ಬ್ರೇಕಿಂಗ್ ನ್ಯೂಸ್
29-04-21 11:42 am Mangalore Correspondent ಕರಾವಳಿ
ಮಂಗಳೂರು, ಎ.29: ರಾಜ್ಯದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಶಾಲೆ, ಕಾಲೇಜು, ಅದಕ್ಕೆ ಸಂಬಂಧಿಸಿದ ಹಾಸ್ಟೆಲ್ ಗಳು ಬಂದ್ ಆಗಿವೆ. ರಾಜ್ಯ ಸರಕಾರದ ಆದೇಶವನ್ನು ಬಹುತೇಕ ಕಾಲೇಜು ಆಡಳಿತ ಮಂಡಳಿಗಳು ಪಾಲನೆ ಮಾಡಿದ್ದರೆ, ಕೆಲವರು ತಮಗೇ ಬೇರೆಯದ್ದೇ ಕಾನೂನು ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನವರು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿಹಾಕಿದ್ದು, ಮನೆಗೆ ಕಳಿಸದೆ ಸರಕಾರದ ಕಾನೂನನ್ನು ಗಾಳಿಗೆ ತೂರಿದ್ದಾರೆ.
ಲಾಕ್ಡೌನ್ ಜೊತೆಗೆ ಕೊರೊನಾ ಭಯದಿಂದಾಗಿ ಮಕ್ಕಳ ಹೆತ್ತವರು ವಳಚ್ಚಿಲ್ ನಲ್ಲಿರುವ ಎಕ್ಸ್ ಪರ್ಟ್ ಕಾಲೇಜಿನ ಮುಂದೆ ಸೇರಿದ್ದಾರೆ. ಅಲ್ಲಿನ ಹಾಸ್ಟೆಲ್ ಹೊರಭಾಗದಲ್ಲಿ ಹೆತ್ತವರು ಸೇರಿದ್ದು, ಕಾಲೇಜಿನ ಆಡಳಿತ ಮಂಡಳಿ ಅವರನ್ನು ಒಳಗೆ ಬಿಡದೆ ದರ್ಪ ತೋರಿದ್ದಾಗಿ ಆರೋಪ ಕೇಳಿಬಂದಿದೆ.
ಬೆಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ಬೆಳಗಾವಿ, ಮೈಸೂರು ಹೀಗೆ ರಾಜ್ಯದ ನಾನಾ ಕಡೆಗಳಿಂದ ಹೆತ್ತವರು ತಮ್ಮ ಮಕ್ಕಳನ್ನು ಕರೆದೊಯ್ಯಲು ಬಂದಿದ್ದಾರೆ. ಹಾಸ್ಟೆಲ್ ಒಳಗೆ ಕೆಲವು ಮಕ್ಕಳಿಗೆ ಕೊರೊನಾ ಸೋಂಕು ಬಂದಿದೆ ಎನ್ನಲಾಗುತ್ತಿದ್ದು, ತಮ್ಮ ಮಕ್ಕಳನ್ನು ಕರೆದೊಯ್ಯುತ್ತೇವೆ, ಮತ್ತೆ ಕಾಲೇಜು ಆರಂಭಗೊಂಡ ವೇಳೆ ಕರೆ ತರುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಆಡಳಿತ ಮಂಡಳಿಯವರು ಗೇಟ್ ಬಂದ್ ಮಾಡಿ, ವಿದ್ಯಾರ್ಥಿಗಳ ಹೆತ್ತವರನ್ನು ಒಳಗೆ ಬಿಟ್ಟುಕೊಳ್ಳದೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಇದರಿಂದ ಭಯಗೊಂಡಿರುವ ವಿದ್ಯಾರ್ಥಿಗಳ ಹೆತ್ತವರು ಹಾಸ್ಟೆಲ್ ಮುಂದೆ ಸೇರಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ವೇಳೆ, ಪೊಲೀಸರು ಕೂಡ ಬಂದಿದ್ದು, ಅಲ್ಲಿದ್ದ ಎಕ್ಸ್ ಪರ್ಟ್ ಕಾಲೇಜಿನ ಸಿಬಂದಿ ಜೊತೆ ಮಾತನಾಡಿದ್ದಾರೆ. ಆದರೆ, ಕಾಲೇಜಿನ ಸಿಬಂದಿ ಯಾರ ಮಾತನ್ನೂ ಕೇಳುತ್ತಿಲ್ಲ. ನಮ್ಮನ್ನು ಇಲ್ಲಿ ನಾಯಿ ತರ ಟ್ರೀಟ್ ಮಾಡಿದ್ದಾರೆ. ನಾವು ಲಕ್ಷಾಂತರ ಶುಲ್ಕ ಕೊಟ್ಟು ದೊಡ್ಡ ಕಾಲೇಜು ಅಂತ ಸೇರಿಸಿದ್ದೇವೆ. ಇವರು ನೋಡಿದ್ರೆ, ನಮ್ಮನ್ನು ಒಳಗೇ ಬಿಟ್ಟುಕೊಳ್ಳದೆ ಬೀದಿಗೆ ಹಾಕಿದ್ದಾರೆ. ಮಕ್ಕಳಿಗೆ ಧಮ್ಕಿ ಹಾಕುತ್ತಿದ್ದಾರೆ. ನಾವು 400-500 ಕಿಮೀ ದೂರದಿಂದ ಬಂದಿದ್ದೇವೆ. ರಾತ್ರಿ ವೇಳೆ, ಬಸ್ ಸಿಗದೆ ಟ್ಯಾಂಕರ್ ಸೇರಿದಂತೆ ಯಾವೆಲ್ಲಾ ವಾಹನ ಹಿಡಿದುಕೊಂಡು ಬಂದಿದ್ದೇವೆ. ಇಲ್ಲಿ ನೋಡಿದರೆ ಕಾಲೇಜಿನವರು ಸೊಕ್ಕು ತೋರಿಸುತ್ತಿದ್ದಾರೆ ಎಂದು ಅಲ್ಲಿ ಸೇರಿದ್ದ ವಿದ್ಯಾರ್ಥಿಗಳ ಪಾಲಕರು ಅಲವತ್ತುಕೊಂಡರು.
ಎಕ್ಸ್ ಪರ್ಟ್ ಸೇರಿದಂತೆ ಕೆಲವು ಕಾಲೇಜುಗಳು ಮಕ್ಕಳನ್ನು ಪಿಯುಸಿಗೆ ಸೇರಿಸಿಕೊಂಡು ಹಾಸ್ಟೆಲ್ ಸಹಿತ ಶಿಕ್ಷಣ ಕೊಡುತ್ತಾರೆ. ಅದರಿಂದ ಮಕ್ಕಳನ್ನು ತಮಗೆ ಬೇಕಾದಂತೆ ಓದಿಸಿಕೊಂಡು ಎಕ್ಸ್ ಪರ್ಟ್ ಆಗಿಸುತ್ತಾರೆ. ಆದರೆ, ಈಗಿನ ಸನ್ನಿವೇಶದಲ್ಲಿ ಮಕ್ಕಳನ್ನು ತಾವೇ ಕರೆದೊಯ್ಯುತ್ತೇವೆಂದು ಹೆತ್ತವರು ಬಂದರೆ, ಅವರಿಗೆ ಕಾಲೇಜಿನ ಆಡಳಿತ ಮಂಡಳಿ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ಬಗ್ಗೆ ಪಾಲಕರು ಕಾಲೇಜಿನ ವಿರುದ್ಧ ದೂರು ನೀಡಿದರೆ, ಕ್ರಮ ಜರುಗಿಸಬಹುದಾಗಿದೆ.
Mangalore Parents protest at expert college campus valachil as students are not being let out to homes after lockdown. Kankanady rural Circle inspector John D'souza and the team have arrived at the spot.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am