ಬ್ರೇಕಿಂಗ್ ನ್ಯೂಸ್
25-04-21 09:44 pm Mangaluru correspondent ಕರಾವಳಿ
ಮಂಗಳೂರು, ಎ.25: ವೀಕೆಂಡ್ ಕರ್ಫ್ಯೂ ನಡುವೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು 47 ಜೋಡಿಗಳು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿವೆ.
ಕಟೀಲು ದೇಗುಲದಲ್ಲಿ ಮದುವೆಯಾಗಲು 88 ಮಂದಿ ನೋಂದಣಿ ಮಾಡಿದ್ದರು. ಆದರೆ ವೀಕೆಂಡ್ ಲಾಕ್ಡೌನ್ ಕಾರಣದಿಂದ 47 ಜೋಡಿಗಳು ಮಾತ್ರ ವಿವಾಹವಾಗಿದ್ದಾರೆ.
ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ದೇವಳದ ಆಡಳಿತ ಮಂಡಳಿಯವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮದುವೆಯಲ್ಲಿ ಭಾಗವಹಿಸಲು ವಧೂವರರ ಕಡೆಯಿಂದ ಒಟ್ಟು 10 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅದರಂತೆ ಇಂದು ಕೋವಿಡ್ ನಿಯಮದ ರೀತಿ ವಿವಾಹ ಕಾರ್ಯ ನಡೆದಿದ್ದು ಜನಸಂದಣಿಯನ್ನು ನಿಭಾಯಿಸಲು ದೇವಳದ ಸರಸ್ವತೀ ಸದನ, ಮಹಾಲಕ್ಷೀ ಸದನ ಮತ್ತು ಅನ್ನಛತ್ರದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ದೇವರ ದರ್ಶನಕ್ಕಾಗಿ ದೇಗುಲದ ಪ್ರವೇಶ ನಿಷೇಧಿಸಲಾಗಿತ್ತು. ಹೊರ ಭಾಗದಿಂದಲೇ ನವ ಜೋಡಿಗಳು ದೇವರಿಗೆ ನಮಸ್ಕರಿಸಲು ಅವಕಾಶ ಕಲ್ಪಿಸಲಾಗಿತ್ತು. ಕಟೀಲು ದೇವಳದಲ್ಲಿ ಸಾಮಾನ್ಯವಾಗಿ ಮದುವೆಯ ಧಾರೆ ನಡೆದು, ಹೊರಗಡೆಯ ಹಾಲ್ ನಲ್ಲಿ ರಿಸೆಪ್ಷನ್ ನಡೆಸುತ್ತಿದ್ದರು. ಆದರೆ, ಈ ಬಾರಿ ಹಾಲ್ ಗಳಲ್ಲಿ ಮದುವೆ ನಡೆಯುವುದಿದ್ದರೂ 50 ಮಂದಿಗಷ್ಟೇ ಅವಕಾಶ ನೀಡಲಾಗಿತ್ತು. ಹೀಗಾಗಿ ಹೆಚ್ಚಿನ ಜೋಡಿಗಳು ಕಟೀಲಿನಲ್ಲೇ ಮದುವೆಯಾಗಿ ಅಲ್ಲಿಯೇ ಎಲ್ಲವನ್ನೂ ಮುಗಿಸಿದ್ದಾರೆ. ಕೆಲವರು ಮದುವೆಯ ಧಾರೆ ನಡೆದ ಬಳಿಕ ಮನೆಗೆ ತೆರಳಿ, ಮದುವೆ ಸಂಭ್ರಮ ಮಾಡಿದ್ದಾರೆ. ಕೆಲವರು ಮದುವೆಯನ್ನೇ ರದ್ದು ಪಡಿಸಿ ಮುಂದೂಡಿಕೆ ಮಾಡಿದ್ದರು.
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಅತಿ ಹೆಚ್ಚು ಮಂದಿ ಎ.25 ಮತ್ತು 26 ರಂದು ಮದುವೆಗೆ ದಿನ ನಿಗದಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಕೊರೊನಾ ಲಾಕ್ಡೌನ್ ಮದುವೆ ಸಂಭ್ರಮಕ್ಕೆ ಎಳ್ಳು ನೀರು ಬಿಟ್ಟಿದೆ.
Covid Weekend Curfew in Karnataka Mangalore administration curtails 44 Marriages that was in Kateel temple today to 10.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am