ಬ್ರೇಕಿಂಗ್ ನ್ಯೂಸ್
16-04-21 11:17 pm Mangaluru correspondent ಕರಾವಳಿ
ಮಂಗಳೂರು, ಎ.16 : ಅರಬ್ಬೀ ಸಮುದ್ರದಲ್ಲಿ ದುರಂತಕ್ಕೀಡಾದ ಬೋಟಿನಲ್ಲಿ ನಾಪತ್ತೆಯಾಗಿದ್ದ ಒಂಬತ್ತು ಮೀನುಗಾರರ ಪೈಕಿ ಮೂವರ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದೆ. ಉಳಿದ ಆರು ಮಂದಿಯ ಪತ್ತೆಗಾಗಿ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆ ಶೋಧ ಕಾರ್ಯಾಚರಣೆ ಮುಂದುವರಿಸಿದೆ.
ಕೋಸ್ಟ್ ಗಾರ್ಡ್ ಪಡೆಯು ‘ಐಎನ್ಎಸ್ ನಿರ್ದೇಶಕ್’ ಹಡಗಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಸಮುದ್ರದಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಶವಗಳನ್ನು ಎನ್ಎಂಪಿಟಿ ಬಂದರಿಗೆ ತರಲಾಗಿದ್ದು ಕರಾವಳಿ ಕಾವಲು ಪೊಲೀಸ್ ಪಡೆಗೆ ಹಸ್ತಾಂತರಿಸಲಾಗಿದೆ. ನಾಲ್ಕು ದಿನಗಳಿಂದ ಮೃತದೇಹಗಳು ನೀರಿನಲ್ಲಿದ್ದ ಕಾರಣ ಊದಿಕೊಂಡಿದ್ದಲ್ಲದೆ, ಗುರುತು ಸಿಗದಷ್ಟು ವಿಕಾರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟ ಮೂವರ ಮೃತದೇಹ ಎರಡು ದಿನಗಳ ಹಿಂದೆಯೇ ಪತ್ತೆಯಾಗಿದ್ದು ಅವನ್ನು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ಕಳಿಸಿ ಕೊಡಲಾಗಿತ್ತು. ರಕ್ಷಿಸಲ್ಪಟ್ಟ ಇತರ ಇಬ್ಬರನ್ನು ಕೂಡ ಅವರದೇ ಊರಿಗೆ ಕಳುಹಿಸಲಾಗಿತ್ತು.
ಇದೀಗ ನಾಲ್ಕು ದಿನಗಳ ಬಳಿಕ ಮೂರು ಮಂದಿಯ ಶವ ಸಿಕ್ಕಿದ್ದರೆ, ಇನ್ನು ಆರು ಮಂದಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ತಲಾ ಏಳು ಮಂದಿ ಬೋಟಿನಲ್ಲಿದ್ದರು ಎನ್ನೋ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಮೀನು ಕಾರ್ಮಿಕರ ಕುಟುಂಬದ ಸದಸ್ಯರು ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿಂಗಾಪುರದ ಹಡಗು ಡಿಕ್ಕಿಯಾಗಿ ಬೋಟ್ ದುರಂತ ; ಇಬ್ಬರ ರಕ್ಷಣೆ, ಮೂವರ ಶವ ಪತ್ತೆ , 9 ಮಂದಿ ನಾಪತ್ತೆ
The Coast guard team has found three dead bodies of the Missing fishermen and search for the rest six is on. A fishing boat capsized off Mangaluru coast afterr collision with a huge ship.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm