ಬ್ರೇಕಿಂಗ್ ನ್ಯೂಸ್
08-05-21 07:56 pm Mangaluru Correspondent ಕರಾವಳಿ
ಮಂಗಳೂರು, ಮೇ 8: ಪದವಿನಂಗಡಿಯಲ್ಲಿ ರಸ್ತೆಯನ್ನು ಅತಿಕ್ರಮಿಸಿಕೊಂಡಿರುವ ಕಟ್ಟಡಕ್ಕೆ ಬಡಿದು ಬೈಕ್ ಅಪಘಾತ ನಡೆದಿರುವ ಸ್ಥಳಕ್ಕೆ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ರಸ್ತೆಯಲ್ಲೇ ಅಂಗಡಿ ಮಾಡಿಕೊಂಡಿರುವ ಜಾಗವನ್ನು ಪರಿಶೀಲನೆ ನಡೆಸಿದ್ದು, ಕಟ್ಟಡದ ಸ್ಟೆಪ್ ಇರುವುದನ್ನು ತೆರವುಗೊಳಿಸಿ ಫುಟ್ ಪಾತ್ ನಿರ್ಮಿಸುವುದಾಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ನಿನ್ನೆ ಬೆಳಗ್ಗೆ ಶರಬತ್ ಕಟ್ಟೆ ನಿವಾಸಿ ಪ್ರಶಾಂತ್ ಎಂಬ ಯುವಕ ಬೈಕಿನಲ್ಲಿ ಬರುತ್ತಿದ್ದಾಗ ಅಡ್ಡಲಾಗಿ ಬಂದ ಸ್ಕೂಟರನ್ನು ತಪ್ಪಿಸಲು ಯತ್ನಿಸಿ, ರಸ್ತೆಯ ಬದಿಗೆ ಸರಿದಿದ್ದು ಈ ವೇಳೆ ಕಟ್ಟಡದ ಮುಂದೆ ಇರಿಸಿದ್ದ ಕೋಲ್ಡ್ ಡ್ರಿಂಕ್ಸ್ ಬಾಕ್ಸ್ ಗೆ ಬಡಿದು ಬೈಕ್ ಪಲ್ಟಿಯಾಗಿತ್ತು. ತಲೆಗೆ ತೀವ್ರ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದ. ಈ ಘಟನೆಗೆ ಸ್ಕೂಟರ್ ಅಡ್ಡ ಬಂದಿದ್ದು ಮಾತ್ರವಲ್ಲದೆ, ರಸ್ತೆ ಬದಿಯನ್ನು ಅತಿಕ್ರಮಿಸಿಕೊಂಡು ಕಟ್ಟಿರುವ ಕಟ್ಟಡವೂ ಕಾರಣ. ಮಹಾನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂಥ ದುರ್ಘಟನೆ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಪಾಲಿಕೆಯನ್ನು ಉಗಿದು ಬರೆದಿದ್ದರು.



#WakeupMCC ಎನ್ನುವ ಹೆಸರಲ್ಲಿ ಬೈಕ್ ಅಪಘಾತದ ಸಿಸಿಟಿವಿ ವಿಡಿಯೋವನ್ನು ಮುಂದಿಟ್ಟು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳನ್ನು ಜಾಡಿಸುವ ಕೆಲಸ ಮಾಡಿದ್ದರು. ಇದರ ಫಲವೆಂಬಂತೆ, ಇಂದು ಬೆಳಗ್ಗೆ ನಗರ ಯೋಜನಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡದ ಪಾರ್ಶ್ವವನ್ನು ತೆರವು ಮಾಡುವ ಭರವಸೆ ನೀಡಿದ್ದಾರೆ.
ಪದವಿನಂಗಡಿ ಬಳಿಯ ಪೇರ್ಲಗುರಿ ಕ್ರಾಸ್ ನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಅಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಕಾರಣ ಎನ್ನುವುದನ್ನು ಸ್ಥಳೀಯರು ಹೇಳುತ್ತಾ ಬಂದಿದ್ದರು. ತಿರುವಿನಲ್ಲಿ ಸಂಚರಿಸುವ ವಾಹನಗಳಿಗೆ ಮುಂದಿರುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುತ್ತಿದೆ. ಅಲ್ಲಿ ಡಿವೈಡರ್ ಕೊಟ್ಟಿರುವುದು ಮತ್ತು ಅಲ್ಲಿಂದ ಆಚೀಚೆ ಸಂಚರಿಸಲು ಅವಕಾಶ ಕೊಟ್ಟಿರುವ ಕಾರಣದಿಂದ ಅಪಘಾತ ಆಗುತ್ತಿರುವುದಾಗಿ ಹೇಳಿಕೊಂಡಿದ್ದರು.
ಇತ್ತೀಚೆಗೆ ಅದೇ ಜಾಗದಲ್ಲಿ ಕಾರು ಅಪಘಾತವಾಗಿ ರಸ್ತೆ ಬದಿ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿತ್ತು. ಕಾರು ಪಲ್ಟಿಯಾಗಿ ಸ್ವಲ್ಪದರಲ್ಲಿ ಕಾರು ಚಾಲಕ ಬಚಾವಾಗಿದ್ದ. ಆದರೆ, ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದರೂ, ಅಧಿಕಾರಿಗಳು ಎಚ್ಚತ್ತುಕೊಂಡಿರಲಿಲ್ಲ.
The officials of town planning department of Mangaluru City Corporation (MCC) visited the spot at Padavinangady where a bike rider Prashanth lost his life while trying to avoid colliding against a scooter. The CCTV footage video of the accident which took place on Friday May 8 had gone viral on social media.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am