ಬ್ರೇಕಿಂಗ್ ನ್ಯೂಸ್
14-04-21 10:03 pm Mangaluru correspondent ಕರಾವಳಿ
ಮಂಗಳೂರು, ಎ.14: ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫೀ ತೆಗೆಯಲು ಹೋದ ಹುಡುಗನೊಬ್ಬ ಕರೆಂಟ್ ಶಾಕಿಗೆ ಒಳಗಾಗಿ 50 ಶೇಕಡಾ ಸುಟ್ಟು ಹೋದ ಘಟನೆ ಮಂಗಳೂರು ಹೊರವಲಯದ ಜೋಕಟ್ಟೆಯಲ್ಲಿ ನಡೆದಿದೆ.
ಜೋಕಟ್ಟೆ ನಿವಾಸಿ 16 ವರ್ಷದ ಬಾಲಕ ಮೊಹಮ್ಮದ್ ದಿಶಾನ್ ಈ ರೀತಿ ಕರೆಂಟ್ ಶಾಕ್ ಆಗಿರುವ ಬಾಲಕ ಎಂದು ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದಾರೆ. ಎಲ್ ಪಿಜಿ ಗ್ಯಾಸ್ ಟ್ಯಾಂಕರ್ ಇದ್ದ ಗೂಡ್ಸ್ ರೈಲು ಎಂಆರ್ ಪಿಎಲ್ ಒಳಗೆ ಹೋಗಲು ಕ್ಲಿಯರೆನ್ಸ್ ಸಿಗುವುದಕ್ಕಾಗಿ ನಿನ್ನೆಯಿಂದ ಜೋಕಟ್ಟೆ ರೈಲು ನಿಲ್ದಾಣದಲ್ಲಿ ನಿಂತಿತ್ತು. ಇದನ್ನು ಗಮನಿಸಿದ ನಾಲ್ಕು ಸ್ಥಳೀಯ ಬಾಲಕರು ಇಂದು ಮಧ್ಯಾಹ್ನ ರೈಲಿನ ಮೇಲೆ ಹತ್ತಿದ್ದು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ, ರೈಲ್ವೇ ಇಲೆಕ್ಟ್ರಿಕ್ ಲೈನ್ ತಾಗಿದ್ದು ನೆಲಕ್ಕೆ ಎಸೆಯಲ್ಪಟ್ಟು ಸುಟ್ಟು ಹೋಗಿದ್ದಾನೆ. ಇದನ್ನು ಕಂಡ ಇತರೇ ನಾಲ್ವರು ಅಲ್ಲಿಂದ ಕೆಳಕ್ಕೆ ಹಾರಿದ್ದು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜೋಕಟ್ಟೆಯಿಂದ ಪಣಂಬೂರು - ಮಂಗಳೂರು ಜಂಕ್ಷನ್ ವರೆಗೆ ರೈಲು ಹಳಿಯ ಮೇಲ್ಭಾಗದಿಂದ ಇಲೆಕ್ಟ್ರಿಕ್ ಲೈನ್ ಆಗಿದ್ದು ಇದರಲ್ಲಿ 25 ಸಾವಿರ ವೋಲ್ಟ್ ವಿದ್ಯುತ್ ಹರಿಯುತ್ತದೆ ಎನ್ನಲಾಗಿದೆ. ಈ ಲೈನ್ ತಾಗಿ ಕರೆಂಟ್ ಶಾಕ್ ಆಗಿದೆ ಎನ್ನಲಾಗುತ್ತಿದ್ದು ಬಾಲಕ ಚೂರು ತಾಗುತ್ತಲೇ ನೆಲಕ್ಕೆ ಬಿದ್ದಿದ್ದಾನೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಮತ್ತು ಬಜ್ಪೆ ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ರೈಲ್ವೇ ಲೈನ್ ಅಪಾಯಕಾರಿ ; ಎಚ್ಚರಕ್ಕೆ ಸೂಚನೆ
ಘಟನೆ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಯಿಂದ ವಿದ್ಯುತ್ ಲೈನ್ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ರೈಲ್ವೇಯ ವಿದ್ಯುತ್ ಲೈನ್ ಬಳಿ ಯಾರೂ ಬರಬಾರದು. ಹತ್ತಿರ ಸುಳಿದರೂ ತೀವ್ರ ವಿದ್ಯುತ್ ಶಾಕ್ ಆಗುವ ಸಾಧ್ಯತೆ ಇದೆಯೆಂದು ತಿಳಿಸಿದ್ದಾರೆ.
ನೇರ ಅಥವಾ ಪರೋಕ್ಷವಾಗಿ ಲೈನ್ ಟಚ್ ಆಗಬಾರದು. ಇತರೇ ವಸ್ತುಗಳ ಮೂಲಕವೂ ಟಚ್ ಆಗುವಂತಿಲ್ಲ. ವಿದ್ಯುತ್ ಲೈನಲ್ಲಿ 25 ಸಾವಿರ ವೋಲ್ಟೇಜ್ ಇದ್ದು ಅಲ್ಲಲ್ಲಿ ಎಚ್ಚರಿಕೆ ಸೂಚನೆ ಫಲಕ ಹಾಕಲಾಗಿದೆ. ಮಳೆಗಾಲದಲ್ಲಿ ರೈಲ್ವೇ ತಂತಿಯ ಕೆಳಭಾಗದಲ್ಲಿ ಕೊಡೆ ಬಿಡಿಸಿಕೊಂಡು ನಡೆಯುವುದು ಕೂಡ ಅಪಾಯಕಾರಿ. ಸಾರ್ವಜನಿಕರು ರೈಲು ಹಳಿಯ ವಿದ್ಯುತ್ ಕಂಬಕ್ಕಾಗಲೀ, ನಿಂತಿರುವ ಗೂಡ್ಸ್ ಇನ್ನಿತರ ರೈಲು ಬೋಗಿಗಾಗಲೀ ಮೇಲಕ್ಕೆ ಹತ್ತುವುದು ಅಪಾಯ ತರಲಿದೆ. ಯುವಕರು ರೈಲು ಮೇಲಕ್ಕೆ ಹತ್ತುವ ಸಾಹಸವನ್ನಂತೂ ಮಾಡಲೇ ಬಾರದು ಎಂದು ಪಾಲಕ್ಕಾಡ್ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
16-year-old old minor boy was half electrocuted after he was trying to take selfie on goods train near Jokatte in Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm