ಬ್ರೇಕಿಂಗ್ ನ್ಯೂಸ್
29-04-21 12:57 pm Headline Karnataka News Network ಕರಾವಳಿ
ಮಂಗಳೂರು, ಏ.29: ಭಾರತೀಯ ಕೋಸ್ಟ್ ಗಾರ್ಡ್ ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಅಮೋಘ ಕಾರ್ಯಾಚರಣೆಯ ಮೂಲಕ ದುರಂತಕ್ಕೀಡಾಗಿದ್ದ ತಮಿಳುನಾಡಿನ ಮೀನುಗಾರರನ್ನು ರಕ್ಷಣೆ ಮಾಡಿದೆ.
ಕಳೆದ ಎಪ್ರಿಲ್ 6ರಂದು ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆಂದು 11 ಮೀನುಗಾರರ ತಂಡ ಅರಬ್ಬೀ ಸಮುದ್ರದ ಕೇರಳ ಪಶ್ಚಿಮ ಭಾಗದ ಆಳ ಸಮುದ್ರಕ್ಕೆ ತೆರಳಿತ್ತು.

ಈ ವೇಳೆ ಬೇರೆ ಎಲ್ಲಾ ಮೀನುಗಾರಿಕಾ ಬೋಟ್ಗಳೊಂದಿಗೆ ಸಂಪರ್ಕ ಕಳೆದುಕೊಂಡ ಬೋಟ್ ದಿಕ್ಕು ತಪ್ಪಿ ಬೇರೆ ಕಡೆ ಸಂಚರಿಸಿತ್ತು. ಗಾಳಿಯ ಅಬ್ಬರಕ್ಕೆ ಮೀನುಗಾರರೂ ಕಂಗಲಾಗಿದ್ದರು. ಇತ್ತ ಮೀನುಗಾರಿಕಾ ಬೋಟ್ ಸಂಪರ್ಕಕ್ಕೆ ಸಿಗದೆ, ಬೋಟ್ ಸಮುದ್ರದಲ್ಲಿ ಮುಳುಗಿರುವ ಶಂಕೆ ಎಲ್ಲರಲ್ಲೂ ವ್ಯಕ್ತವಾಗಿತ್ತು.

ಇದೇ ವೇಳೆ ಇಂಡಿಯನ್ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಲಾಗಿದ್ದು, ಹಡಗಿನ ಮೂಲಕ ಕಾರ್ಯಚರಣೆ ಆರಂಭಿಸಿದ್ದಾರೆ. ಕೊನೆಗೆ ಗೋವಾ ಬಳಿಯಿಂದ 110 ಕಿಲೋ ಮೀಟರ್ ದೂರದಲ್ಲಿ ಸಮುದ್ರ ಮಧ್ಯೆ ಬೋಟ್ ಪತ್ತೆಯಾಗಿದ್ದು, ಏಪ್ರಿಲ್ 24 ರಂದು ಲಕ್ಷ ದ್ವೀಪದಿಂದ 370 ಕಿಲೋ ಮೀಟರ್ ದೂರದಿಂದ ಕರೆತರಲಾಗುತ್ತಿದೆ.

ಇಂಡಿಯನ್ ಕೋಸ್ಟ್ ಗಾರ್ಡ್ನ ಸಮುದ್ರ ಪ್ರಹರಿ ಎಂಬ ಹೆಸರಿನ ಹಡಗಿನ ಮೂಲಕ ಕಾರ್ಯಚರಣೆ ನಡೆಸಲಾಗಿತ್ತು. ಮೀನುಗಾರಿಕಾ ಬೋಟ್ ಪಾಕಿಸ್ಥಾನಕ್ಕೆ ಸೇರಿದ ಸಮುದ್ರ ವ್ಯಾಪ್ತಿಯಲ್ಲಿ ಇದ್ದ ಕಾರಣ ರಕ್ಷಣಾ ಕಾರ್ಯಚರಣೆಗೆ ಕರಾಚಿಯಿಂದ ನೆರವು ಪಡೆಯಲಾಗಿತ್ತು. ಮೀನುಗಾರಿಕಾ ಬೋಟ್ ಮೇ ೩ರ ಸುಮಾರಿಗೆ ತಮಿಳುನಾಡು ತಲುಪುವ ಸಾಧ್ಯತೆ ಇದೆ.
The Indian Coast Guard has located 11 Indian fishermen from Tamil Nadu who went missing around April 24, nearly 1,100 km from Goa. The boat had set sail on April 6 for deep sea fishing from the Thengapatnam Fishing harbor in Tamil Nadu for 30 days.
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm