ಬ್ರೇಕಿಂಗ್ ನ್ಯೂಸ್
15-04-21 04:57 pm Mangalore Correspondent ಕರಾವಳಿ
ಮಂಗಳೂರು, ಎ.15: ನಗರದ ಬಳ್ಳಾಲ್ ಬಾಗ್ ನಲ್ಲಿರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ಮಳಿಗೆ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಕಿ ಬಿದ್ದಿದೆ ಎನ್ನಲಾಗುತ್ತಿದ್ದು, ಕ್ಷಣಮಾತ್ರದಲ್ಲಿ ಬೆಂಕಿ ಹರಡಿಕೊಂಡು ಮೇಲ್ಭಾಗದ ಫೋಮ್ ಸೀಲಿಂಗನ್ನು ಸುಟ್ಟು ಹಾಕಿದೆ.
ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಹೊಸ ರೀತಿಯ ಮಳಿಗೆ ಆಗಿತ್ತು. ಸಿಟಿ ಸೆಂಟರ್, ಬಿಗ್ ಬಝಾರ್ ನಲ್ಲಿರುವ ರೀತಿ ಎಲ್ಲವನ್ನೂ ಒಳಗೊಂಡ ಸೂಪರ್ ಮಾರ್ಕೆಟ್. ಆದರೆ, ಯಾವುದೇ ಬಿಲ್ಡಿಂಗ್ ಕಟ್ಟದೆ ನೆಲದಲ್ಲೇ ಅಷ್ಟು ದೊಡ್ಡ ಮಾದರಿಯಲ್ಲಿ ಹೈಪರ್ ಮಾರ್ಕೆಟ್ ಸ್ಥಾಪಿಸಿದ್ದು ಮಂಗಳೂರಿನಲ್ಲಿ ಅದೇ ಮೊದಲು. ಜೀನಸು, ತರಕಾರಿಯಿಂದ ತೊಡಗಿ ಮನೆ, ಕಚೇರಿಗೆ ಬೇಕಾಗುವ ಎಲ್ಲ ಸಾಮಗ್ರಿಗಳು ಅಲ್ಲಿ ದೊರೆಯುತ್ತಿದ್ದವು. ಹೀಗಾಗಿ ಕಡಿಮೆ ಅವಧಿಯಲ್ಲಿ ನಗರದ ಜನರ ಪಾಲಿಗೆ ಮೆಚ್ಚಿನ ಸೂಪರ್ ಮಾರ್ಕೆಟ್ ಆಗಿತ್ತು.
ಈಗ ಹತ್ತು ಗಂಟೆಗೆ ರಾತ್ರಿ ಕರ್ಫ್ಯೂ ವಿಧಿಸುವುದರಿಂದ ನಿನ್ನೆ ರಾತ್ರಿ 9.30ಕ್ಕೆ ಮಳಿಗೆ ಕ್ಲೋಸ್ ಮಾಡಿ ತೆರಳಿದ್ದೆವು. ಹತ್ತುವರೆ ಹೊತ್ತಿಗೆ ಹತ್ತಿರದ ಅಪಾರ್ಟ್ಮೆಂಟ್ ನಿವಾಸಿಗಳು ಮಳಿಗೆಯಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಕರೆ ಮಾಡಿ ತಿಳಿಸಿದ್ದಾರೆ. ನಾವು ಬಂದ ಬಳಿಕವೂ ಅಗ್ನಿಶಾಮಕ ಸಿಬಂದಿ ಬರುವಾಗ ಲೇಟ್ ಆಗಿತ್ತು. ಅಷ್ಟರಲ್ಲಿ ಬೆಂಕಿ ಹರಡಿದ್ದು ಒಳಭಾಗದ ಸೀಲಿಂಗ್ ಪೂರ್ತಿ ಸುಟ್ಟು ಹೋಗಿದ್ದು ಪ್ಲಾಸ್ಟಿಕ್ ಉರಿದು ಕೆಳಗೆ ಬಿದ್ದು ಕೆಳಭಾಗದಲ್ಲಿದ್ದ ಸಾಮಗ್ರಿಗಳು ಕೂಡ ಹಾಳಾಗಿವೆ ಎಂದು ಹೇಳಿದರು ಅಲ್ಲಿನ ಸಿಬಂದಿ.
ಒಂದು ಕೋಟಿ ನಷ್ಟ ಆಗಿರಬಹುದೆಂದು ಕೆಲವರು ಅಂದಾಜಿಸಿದ್ದಾರೆ. ಇನ್ಶೂರೆನ್ಸ್ ಕಂಪನಿಯವರು ಬಂದಿಲ್ಲ. ಇನ್ಶೂರೆನ್ಸ್ ಇದೆ. ಎಸಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ. ಆದರೆ, ನಾವು ರಾತ್ರಿ ವೇಳೆ ಎಸಿ ಸೇರಿದಂತೆ ಎಲ್ಲವನ್ನೂ ಆಫ್ ಮಾಡಿ ಹೋಗಿದ್ದೆವು. ಪ್ರಕರಣ ದಾಖಲಾಗಿದೆ, ನಷ್ಟ ಅಂದಾಜು ಮಾಡುತ್ತಿದ್ದಾರೆ ಎಂದರು ಇನ್ನೊಬ್ಬ ಸಿಬಂದಿ.
A short circuit has triggered fire Fieldstar HyperMartet at Ballalbagh in Mangalore here on Thursday April 15, leading to panic. It is estimated of one crore loss to the company.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm