ಬ್ರೇಕಿಂಗ್ ನ್ಯೂಸ್
29-04-21 02:50 pm Mangalore Correspondent ಕರಾವಳಿ
ಉಳ್ಳಾಲ, ಎ.29 : ಪತಿ ಮೃತಪಟ್ಟ ಎರಡು ಗಂಟೆಗಳ ಅಂತರದಲ್ಲಿ ಪತ್ನಿಯೂ ಕೊನೆಯುಸಿರೆಳೆದ ಘಟನೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಕಾಂಗ್ರೆಸ್ ಮುಖಂಡ ನಝೀರ್ ಅಹ್ಮದ್(62) ಮತ್ತು ಅವರ ಪತ್ನಿ ಜಮೀಲಾ(54) ಮೃತಪಟ್ಟ ದಂಪತಿಯಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ನಝೀರ್ ಅಹ್ಮದ್ ಅವರಿಗೆ ಬುಧವಾರ ತಡರಾತ್ರಿ ತೀವ್ರ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಅವರನ್ನು ಕೂಡಲೇ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ದಾರಿಮಧ್ಯೆ 12:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಬಳಿಕ ಮೃತದೇಹವನ್ನು ಮನೆಗೆ ತಂದಿದ್ದು, ಅಂತಿಮ ದರ್ಶನ ಪಡೆದ ನಝೀರ್ ಅಹ್ಮದ್ ಅವರ ಪತ್ನಿ ಜಮೀಲಾ ಅವರು ಪತಿಯ ಅಗಲುವಿಕೆಯಿಂದ ತೀವ್ರ ಖಿನ್ನರಾಗಿದ್ದರು. ತಡರಾತ್ರಿ 2:30ರ ಸುಮಾರಿಗೆ ಅವರಿಗೂ ಹೃದಯಾಘಾತ ಆಗಿದ್ದು ಅವರೂ ಕೊನೆಯುಸಿರೆಳೆದಿದ್ದಾರೆ.
ಮುಸ್ಲಿಂ ಲೀಗ್ ಉಳ್ಳಾಲ ವಲಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಝೀರ್ ಅಹ್ಮದ್ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ಬಾರಿ ನಗರ ಪಂಚಾಯಿತಿಗೆ ಸ್ಪರ್ಧಿಸಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿಯಾಗಿ, 15 ವರ್ಷಗಳ ಕಾಲ ಮೇಲಂಗಡಿ ಉರ್ದು ಶಾಲೆಯ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಉಳ್ಳಾಲ ನಗರಸಭೆಯ ಕುಡಿಯುವ ನೀರಿನ ಗುತ್ತಿಗೆದಾರರಾಗಿದ್ದರು. ಮೃತರ ದಫನ ಕಾರ್ಯ ಗುರುವಾರ ಉಳ್ಳಾಲ ದರ್ಗಾ ವಠಾರದ 'ಮಯ್ಯತ್ ಗಾರ್' ನಲ್ಲಿ ನೆರವೇರಿತು.
Their wife dies just in two hours of Husband death in Ullal, Mangalore. Nazir Ahmed (62) died of high BP and their wife Jamila (54) was in trauma after husband death also passed away.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 12:35 pm
HK News Staffer
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm