ಬ್ರೇಕಿಂಗ್ ನ್ಯೂಸ್
22-04-21 11:44 am Mangalore Correspondent ಕರಾವಳಿ
ಮಂಗಳೂರು, ಎ.22: ಚಾಲಕನ ಬೇಜವಾಬ್ದಾರಿಯಿಂದ ಕಸ ವಿಲೇವಾರಿ ಮಾಡುವ ಟ್ರಕ್ ಇಳಿಜಾರಿನಲ್ಲಿ ನೇರವಾಗಿ ನುಗ್ಗಿ ಬಂದು ನಾಲ್ಕಾರು ವಾಹನಗಳಿಗೆ ಡಿಕ್ಕಿಯಾಗಿದ್ದಲ್ಲದೆ, ಮಾರುಕಟ್ಟೆಯ ಅಂಗಡಿಗಳಿಗೆ ನುಗ್ಗಿದ ಘಟನೆ ಕಂಕನಾಡಿ ಮಾರುಕಟ್ಟೆಯಲ್ಲಿ ನಡೆದಿದೆ.


ಮಂಗಳೂರು ನಗರದಲ್ಲಿ ಕಸ ಹೆಕ್ಕಲು ಗುತ್ತಿಗೆ ಪಡೆದಿರುವ ಆಂಟನಿ ವೇಸ್ಟ್ ಕಂಪನಿಯ ಟ್ರಕ್ಕನ್ನು ಚಾಲಕ ಕಂಕನಾಡಿ ಮಾರುಕಟ್ಟೆ ಬಳಿ ನಿಲ್ಲಿಸಿ, ಕೆಳಕ್ಕೆ ಇಳಿದಿದ್ದ. ಹಿಂದಿನಿಂದ ಕಾರ್ಮಿಕರು ಕಸ ತುಂಬಿಸುತ್ತಿದ್ದರು. ಚಾಲಕ ವಾಹನವನ್ನು ನ್ಯೂಟ್ರಲ್ ನಲ್ಲಿರಿಸಿ ಇಳಿದಿದ್ದರಿಂದ ಟ್ರಕ್ ಕೆಳಗೆ ಇಳಿದಿದ್ದು, ಅಲ್ಲಿದ್ದ ಮೂರು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳ ಮೇಲೆ ಹರಿದಿದ್ದಲ್ಲದೆ, ಇಂಡಿಯನ್ ಚಿಕನ್ ಎನ್ನುವ ಕೋಳಿ ಮಾಂಸದ ಅಂಗಡಿಗೆ ನುಗ್ಗಿ ಜಖಂ ಮಾಡಿದೆ.



ಚಿಕನ್ ಶಾಪ್ ಎದುರಲ್ಲಿ ನಿಲ್ಲಿಸಿದ್ದ ಬೈಕ್ ಮತ್ತು ಸ್ಕೂಟರ್ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಅಂಗಡಿಯ ಇಬ್ಬರು ಸಿಬಂದಿ ಕಾಲಿಗೆ ಗಾಯಗೊಂಡಿದ್ದಾರೆ. ಟ್ರಕ್ ಅಂಗಡಿಯ ಮುಂಭಾಗಕ್ಕೆ ಬಡಿದು ನಿಂತಿದ್ದು, ಕೂಡಲೇ ಅದಕ್ಕೆ ಹತ್ತಿದ ಸ್ಥಳೀಯರು ವಾಹನವನ್ನು ಆಫ್ ಮಾಡಿದ್ದಾರೆ. ಘಟನೆ ಸಂದರ್ಭ ಹೆಚ್ಚು ಜನರು ಇಲ್ಲದ ಕಾರಣ ಪ್ರಾಣಾಪಾಯ ಆಗಿಲ್ಲ. ಸಾರ್ವಜನಿಕರು ಟ್ರಕ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ, ಆತ ಅಲ್ಲಿಂದ ಪರಾರಿಯಾಗಿದ್ದಾನೆ.



ಸ್ಥಳೀಯರ ಪ್ರಕಾರ, ಟ್ರಕ್ ಚಾಲಕ ಕೆಳಗಿಳಿದು ಮೊಬೈಲಲ್ಲಿ ಮಾತನಾಡುತ್ತಿದ್ದ. ಟ್ರಕ್ಕನ್ನು ನ್ಯೂಟ್ರಲ್ ನಲ್ಲಿರಿಸಿ ಕೆಳಕ್ಕೆ ಇಳಿದಿದ್ದೇ ತಪ್ಪು. ಆತನನ್ನು ಈ ಘಟನೆಗೆ ಹೊಣೆಯಾಗಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕಂಕನಾಡಿ ಮತ್ತು ಟ್ರಾಫಿಕ್ ಪೊಲೀಸರು ಆಗಮಿಸಿ ಲಾರಿಯನ್ನು ತೆರವು ಮಾಡಿ ವಶಕ್ಕೆ ಪಡೆದಿದ್ದಾರೆ.
Four Cars and two wheelers completely damaged after a Mcc Antony Waste truck entered a Chicken Shop in Kankanady Market in Mangalore. The accident took place as driver kept the truck in nutral and got down of the truck.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm