ಬ್ರೇಕಿಂಗ್ ನ್ಯೂಸ್
25-04-21 12:39 pm Mangaluru correspondent ಕರಾವಳಿ
ಮಂಗಳೂರು, ಎ.25: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ನಗರ ಇಂದು ಕೂಡ ಪೂರ್ತಿ ಸ್ತಬ್ಧವಾಗಿದೆ. ಬೆಳಗ್ಗೆ ಹತ್ತು ಗಂಟೆ ವರೆಗೆ ಅಗತ್ಯ ಸಾಮಗ್ರಿಗಳ ಅಂಗಡಿಗಳು ತೆರೆದಿದ್ದವು. ಆಬಳಿಕ ಎಲ್ಲವೂ ಬಂದ್ ಆಗುತ್ತಿದ್ದಂತೆ ನಗರದಲ್ಲಿ ಪೂರ್ತಿ ಅಘೋಷಿತ ಬಂದ್ ವಾತಾವರಣ ನೆಲೆಸಿತು.
ಮಂಗಳೂರು ನಗರದ ಪ್ರಮುಖ ವೃತ್ತಗಳು ಎರಡನೇ ದಿನವೂ ಬಿಕೋ ಎನ್ನತೊಡಗಿದವು. ಯಾವುದೇ ವಾಹನಗಳು ಓಡಾಡುತ್ತಿರಲಿಲ್ಲ. ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಮಾತ್ರ ಓಡಾಡುತ್ತಿದ್ದರು.







ನಿನ್ನೆಯಷ್ಟೇ ಕೋವಿಡ್ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಮಂಗಳೂರಿಗೆ ತುರ್ತು ಭೇಟಿ ನೀಡಿ, ಕೋವಿಡ್ ಸ್ಥಿತಿಗತಿಯನ್ನು ಅವಲೋಕಿಸಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ನಿಂಬಾಳ್ಕರ್ ಕೋವಿಡ್ ನೋಡಲ್ ಅಧಿಕಾರಿಯಾಗಿದ್ದು ಕರಾವಳಿಯ ಸ್ಥಿತಿಗತಿ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ನೀಡಿದ್ದಾರೆ. ವರದಿ ಆಧರಿಸಿ ರಾಜ್ಯ ಸರಕಾರ ಲಾಕ್ಡೌನ್ ಬಗ್ಗೆ ನಿರ್ಧಾರಕ್ಕೆ ಬರಲಿದೆ.
ಈಗಾಗ್ಲೇ ರಾಜಧಾನಿ ಬೆಂಗಳೂರಿನಲ್ಲಿ ಲಾಕ್ಡೌನ್ ಮುಂದುವರಿಸುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಈ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಇದರ ಜೊತೆ ಇಡೀ ರಾಜ್ಯವನ್ನು ಲಾಕ್ ಮಾಡುತ್ತಾರೆಯೇ ಅಥವಾ ಸೋಂಕು ಹೆಚ್ಚಿರುವ ಕಡೆ ಮಾತ್ರ ಪೂರ್ತಿ ಲಾಕ್ಡೌನ್ ಇರುತ್ತಾ ಎನ್ನುವ ಬಗ್ಗೆ ಇಂದು ಸಂಜೆ ನಿರ್ಧಾರವಾಗಲಿದೆ.
ಬೆಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆದು ನಿರ್ಧಾರ ಹೊರಬೀಳಲಿದೆ.
ಕಳೆದ ವರ್ಷದ ರೀತಿ ಲಾಕ್ಡೌನ್ ಪೂರ್ತಿಯಾಗಿ ಮುಂದುವರಿಸುವ ಸಾಧ್ಯತೆ ಕಂಡುಬಂದಿದ್ದು ಈ ಬಗ್ಗೆ ಸಾಮಾನ್ಯ ಜನರಲ್ಲಿ ಭಯ ಆವರಿಸಿದೆ.
Day 1 Photo Gallery: ಮಂಗಳೂರು ಸಂಪೂರ್ಣ ಸ್ತಬ್ಧ ; ರಸ್ತೆಗಳೆಲ್ಲ ಖಾಲಿ ಖಾಲಿ, ಅಘೋಷಿತ ಬಂದ್ ವಾತಾವರಣ ! ತಾವಾಗೇ ಮನೆ ಸೇರಿದ ಜನ
Mangalore Sunday second day weekend curfew 2021 photo gallery city found abandoned. The city's roads wore a deserted looks as shops and establishments kept their shutters down.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm