ಬ್ರೇಕಿಂಗ್ ನ್ಯೂಸ್
07-05-21 07:14 pm Mangaluru Correspondent ಕರಾವಳಿ
ಮಂಗಳೂರು, ಮೇ 7: ಇಂದು ಬೆಳಗ್ಗೆ ನಗರದ ಪದವಿನಂಗಡಿಯಲ್ಲಿ ನಡೆದ ಬೈಕ್ ಅಪಘಾತದ ಸಿಸಿಟಿವಿ ದೃಶ್ಯ ಮತ್ತು ಅದಕ್ಕೆ ಕಾರಣವಾದ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬೈಕ್ ಅಪಘಾತಕ್ಕೆ ಸ್ಕೂಟರ್ ಸವಾರ ಅಡ್ಡ ಬಂದಿದ್ದೇ ಕಾರಣ ಎನ್ನುವ ರೀತಿ ಟೀಕೆ ವ್ಯಕ್ತವಾಗುತ್ತಿದ್ದಂತೆ, ಕೆಲವರು Wakeup MCC ಹೆಸರಲ್ಲಿ ಟ್ವಿಟರ್ ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಮಹಾನಗರ ಪಾಲಿಕೆಯ ಅಧಿಕಾರಿಗಳೇ ಎಚ್ಚತ್ತುಕೊಳ್ಳಿ. ನಿಮ್ಮ ಬೇಜಾವಾಬ್ದಾರಿಯಿಂದ ಅಮಾಯಕರು ಸಾವು ಕಾಣುತ್ತಿದ್ದಾರೆ ಎಂದು ಟೀಕಿಸಿ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಬೈಕ್ ಸವಾರ ಸ್ಕೂಟರನ್ನು ತಪ್ಪಿಸಿಕೊಂಡು ರಸ್ತೆ ಬದಿಗೆ ಬಂದಿದ್ದು, ಈ ವೇಳೆ ರಸ್ತೆ ಬದಿಯ ಅಂಗಡಿ ಮುಂದೆ ಇರಿಸಿದ್ದ ಕೋಲ್ಡ್ ಡ್ರಿಂಕ್ಸ್ ಬಾಕ್ಸ್ ಡಿಕ್ಕಿಯಾಗಿ ಬೈಕ್ ಪಲ್ಟಿಯಾಗಿತ್ತು. ಈ ಘಟನೆಗೆ ರಸ್ತೆಯನ್ನು ಅತಿಕ್ರಮಿಸಿಕೊಂಡು ಕಟ್ಟಿದ್ದ ಅಂಗಡಿ ಮತ್ತು ಅಂಗಡಿ ವ್ಯಾಪಾರಿ ಕೋಲ್ಡ್ ಡ್ರಿಂಕ್ಸ್ ಇನ್ನಿತರ ವಸ್ತುಗಳನ್ನು ರಸ್ತೆಯಲ್ಲೇ ಇರಿಸಿದ್ದೂ ಕಾರಣ. ಪರೋಕ್ಷವಾಗಿ ಮಹಾನಗರ ಪಾಲಿಕೆಯ ಬೇಜಾವಾಬ್ದಾರಿಯೇ ಕಾರಣವಾಗುತ್ತದೆ. ರಸ್ತೆ ಅತಿಕ್ರಮಿಸಿಕೊಂಡು ಕಟ್ಟಿರುವ ಕಟ್ಟಡಗಳು, ರಸ್ತೆಯಲ್ಲೇ ಅಂಗಡಿ ಸಾಮಾನುಗಳನ್ನು ಇರಿಸಿಕೊಂಡು ವ್ಯಾಪಾರ ನಡೆಸುತ್ತಿರುವುದು ಅಪಘಾತಕ್ಕೆ ಕಾರಣ.
ಇಂದು ಲಾಕ್ಡೌನ್ ಆಗಿದ್ದರಿಂದ ಅಂಗಡಿ ಮುಚ್ಚಿತ್ತು. ಇಲ್ಲದಿರುತ್ತಿದ್ದರೆ, ಅಂಗಡಿ ಮುಂದೆ ಮತ್ತಷ್ಟು ಸಾಮಗ್ರಿಗಳು ಇರುತ್ತಿದ್ದವು. ಅಲ್ಲದೆ, ಅಂಗಡಿಗೆ ಬರುತ್ತಿದ್ದ ಸಾರ್ವಜನಿಕರು ಅಲ್ಲಿರುತ್ತಿದ್ದರು. ಒಂದರ ಮೇಲೊಂದು ಕೋಲ್ಡ್ ಡ್ರಿಂಕ್ಸ್ ಬಾಕ್ಸನ್ನು ರಸ್ತೆಯಲ್ಲೇ ಇರಿಸಲಾಗಿತ್ತು. ವೇಗದಲ್ಲಿ ಬರುತ್ತಿದ್ದ ಬೈಕ್ ಸವಾರ ಸ್ಕೂಟರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬದಿಗೆ ಸರಿಸಿದ್ದಲ್ಲದೆ, ಎರಡು ಬೈಕಿನ ಮಧ್ಯೆ ನುಗ್ಗಿ ಬಂದಿದ್ದ. ಅಲ್ಲಿ ಕೋಲ್ಡ್ ಡ್ರಿಂಕ್ಸ್ ಬಾಕ್ಸ್ ಸಿಗದೇ ಇರುತ್ತಿದ್ದರೆ ಅಪಘಾತ ಆಗದೇ ಪಾರಾಗುತ್ತಿದ್ದನೋ ಏನೋ..
ಈ ರೀತಿಯ ಟೀಕೆ, ಟಿಪ್ಪಣಿಗಳು, ಮಹಾನಗರ ಪಾಲಿಕೆಯ ಬೇಜವಾಬ್ದಾರಿಯಿಂದ ಅಮಾಯಕನ ಸಾವು ಆಗಿದೆ ಎನ್ನುವ ನಿಂದನೆ ಕೇಳಿಬಂದಿದೆ. Wakeup MCC ಎನ್ನುವ ಹೆಸರಲ್ಲಿ Facebook ಟ್ರೆಂಡ್ ಮಾಡಿ, ಅದನ್ನು ಸಂಸದರು, ಶಾಸಕರ ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡುತ್ತಿದ್ದಾರೆ. ಅಧಿಕಾರಿ ವರ್ಗಕ್ಕೂ ಈ ರೀತಿಯ ಹ್ಯಾಷ್ ಟ್ಯಾಗ್ ನೀಡಲಾಗುತ್ತಿದ್ದು, ಇನ್ನಾದರೂ ರಸ್ತೆ ಬದಿಯ ಅತಿಕ್ರಮಿತ ಕಟ್ಟಡಗಳನ್ನು ತೆರವುಗೊಳಿಸಿ ಎನ್ನುವ ಒತ್ತಾಯ ಮಾಡುತ್ತಿದ್ದಾರೆ.
ಅಪಘಾತದಲ್ಲಿ ಪ್ರಶಾಂತ್ ಎಂಬ ಕೆಪಿಟಿ ಬಳಿಯ ಶರ್ಬತ್ ಕಟ್ಟೆ ನಿವಾಸಿ, ಕೆಟಿಎಂ ಬೈಕಿನಲ್ಲಿ ಬಂದು ಪಲ್ಟಿಯಾಗಿ ಸಾವನ್ನಪ್ಪಿದ್ದ. ಅದರ ಸಿಸಿಟಿವಿ ವಿಡಿಯೋ ಅದೇ ಅಂಗಡಿ ಮುಂದಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು ಅಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟಿತ್ತು. ದುರಂತಕ್ಕೆ ಏನೆಲ್ಲಾ ಕಾರಣ ಎಂಬುದನ್ನು ವಿಡಿಯೋ ತೋರಿಸುತ್ತಿದ್ದು ಸಾರ್ವಜನಿಕರು ಆಡಳಿತದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೆಟಿಎಂ ಬೈಕ್ ಸ್ಪೋರ್ಟ್ ಮಾಡೆಲ್ ಬೈಕ್ ಆಗಿರುವುದರಿಂದ ಸಾಧಾರಣವಾಗಿ ನೂರರ ಮೇಲಿನ ವೇಗದಲ್ಲೇ ಸಂಚರಿಸುತ್ತದೆ. ಅಪಘಾತಕ್ಕೆ ಬೈಕ್ ಸವಾರನ ವೇಗದ ಜೊತೆ ಮತ್ತು ಅಲ್ಲಿನ ಪರಿಸ್ಥಿತಿಯೂ ಕಾರಣ ಎನ್ನುವುದು ಕಂಡುಬರುತ್ತಿದೆ.
MCC sole responsible for the accident and death of Prashanth in Padavinangady alleges the most popular troll Facebook pages. Facebook pages trends with #wakeupmcc and has tagged top leaders of Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am