ಬ್ರೇಕಿಂಗ್ ನ್ಯೂಸ್
12-04-21 06:09 pm Mangalore Correspondent ಕರಾವಳಿ
ಮಂಗಳೂರು, ಎ.12: ಕಳೆದ ನವೆಂಬರ್ ತಿಂಗಳಲ್ಲಿ ವಾರದ ಅಂತರದಲ್ಲಿ ನಡೆದಿದ್ದ ಕೈಕಂಬದ ಉದ್ಯಮಿ ವೆನ್ಝ್ ಅಬ್ದುಲ್ಲಾ ಮತ್ತು ಅಳಿಯ ನೌಶಾದ್ ಮೇಲಿನ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ.
ದರೋಡೆಗೆ ಹೊಂಚು ಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಟಿಬಿ ಗ್ಯಾಂಗಿನ ಸದಸ್ಯರೇ ಈ ಕೃತ್ಯವನ್ನು ಮಾಡಿದ್ದರು ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು ಆರೋಪಿಗಳನ್ನು ವಿಚಾರಣೆ ಆರಂಭಿಸಿದ್ದಾರೆ. ಉಳಾಯಿಬೆಟ್ಟು ಬಳಿಯ ಪರಾರಿ ಎಂಬಲ್ಲಿ ಹೆದ್ದಾರಿ ದರೋಡೆಗೆ ಹೊಂಚು ಹಾಕಿದ್ದ ತಂಡವನ್ನು ಪೊಲೀಸರು ಬಲೆಗೆ ಕೆಡವಿದ್ದರು. ವಿಚಾರಣೆ ವೇಳೆ ಆರೋಪಿಗಳು ಗಲ್ಫ್ ರಾಷ್ಟ್ರದಿಂದ ಕುಳಿತು ಸೂಚನೆ ಕೊಡುತ್ತಿದ್ದ ಬಾಸಿತ್ ಎಂಬಾತನ ನಿರ್ದೇಶನದಂತೆ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಟಿಬಿ ಗ್ಯಾಂಗಿನ ಹಣಕಾಸು ಸೆಟ್ಲ್ ಮೆಂಟ್ ವಿಚಾರವೂ ಬಯಲಿಗೆ ಬಂದಿತ್ತು.
ಮಂಗಳೂರು ಮೂಲದ ಮುಸ್ಲಿಂ ವ್ಯಕ್ತಿಗಳ ನಡುವಿನ ಹಣಕಾಸು ಸೆಟ್ಲ್ ಮೆಂಟ್ ಕೆಲಸವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಮಾಡುತ್ತಿದ್ದ ಖದೀಮರ ತಂಡಕ್ಕೆ ಬಾಸಿತ್ ರೂವಾರಿಯಾಗಿದ್ದ. ಆತನ ಸೂಚನೆಯಂತೆ ತೌಸಿರ್ ಮತ್ತು ಆತನ ಸಂಗಡಿಗರು ಇಲ್ಲಿ ಕೆಲಸ ಮಾಡುತ್ತಿದ್ದರು. ವೆನ್ಝ್ ಅಬ್ದುಲ್ಲಾ ಮತ್ತು ಅವರ ಕುಟುಂಬಸ್ಥರ ಒಳಗೆ ಹಣಕಾಸು ವಿಚಾರದಲ್ಲಿ ವೈಷಮ್ಯ ಇತ್ತು. ಅಲ್ಲದೆ, ಮಸೀದಿ ಕಮಿಟಿಯ ಸದಸ್ಯರ ನಡುವಿನ ದ್ವೇಷದ ಬಗ್ಗೆಯೂ ವೆನ್ಝ್ ಅಬ್ದುಲ್ಲಾ ಹೇಳಿಕೊಂಡಿದ್ದರು. ನ.15ರಂದು ಕಂದಾವರ ಮಸೀದಿ ಆವರಣದಲ್ಲಿ ತಲವಾರು ದಾಳಿಗೆ ಒಳಗಾಗಿದ್ದ ವೆನ್ಝ್ ಅಬ್ದುಲ್ಲಾ ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅಲ್ಲಿ ಅವರನ್ನು ನೋಡಿಕೊಂಡಿದ್ದ ಅಳಿಯ ನೌಶಾದ್ ಮೇಲೆ ವಾರದ ನಂತರ ನ.23ರಂದು ತಲವಾರು ದಾಳಿ ನಡೆದಿತ್ತು.
ಬಜ್ಪೆ ಮತ್ತು ಕದ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡೂ ಕೃತ್ಯಗಳಲ್ಲಿ ಒಂದೇ ತಂಡ ಶಾಮೀಲಾಗಿದ್ದು ಕಂಡುಬಂದಿತ್ತು. ಆದರೆ, ಪ್ರಕರಣವನ್ನು ವಿದೇಶದಿಂದ ಆಪರೇಟ್ ಮಾಡಲಾಗಿತ್ತು. ಹಾಗಾಗಿ ಆರೋಪಿಗಳನ್ನು ಬಂಧಿಸಲು ಆಗಿಲ್ಲ ಎಂದು ಪೊಲೀಸರು ಹೇಳಿದ್ದರು. ಇದೇ ವೇಳೆ, ಪ್ರಕರಣ ಮುಚ್ಚಿ ಹಾಕಲು ಪೊಲೀಸರಿಗೂ ಸೆಟ್ಲ್ ಮೆಂಟ್ ಆಗಿದೆ ಎನ್ನೋ ಆರೋಪ ಕೇಳಿಬಂದಿತ್ತು. ಇದೀಗ ಟಿಬಿ ಗ್ಯಾಂಗ್ ಸಿಕ್ಕಿ ಬೀಳುತ್ತಿದ್ದಂತೆ ವೆನ್ಝ್ ಅಬ್ದುಲ್ಲಾ ಕತೆಯೂ ಹೊರಬಿದ್ದಿದೆ.
ವೆನ್ಝ್ ಅಬ್ದುಲ್ಲಾ ಮೇಲಿನ ತಲವಾರು ದಾಳಿಯನ್ನು ಬಜ್ಪೆಯ ತಂಡವೊಂದರಿಂದ ಸುಪಾರಿ ಪಡೆದು ಟಿಬಿ ಗ್ಯಾಂಗ್ ಮಾಡಿತ್ತು. ಯಾರು ಸುಪಾರಿ ಕೊಟ್ಟಿದ್ದರು, ಏನು ವೈಷಮ್ಯ ಇತ್ತು ಎನ್ನುವುದರ ಬಗ್ಗೆ ತಿಳಿಯಲು ಸೌದಿ ಅರೇಬಿಯಾದಲ್ಲಿ ಅವಿತುಕೊಂಡಿರುವ ಬಾಸಿತ್ ಬಂಧನ ಆಗಬೇಕು ಎಂದು ಪೊಲೀಸರು ಹೇಳುತ್ತಿದ್ದಾರೆ. ಬಾಸಿತ್ ಬಂಧನಕ್ಕಾಗಿ ಮಂಗಳೂರು ಪೊಲೀಸ್ ಪ್ರಯತ್ನ ಆರಂಭಿಸಿದೆ.
ವೆನ್ಝ್ ಅಬ್ದುಲ್ಲಾ ಚೇತರಿಸುತ್ತಿದ್ದಂತೆ ಅಳಿಯನ ಮೇಲೆ ಅಟ್ಯಾಕ್ ; ಮಗನೆಂದು ಅಳಿಯನಿಗೆ ತಲವಾರು ಏಟು
ವೆನ್ಝ್ ಅಬ್ದುಲ್ಲಾ ಪ್ರಕರಣ ; ಸಂಶಯ ಮೂಡಿಸಿದೆ ಪೊಲೀಸರ ಮೌನ !! SKSSF - SSF ತಿಕ್ಕಾಟಕ್ಕೆ ಬೀಳಲೇಬೇಕಾ ಹೆಣ..!?
Abdul Aziz who was attacked outside Mosque in Kandavara in Bajpe, Mangalore supari TB gang has been arrested by the Mangalore CCB Police for receiving supari and making attempt to Kill.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm