ಬ್ರೇಕಿಂಗ್ ನ್ಯೂಸ್
29-04-21 04:57 pm Mangalore Correspondent ಕರಾವಳಿ
ಮಂಗಳೂರು, ಎ.29: ದೇಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದಂತೆ ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ಮಂಗಳೂರಿನಲ್ಲಿ ಕೋವಿಡ್ ಲಸಿಕೆಯಲ್ಲಿ ತೀವ್ರ ಕೊರತೆ ಕಾಣಿಸಿಕೊಂಡಿದೆ.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದು ಲಸಿಕೆ ಕಡಿಮೆಯಾದ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸರಕಾರ ಮತ್ತು ವೈದ್ಯಕೀಯ ಸಿಬಂದಿಗೆ ಹಿಡಿಶಾಪ ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕಾಂಗ್ರೆಸ್ ನಾಯಕರು ಬಳಿಕ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಜನರಿಗೆ ಲಸಿಕೆ ನೀಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ಡಿಎಚ್ಓ ಡಾ. ಕಿಶೋರ್ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯಕ್ಕೆ ಕೇವಲ ಎಂಟು ಸಾವಿರ ಲಸಿಕೆ ಮಾತ್ರ ಇದೆಯಂತೆ. ಅದರಲ್ಲೂ ಕೋ ವ್ಯಾಕ್ಸಿನ್ 300 ಮಾತ್ರ ಇದೆ. ಕೋವಿಶೀಲ್ಡ್ ಲಸಿಕೆ ಎಂಟು ಸಾವಿರ ಇದೆಯಂತೆ. ತಾಲೂಕು ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುರುವಾರ ಲಸಿಕೆ ನೀಡುವುದಿಲ್ಲ. ಮಕ್ಕಳಿಗೆ ಇಂಜೆಕ್ಷನ್ ನೀಡುವ ದಿನವಾಗಿದ್ದರಿಂದ ಲಸಿಕೆ ನೀಡುವುದಕ್ಕೆ ವಿನಾಯ್ತಿ ಇದೆ. ಆದರೆ, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವಾರದ ಎಲ್ಲ ದಿನಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಲಸಿಕೆ ಹಾಕಿಸಲು ವೆನ್ಲಾಕ್ ಆಸ್ಪತ್ರೆಗೆ ಹೆಚ್ಚು ಮಂದಿ ಆಗಮಿಸಿದ್ದರು.
ಒಬ್ಬ ವ್ಯಕ್ತಿಗೆ ಮೊದಲ ಡೋಸ್ ಕೋವ್ಯಾಕ್ಸಿನ್ ಕಂಪನಿಯದ್ದು ನೀಡಿದ್ದರೆ, ಎರಡನೇ ಡೋಸ್ ಕೂಡ ಅದನ್ನೇ ನೀಡಬೇಕಾಗುತ್ತದೆ. ವೆನ್ಲಾಕ್ ಆಸ್ಪತ್ರೆಗೆ ಕೋವ್ಯಾಕ್ಸಿನ್ ಎರಡನೇ ಡೋಸಿಗಾಗಿ ಬಂದಿದ್ದವರಿಗೆ ಲಸಿಕೆ ಸಿಗದೆ ವಾಪಸಾಗಿದ್ದಾರೆ. ಈಗಿನ ಬೇಡಿಕೆ ಎಷ್ಟಿದೆಯಂದ್ರೆ, ಜಿಲ್ಲೆಯಲ್ಲಿ ದಿನವೊಂದಕ್ಕೆ ಸರಾಸರಿ ಎಂಟು ಸಾವಿರ ಮಂದಿ ಲಸಿಕೆ ಹಾಕಿಸಲು ಬರುತ್ತಿದ್ದಾರೆ. ಹೀಗಾಗಿ ಲಸಿಕೆ ಸಂಗ್ರಹದಲ್ಲಿ ಕೊರತೆ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಈ ಬಗ್ಗೆ ಡಿಎಚ್ ಓ ಬಳಿ ಕೇಳಿದರೆ, ಬೆಂಗಳೂರಿನಲ್ಲಿ ಕೋವಿಶೀಲ್ಡ್ ಲಸಿಕೆಯ ಸಂಗ್ರಹ ಇದೆ. ಈಗಾಗ್ಲೇ ಮಂಗಳೂರಿನಿಂದ ಲಸಿಕೆ ತರಲು ವಾಹನ ಕಳಿಸಿದ್ದು, ಶುಕ್ರವಾರ ತಲುಪಲಿದೆ ಎಂದಿದ್ದಾರೆ. ಆದರೆ, 20 ಸಾವಿರ ಅಥವಾ 30 ಸಾವಿರ ಲಸಿಕೆ ಬಂದರೆ, ಇದೇ ರೀತಿಯ ಬೇಡಿಕೆ ಕಂಡುಬಂದರೆ ಅದನ್ನು ಪೂರೈಸುವುದು ಕಷ್ಟ ಎನ್ನುವ ಸ್ಥಿತಿಯಿದೆ. ಇದರ ನಡುವೆಯೇ ಕೇಂದ್ರ ಸರಕಾರ ಮೇ 1ರಿಂದಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಿಸುವ ಮಾತು ಹೇಳಿದೆ. ಅಷ್ಟು ಪ್ರಮಾಣದಲ್ಲಿ ಲಸಿಕೆ ರೆಡಿಯಾಗಿಲ್ಲವೇ ಅಥವಾ ಲಸಿಕೆ ಪೂರೈಕೆ ಆಗುತ್ತಿಲ್ಲವೇ ಎಂಬ ಬಗ್ಗೆ ಮಾಹಿತಿಗಳಿಲ್ಲ. ಸದ್ಯಕ್ಕಂತೂ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವುದು ಕಷ್ಟ ಎನ್ನುವ ಮಾತು ಕೇಳಿಬರುತ್ತಿದೆ.
Amid janata curfew in Mangalore hundreds of people throng for covid vaccine but then are disappointed due to Shortage of vaccine in Mangalore. People stand in large que curse govt for their negligence.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am