ಬ್ರೇಕಿಂಗ್ ನ್ಯೂಸ್
24-04-21 02:36 pm Udupi Correspondent ಕರಾವಳಿ
ಉಡುಪಿ, ಎ.24: ಎಲ್ಲೆಡೆ ಕೋವಿಡ್ ಜಾಗೃತಿ, ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿರುವ ಮಧ್ಯೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮೆಹಂದಿ ಕಾರ್ಯಕ್ರಮಮದಲ್ಲಿ ಭಾಗಿಯಾಗಿ ಸುದ್ದಿಯಾಗಿದ್ದಾರೆ. ಉಡುಪಿಯಲ್ಲಿ ಬೀದಿಗಿಳಿದು ಜನರನ್ನು ರೈಟ್ ಲೆಫ್ಟ್ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿಯೇ ಸ್ವತಃ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಇಲ್ಲದೆ ಮೆಹಂದಿಯಲ್ಲಿ ಪಾಲ್ಗೊಂಡಿದ್ದ ಫೋಟೊವನ್ನು ಮುಂದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಜನರು ಭಾರೀ ಕೀಟಲೆ ಮಾಡಿದ್ದಾರೆ.
ಎಎಸ್ಪಿ ಒಬ್ಬರ ಪುತ್ರಿಯ ಮದುವೆಯ ಮೆಹಂದಿ ಕಾರ್ಯಕ್ರಮ ಹಾಲ್ ಒಂದರಲ್ಲಿ ನಡೆದಿದ್ದು, ಅದರಲ್ಲಿ ಜಿಲ್ಲಾಧಿಕಾರಿ ಡಾ.ಕೆ. ಜಗದೀಶ್ ಪಾಲ್ಗೊಂಡಿದ್ದ ಫೋಟೋ ವೈರಲ್ ಆಗಿತ್ತು. ಮಾಸ್ಕ್ ಹಾಕದೇ ಹುಡುಗಿ ಮತ್ತು ಇತರ ಸಂಬಂಧಿಕರ ಜೊತೆ ಅಕ್ಕ ಪಕ್ಕದಲ್ಲಿ ನಿಂತಿದ್ದ ಫೋಟೋದ ಬಗ್ಗೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಈ ಬಗ್ಗೆ ಆಕ್ರೋಶದ ಮಾತುಗಳನ್ನು ಬರೆದಿದ್ದಾರೆ.
ಮೊನ್ನೆಯಷ್ಟೇ ಬಸ್ಸಿನಲ್ಲಿ ಹೋಗುತ್ತಿದ್ದ ಕಾಲೇಜು ಹುಡುಗಿಯರನ್ನು ಅರ್ಧಕ್ಕೆ ಇಳಿಸಿ, ಕೋವಿಡ್ ನಿಯಮದ ಪ್ರಕಾರ ಬಸ್ಸಿನಲ್ಲಿ ನಿಂತುಕೊಂಡು ಸಾಗುವಂತಿಲ್ಲ. ಬಸ್ಸಿನಲ್ಲಿ ಇಷ್ಟೊಂದು ಮಂದಿ ಹೋಗುವುದಾದರೆ ಕೋವಿಡ್ ನಿಮಯ ಎಲ್ಲಿ ಪಾಲನೆಯಾಗುತ್ತದೆ ಎಂದು ಬಸ್ಸಿನಿಂದ ಅರ್ಧ ದಾರಿಯಲ್ಲೇ ನಿಲ್ಲಿಸಿ ವಿದ್ಯಾರ್ಥಿನಿಯರನ್ನು ಗದರಿದ್ದರು. ಇದೇ ವೇಳೆ, ಕೆಲವು ವಿದ್ಯಾರ್ಥಿನಿಯರು ನಾವು ತುಂಬ ದೂರ ಹೋಗಬೇಕು. ಈ ಬಸ್ ಬಿಟ್ಟರೆ ನಮಗೆ ಆನಂತರ ಬಸ್ ಸಿಗಲ್ಲ. ಮನೆ ತಲುಪುವಾಗ ಲೇಟ್ ಆಗುತ್ತೆ. ಹೆಚ್ಚುವರಿ ಬಸ್ ಬಿಡದೆ ಏಕಾಏಕಿ ಬಸ್ಸಿನಿಂದ ಇಳಿಸಿದರೆ ಸಂಜೆಯ ಹೊತ್ತಿಗೆ ನಾವೇನು ಮಾಡಬೇಕು ಎಂದು ನೋವು ತೋಡಿಕೊಂಡಿದ್ದರು. ಇದರ ವಿಡಿಯೋ ಭಾರೀ ವೈರಲ್ ಆಗಿತ್ತಲ್ಲದೆ, ಜಿಲ್ಲಾಧಿಕಾರಿಯ ನಡೆಗೆ ವಿರೋಧವೂ ಕೇಳಿಬಂದಿತ್ತು.
ಇದೀಗ ಕಾನೂನು ಹೇರುವ, ಪಾಲನೆ ಮಾಡುವ ಜಿಲ್ಲಾಧಿಕಾರಿಯೇ ಸ್ವತಃ ಮಾಸ್ಕ್ ಹಾಕ್ಕೊಳ್ಳದೆ ಮೆಹಂದಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಜನರ ಕೈಗೆ ಅಸ್ತ್ರ ಸಿಕ್ಕಂತಾಗಿದೆ.
Social media is abuzz with the citizens of the district expressing rage against deputy commissioner (DC) G Jagadeesha reportedly not wearing a mask while attending the Mehendi program of the daughter of additional SP on the evening of Friday, April 23.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm