ಲಾಡಳಿತ ಬೆಡ್ ಕೊಡಲು ಸಿದ್ಧ ಇದೆ. ಅದರಲ್ಲಿ ಶೇ. ಒಂದರಷ್ಟು ಮಂದಿಗೆ ಐಸಿಯು ಮತ್ತು ಶೇ.2ರಷ್ಟು ಮಂದಿಗೆ ಮಾತ್ರ ಆಕ್ಸಿಜನ್ ಅಗತ್ಯ ಇರುತ್ತದೆ ಎಂದರು.
ಜಿಲ್ಲೆಯಲ್ಲಿ 1300ಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್ಗಳು ಈಗ ಲಭ್ಯ ಇವೆ. ಅದರಲ್ಲಿ 350 ಬೆಡ್ಗಳು ಭರ್ತಿ ಆಗಿವೆ. ಸಾರ್ವಜನಿಕರು ಆಸ್ಪತ್ರೆಗೆ ಬಾರದೆ ಹೋಮ್ ಐಸೋಲೇಷನ್ನಲ್ಲೇ ಚಿಕಿತ್ಸೆ ಪಡೆದು ಗುಣಮುಖ ಆಗಲು ಸಾಧ್ಯ ಇದೆ. ಆದರೆ ಹೆದರಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬೆಡ್ಗಳಿಗೆ ಯಾವುದೇ ಕೊರತೆ ಇಲ್ಲ. ಜನ ಬೆಡ್ ಇಲ್ಲ ಎಂದು ಹೆದರುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆರು ಮೆಟ್ರಿಕ್ ಟನ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದ್ದು, ಅದರಲ್ಲಿ 4 ಮೆಟ್ರಿಕ್ ಟನ್ ಆಕ್ಸಿಜನ್ ರೆಡಿಯಿದೆ. ಬೆಳಪುವಿನ ಘಟಕದಲ್ಲಿ ಪ್ರಸ್ತುತ 7 ಮೆಟ್ರಿಕ್ ಟನ್ ಇದ್ದು, ನಾಳೆ 10 ಮೆಟಿಕ್ ಟನ್ ಆಕ್ಸಿಜನ್ ಬರಲಿದೆ. ಬಹರೈನ್ನಿಂದ ಬಂದ ಆರು ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಈಗಾಗಲೇ ಬೆಳಪುವಿನಲ್ಲಿ ತುಂಬಿಸಿ ಇಡಲಾಗಿದೆ ಎಂದವರು ಮಾಹಿತಿ ನೀಡಿದರು.
ಹೋಮ್ ಐಸೋಲೇಷನ್ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಪಂನವರು ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಲಿದ್ದಾರೆ. ಅಗತ್ಯ ಇರುವವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ಆರಂಭ:
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೆಂಟರ್ಗಳನ್ನು ತೆರೆಯಲಾಗಿದ್ದು, ಮಣಿಪಾಲ ಎಂಐಟಿಯಲ್ಲಿ 300, ಕುಂದಾಪುರ ದೇವರಾಜ ವಸತಿ ನಿಲಯದಲ್ಲಿ 75, ಕಾರ್ಕಳ ಮಿಯ್ಯಾರಿನ ಮೊರಾರ್ಜಿ ದೇಸಾಯಿ ಹಾಸ್ಟೆಲ್ನಲ್ಲಿ 60 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಮುಂದೆ ಇವು ಭರ್ತಿಯಾದರೆ ಬೆಡ್ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಮನೆಗಳಲ್ಲಿ ಐಸೋಲೇಷನ್ಗೆ ಸರಿಯಾದ ವ್ಯವಸ್ಥೆ ಇಲ್ಲದವರು ಈ ಕೋವಿಡ್ ಸೆಂಟರ್ಗಳಲ್ಲಿ ಉಳಿದುಕೊಳ್ಳಬಹುದು. ಇಲ್ಲಿ ವೈದ್ಯರು ಕೂಡ ಇರುತ್ತಾರೆ. ಕಾಲ್ಸೆಂಟರ್ ಮೂಲಕ ಬಂದು ಇಲ್ಲಿ ದಾಖಲಾಗಬಹುದು. ಅದೇ ರೀತಿ ಕೋವಿಡ್ ಕಾಲ್ಸೆಂಟರ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಆಯ್ಯುಷ್ಮಾನ್ ಭಾರತ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.
Symptomatic people are not getting themselves tested. People coming for ventilator facilities will not be entertained. We are not responsible for their negligence. If anyone has mild symptoms, the person should come to hospital. Do not come after the situation gets worse,” said district commissioner (DC) G Jagadeesha.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am