ಬ್ರೇಕಿಂಗ್ ನ್ಯೂಸ್
21-04-21 05:49 pm Mangalore Correspondent ಕರಾವಳಿ
ಮಂಗಳೂರು, ಎ.21: ಮಂಗಳೂರು ನಗರದಲ್ಲಿ ಕೋವಿಡ್ ನಿರ್ಬಂಧಗಳ ನೆಪದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚುತ್ತಿದ್ದರೆ, ಸ್ಕಿಲ್ ಗೇಮ್ ರೀತಿಯ ಇಸ್ಪೀಟ್ ಕ್ಲಬ್ ಗಳು ಸದ್ದಿಲ್ಲದೆ ಕಾರ್ಯಾಚರಿಸುತ್ತಿವೆ ಎನ್ನೋ ಮಾಹಿತಿ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆ ಕೆಎಸ್ಸಾರ್ಟಿಸಿ ಬಳಿ ಇರುವ ಸ್ಕಿಲ್ ಗೇಮ್ ಕಂ ಇಸ್ಪೀಟ್ ಕ್ಲಬ್ಬಿಗೆ ಪೊಲೀಸರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದರು. ದಾಳಿ ವಿಚಾರ ತಿಳಿದು ಅಲ್ಲಿದ್ದ ಮಂದಿ, ತಪ್ಪಿಸಿಕೊಂಡು ಅದೇ ಕಟ್ಟಡದ ಕೆಳಗಿದ್ದ ಬಾರ್ ಗೆ ನುಗ್ಗಿದ್ದರು. ಮಹಾನಗರ ಪಾಲಿಕೆ ಅಧಿಕಾರಿಗಳು ಬಾರ್ ಗೆ ನುಗ್ಗಿದಾಗ, ಅಲ್ಲಿ ಸೇರಿದ್ದ ಜನರನ್ನು ನೋಡಿ ಗರಂ ಆದ್ರು. ಕೋವಿಡ್ ನಿಯಮವನ್ನೇ ಉಲ್ಲಂಘಿಸಿ, ಇಷ್ಟೊಂದು ಮಂದಿಯನ್ನು ಸೇರಿಸಿ ಬಾರ್ ನಡೆಸುತ್ತಿದ್ದೀರಲ್ಲಾ ಎಂದು ಬಾರ್ ಗೆ ಬೀಗ ಜಡಿಯಲು ಮುಂದಾಗಿದ್ದಾರೆ. ಅಲ್ಲದೆ, ಸ್ಥಳದಲ್ಲೇ ಬಾರ್ ಗೆ ಸೀಲ್ ಹೊಡೆದು ಅಲ್ಲಿಂದ ತೆರಳಿದ್ದಾರೆ.
ಆದರೆ, ಬಿಜೆಪಿ ಮುಖಂಡನಿಗೆ ಸೇರಿದ ಅಲ್ಲಿನ ಇಸ್ಪೀಟ್ ಕ್ಲಬ್ಬಿಗೆ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿರಲಿಲ್ಲ. ಬಾರ್ ಮಾಲಕರು ಬಳಿಕ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳಲ್ಲಿ ಈ ಬಗ್ಗೆ ವಾಗ್ವಾದ ನಡೆಸಿದ್ದಾರೆ. ಆನಂತರ ಮರುದಿನ ಇಸ್ಪೀಟ್ ಕ್ಲಬ್ಬಿಗೂ ಬೀಗ ಜಡಿದಿದ್ದಾರೆ. ಈ ವೇಳೆ, ವಿಷ್ಯ ಹೊರಗೆ ಬಂದಿದ್ದು ಕೆಲವರು ಹೇಳುವ ಪ್ರಕಾರ ಮಂಗಳೂರು ನಗರದಲ್ಲಿ 12ಕ್ಕೂ ಹೆಚ್ಚು ಕಡೆ ಈ ರೀತಿಯ ಇಸ್ಪೀಟ್ ಕ್ಲಬ್ ಗಳು ಕಾರ್ಯಾಚರಣೆ ನಡೆಸುತ್ತಿವೆಯಂತೆ.
ಕಾರ್ಪೊರೇಟರ್ ವಿನಯರಾಜ್ ಹೇಳುವ ಪ್ರಕಾರ, ಮಂಗಳೂರು ನಗರದಲ್ಲಿ 12ಕ್ಕೂ ಹೆಚ್ಚು ಕಡೆ ಈ ರೀತಿಯ ಇಸ್ಪೀಟ್ ಕ್ಲಬ್ ಗಳಿವೆ. ಇದು ಇಲ್ಲಿನ ಪೊಲೀಸರಿಗೆ ಮತ್ತು ಕಾರ್ಪೊರೇಶನ್ ಅಧಿಕಾರಿಗಳಿಗೂ ಗೊತ್ತಿದೆ. ಈಗ ಯಾಕೆ ದಾಳಿ ನಡೆಸುವುದಿಲ್ಲ. ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲವೂ ಲೈಸನ್ಸ್ ಇಲ್ಲದೆ ನಡೆಯುತ್ತಿರುವ ದಂಧೆಗಳು. ಸ್ಕಿಲ್ ಗೇಮ್ ಎಂದು ಕೆಲವು ಕಡೆ ಲೈಸನ್ಸ್ ಪಡೆದಿದ್ದರೂ, ಅದರೊಳಗೆ ಇಸ್ಪೀಟ್ ಎಲೆಗಳ ಜೂಜಾಟ ನಡೆಯುತ್ತವೆ ಎನ್ನುತ್ತಾರೆ.
ಮಂಗಳಾದೇವಿ, ಬಂದರು, ಕಂಕನಾಡಿ, ಬಿಜೈ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಈ ರೀತಿಯ ಇಸ್ಪೀಟ್ ಅಡ್ಡೆಗಳಿದ್ದು, ಪೊಲೀಸರಿಗೆ ಮಾಮೂಲು ಕೊಟ್ಟುಕೊಂಡೇ ನಡೆಯುತ್ತಿವೆ. ಕಳೆದ ಬಾರಿ ಕೋವಿಡ್ ಲಾಕ್ಡೌನ್ ಇದ್ದಾಗಲೂ ಆಯಕಟ್ಟಿನ ಜಾಗಗಳಲ್ಲಿ ಈ ದಂಧೆ ನಡೆದಿತ್ತು. ಈಗಲೂ ಅದೇ ರೀತಿಯ ದಂಧೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಇದರಲ್ಲಿ ಕಾಂಗ್ರಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರಿದ್ದಾರೆ. ಬಿಜೆಪಿ ಪ್ರಭಾವಿ ನಾಯಕರ ಆಪ್ತರೇ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಮಿಷನರ್ ಸಾಹೇಬ್ರೇ ಮಂಗಳೂರಿನ ಇಸ್ಪೀಟ್ ಅಡ್ಡೆಗಳ ಸದ್ದು ನಿಮ್ಮ ಕಿವಿಗೆ ಬಿದ್ದಿಲ್ಲವೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
Amid Covid wave in Mangalore Ilegal skill games have been running without any fear in the city. Most of them are owned by BJP top leaders aides alleges Congress leader and corporater Vinay raj.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm