ಬ್ರೇಕಿಂಗ್ ನ್ಯೂಸ್
16-04-21 08:48 pm Mangaluru correspondent ಕರಾವಳಿ
ಮಂಗಳೂರು, ಎ.17: ಒಂದೆಡೆ ಕೊರೊನಾ ಸೋಂಕು ಹೆಚ್ಚುತ್ತಿದೆ ಎನ್ನುವ ವರದಿಗಳ ಮಧ್ಯೆಯೇ ಆಶಾದಾಯಕ ವಿಚಾರದ ಸುದ್ದಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಿಕ್ಕಿದೆ. ವರ್ಷದ ಹಿಂದೆಲ್ಲಾ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಆದವರನ್ನೆಲ್ಲ ಆಸ್ಪತ್ರೆಗೆ ಸೇರಿಸುವ ಪದ್ಧತಿ ಇತ್ತು. ಆದರೆ, ಕೊರೊನಾಗೆ ಮದ್ದು ಮತ್ತು ಲಸಿಕೆ ನೀಡುವಷ್ಟರ ಮಟ್ಟಿಗೆ ವೈದ್ಯ ಸಮುದಾಯ ಬೆಳೆದ ನಂತರ ಈಗ ಕೊರೊನಾ ಸೋಂಕಿತರನ್ನೆಲ್ಲ ಆಸ್ಪತ್ರೆಗೆ ಸೇರಿಸುವ ಪರಿಪಾಠ ಇಲ್ಲ. ಕೇವಲ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಸೇರಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ನೀಡಿರುವ ಮಾಹಿತಿ ಪ್ರಕಾರ, 1250 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಕಳೆದ ಒಂದು ವಾರದಲ್ಲಿ ದಿನದಲ್ಲಿ ನೂರಕ್ಕಿಂತ ಹೆಚ್ಚು ಮಂದಿಗೆ ಸೋಂಕು ಕಂಡುಬರುತ್ತಿದೆ. ಗುರುವಾರ ಒಂದೇ ದಿನ 166 ಮಂದಿ ಸೋಂಕಿತರು ಕಂಡುಬಂದಿದ್ದರು. ಆದರೆ, ಈ ಪೈಕಿ ಆಸ್ಪತ್ರೆಗೆ ದಾಖಲಾಗಿರುವುದು ಕೇವಲ 15 ಶೇ. ಜನ ಮಾತ್ರ. ಗುರುವಾರದ ವರೆಗಿನ ಮಾಹಿತಿ ಪ್ರಕಾರ, ಖಾಸಗಿ ಮತ್ತು ಸರಕಾರಿ ಆಸ್ಪತ್ರೆ ಸೇರಿ ಒಟ್ಟು 241 ಜನ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 13 ಜನ ವೆಂಟಿಲೇಟರ್, 41 ಜನ ಐಸಿಯುನಲ್ಲಿದ್ದಾರೆ. 178 ಮಂದಿ ಸಾಮಾನ್ಯ ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಒಂದು ವಾರದಲ್ಲಿ ಕೊರೊನಾ ಸೋಂಕಿತರು ಮರಣ ಹೊಂದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆನಂತರದ ಕೆಟಗರಿಯಲ್ಲಿರುವ ಮಂಗಳೂರು, ಕಲಬುರ್ಗಿಯಲ್ಲಿ ಹೆಚ್ಚು ಅಲರ್ಟ್ ಮಾಡಲಾಗಿದೆ. ಮಂಗಳೂರಿನಲ್ಲಿ ಹೀಗಾಗಿ ಆರೋಗ್ಯ ಇಲಾಖೆಯಿಂದ ಬೆಡ್ ಸಾಮರ್ಥ್ಯದ ಲಿಸ್ಟ್ ಮಾಡಲಾಗಿದೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ 377 ಬೆಡ್ ರೆಡಿ ಇದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗಾಗಿ 4978 ಬೆಡ್ ಗಳನ್ನು ರೆಡಿ ಇಡಲಾಗಿದೆ. ಸದ್ಯಕ್ಕೆ ಈ ಬೆಡ್ ಗಳಲ್ಲಿ ಕೇವಲ 15 ಶೇಕಡಾ ಅಷ್ಟೇ ಭರ್ತಿಯಾಗಿದೆ.
ಒಂದೆಡೆ ಕೊರೊನಾ ರಣಕೇಕೆ, ಮರಣ ಮೃದಂಗ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದರೂ, ಈ ಪೈಕಿ ಆಸ್ಪತ್ರೆಗೆ ದಾಖಲಾಗಿರುವುದು ಹತ್ತು ಶೇಕಡಾ ಮಂದಿಯೂ ಇಲ್ಲ ಎನ್ನುವುದು ನಿಜಕ್ಕೂ ಸಿಹಿ ಸುದ್ದಿ. ಹೆಚ್ಚಿನ ಸೋಂಕಿತರು ಯಾವುದೇ ರೋಗ ಲಕ್ಷಣ ಇಲ್ಲದೇ ಇರುವವರಿದ್ದಾರೆ.
ಯುವಕರಿಗೇ ಹೆಚ್ಚು ಸೋಂಕು !
ಇದರ ಜೊತೆಗೆ, ಸದ್ಯಕ್ಕೆ ಸೋಂಕಿತರಲ್ಲಿ 70 ಶೇಕಡಾ ಮಂದಿ ಕೇವಲ ಯುವಕರಿದ್ದಾರೆ. 18ರಿಂದ 30 ವಯಸ್ಸಿನ ಒಳಗಿನವರಿಗೆ ಸೋಂಕು ಹೆಚ್ಚು ತಗಲುತ್ತಿದೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡದೇ ಇರುವುದು ಮತ್ತು ನಿಯಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಯುವಕರು ಹೆಚ್ಚು ಸೋಂಕಿಗೆ ಒಳಗಾಗುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.
Amid 1250 active cases in Mangalore Only 15 percent of covid patients are admitted to hospital in whcih 85 percent have self isolated in home.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm