ಬ್ರೇಕಿಂಗ್ ನ್ಯೂಸ್
17-04-21 12:58 pm Udupi Correspondent ಕರಾವಳಿ
ಉಡುಪಿ, ಏ.17 : ಬಳ್ಳಾರಿ ಮೂಲದ ಮುಸ್ಲಿಂ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಪ್ರತಿ ವರ್ಷ ಚಂಡಿಕಾ ಹೋಮ ನೆರೆವೇರಿಸಿಕೊಂಡು ಬಂದಿದ್ದು ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದ್ದಾರೆ.
ಬಳ್ಳಾರಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿರುವ ಎಚ್. ಇಬ್ರಾಹಿಂ, ಸಾಜುದ್ದೀನ್ ಹಾಗೂ ಜರೀನಾ ಅವರ ಕುಟುಂಬಸ್ಥರು ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಬಂದು ತಾಯಿ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ನಡೆಸುತ್ತಿದ್ದಾರೆ. ಈಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್ ಹಾಗೂ ಪತ್ನಿಯೂ ವರ್ಷಕ್ಕೊಮ್ಮೆ ಚಂಡಿಕಾಹೋಮ ಮಾಡಿಸುತ್ತಿದ್ದು, ಧರ್ಮ ಸಾಮರಸ್ಯಕ್ಕೆ ದೊಡ್ಡ ನಿದರ್ಶನವಾಗಿ ನಿಂತಿದ್ದಾರೆ.

ಎಲ್ಲಾ ದೇವರು ಒಂದೇ ಎನ್ನುವ ಮನ್ಸೂರ್, ಹಿರಿಯರು ಮಾಡಿಕೊಂಡು ಬಂದ ಸೇವೆ ಹಾಗೂ ತಾಯಿ ಮೂಕಾಂಬಿಕೆಯ ಅನುಗ್ರಹದಿಂದ ಜೀವನದಲ್ಲಿ ಏಳಿಗೆ ಹೊಂದಿದ್ದೇನೆ ಎನ್ನುತ್ತಾರೆ. ಮನ್ಸೂರ್ ಹಾಗೂ ಅವರ ಪತ್ನಿ, ಮಕ್ಕಳು ಐದು ವರ್ಷಗಳಿಂದ ವರ್ಷಕ್ಕೊಮ್ಮೆ ಕೊಲ್ಲೂರಿಗೆ ಬಂದು ದೇವಿಯ ದರ್ಶನ ಪಡೆದು ಚಂಡಿಕಾಹೋಮ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನ್ಸೂರ್, ಮೂಕಾಂಬಿಕೆಯ ಸನ್ನಿಧಿಯಲ್ಲಿ ಪೂಜೆ, ಚಂಡಿಕಾಹೋಮ ನಡೆಸುವುದರಿಂದ ನಮಗೆ ಆತ್ಮಸಂತೃಪ್ತಿ ಲಭಿಸುತ್ತದೆ. ಅಷ್ಟಕ್ಕೂ ಎಲ್ಲಾ ದೇವರು ಒಂದೇ. ಅಮ್ಮನ ಅನುಗ್ರಹದಿಂದ ನಾವು ಸಂತೃಪ್ತಿಯ ಜೀವನ ನಡೆಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ವಿಶೇಷವಾದ ಶಕ್ತಿಯಿದೆ ಎಂದು ಹೇಳಿದ್ದಾರೆ.
A Muslim family from Ballari is offering Chandika Homa every year at the Sri Mookambika Devi temple at Kollur with dedication. Contractor H Ibrahim, a resident of a village near Ballari, Sajuddin, Zarina and their family members are visiting Kollur every year and offer Chandika Homa and special pooja. They believe that the service offered at the temple by their elders have brought prosperity in their life.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm