ಬ್ರೇಕಿಂಗ್ ನ್ಯೂಸ್
11-04-21 09:15 am Mangaluru Reporter ಕರಾವಳಿ
ಉಳ್ಳಾಲ, ಎ.11: ತೊಕ್ಕೊಟ್ಟು ಹಳೆ ಚೆಕ್ ಪೋಸ್ಟ್ ಬಳಿಯ ಕೊರಗಜ್ಜನ ಕಟ್ಟೆಯಲ್ಲಿ ನಿನ್ನೆ ರಾತ್ರಿ ಕೋಲ ನಡೆಯುತ್ತಿದ್ದಾಗ ಮಾದಕ ವ್ಯಸನಿ ವ್ಯಕ್ತಿಯೊಬ್ಬ ಕೋಲ ನಿಲ್ಲಿಸುವಂತೆ ಹೇಳಿ ಅರಚಾಡುತ್ತಾ ಪೊಲೀಸ್ ಜೀಪಿಗೆ ಕಲ್ಲೆಸೆದು ಹಾನಿಗೊಳಿಸಿ ದಾಂಧಲೆಗೆ ಯತ್ನಿಸಿದ ಘಟನೆ ನಡೆದಿದ್ದು ಸಾರ್ವಜನಿಕರೇ ಆತನನ್ನು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉಳ್ಳಾಲ ಪ್ಯಾರೀಸ್ ಹೊಟೇಲ್ ಬಳಿಯ ನಿವಾಸಿ ಮಹಮ್ಮದ್ ಹಫೀಝ್ (25) ಬಂಧಿತ ಆರೋಪಿ. ತೊಕ್ಕೊಟ್ಟಿನ ಹಳೇ ಚೆಕ್ ಪೋಸ್ಟ್ ಬಳಿ ನಡೆದ ಕೋಲಕ್ಕೆ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ ಅವರು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಘಟನೆ ನಡೆದಿದೆ. ಸಂಪೂರ್ಣ ನಶೆಯಲ್ಲಿದ್ದ ಹಫೀಝ್ ಸಾಮೂಹಿಕ ಅನ್ನ ಸಂತರ್ಪಣೆ ನಡೆಯುತ್ತಿದ್ದ ಪ್ರದೇಶದಲ್ಲಿ ಠಳಾಯಿಸಿ ಅಲ್ಲಿ ನೆರೆದಿದ್ದ ಭಕ್ತಾದಿಗಳನ್ನು ದುರುಗುಟ್ಟುತ್ತಾ ಹೋಗಿದ್ದಾನೆ.
ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಪೊಲೀಸ್ ಜೀಪಿಗೆ ಕಲ್ಲೆಸೆದು ಕೊರಗಜ್ಜನ ಸಾನಿಧ್ಯದ ಸಮೀಪಕ್ಕೆ ಬಂದ ಆತ ಕೋಲ ನಿಲ್ಲಿಸುವಂತೆ ಜೋರಾಗಿ ಅರಚಿದ್ದಾನೆ. ಜೀಪಿಗೆ ಕಲ್ಲೆಸೆದುದನ್ನು ಗಮನಿಸಿದ ಸಾರ್ವಜನಿಕರು ಹಫೀಝನ್ನು ವಿಚಾರಿಸಲು ಮುಂದಾದಾಗ ಆತ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದ ಮಹಡಿಗಳಲ್ಲಿ ಓಡಲಾರಂಭಿಸಿದ್ದಾನೆ. ಬಳಿಕ ಅಟ್ಟಿಸಿಕೊಂಡು ಹೋಗಿ ಹಿಡಿದ ಯುವಕರು ಧರ್ಮದೇಟು ನೀಡಿದ್ದಲ್ಲದೆ, ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ಸಂದೀಪ್ ಅವರು ಊಟವನ್ನು ಅರ್ಧಕ್ಕೇ ಬಿಟ್ಟು ಆರೋಪಿಯನ್ನ ಹಿಡಿದು ಠಾಣೆಗೆ ಕರೆದೊಯ್ದು ಉಪಚರಿಸಿದ್ದಾರೆ.
ಆರೋಪಿ ಹಫೀಝ್ ನ ಆಧಾರ್ ಕಾರ್ಡ್ ಸ್ಥಳದಲ್ಲೇ ಬಿದ್ದು ಸಿಕ್ಕಿದ್ದು ಪೊಲೀಸರು ವಶಪಡಿಸಿದ್ದಾರೆ.
ನೂರಾರು ಮಂದಿ ಭಕ್ತಾದಿಗಳು ಸೇರಿದ್ದ ಸಾನಿಧ್ಯದಲ್ಲಿ ನಶೆಯಲ್ಲಿ ಬಂದು ದಾಂಧಲೆಗೈದ ವ್ಯಕ್ತಿಯ ಹಿಂದೆ ಕೋಮು ಸಾಮರಸ್ಯ ಹದಗೆಡಿಸಲು ಯತ್ನಿಸುವ ಕಾಣದ ಕೈಗಳು ಇರಬಹುದೆಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದು ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯಗಳು ಮರುಕಳಿಸುತ್ತಿರುವಾಗಲೇ ಈಗ ಕೊರಗಜ್ಜನ ಕೋಲ ನಡೆಯುತ್ತಿದ್ದಾಗಲೇ ದಾಂಧಲೆ ನಡೆಸಿದ್ದು ಸ್ಥಳೀಯರ ಶಂಕೆಗೆ ಕಾರಣವಾಗಿದೆ.
ಮಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಧಿಸಿರುವಾಗ ತೊಕ್ಕೊಟ್ಟಿನಲ್ಲಿ ಕೋಲಕ್ಕೆ ಹೇಗೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಭ್ರಮೆಯಲ್ಲಿ ಆರೋಪಿ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ. ಆದರೆ, ನೈಟ್ ಕರ್ಫ್ಯೂ ಕೇವಲ ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಾತ್ರ. ತೊಕ್ಕೊಟ್ಟು ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬರುತ್ತದೆ ಎಂಬ ಅರಿವು ಇಲ್ಲದೆ, ಮಾದಕ ವ್ಯಸನದ ಮತ್ತಿನಲ್ಲಿ ಅರಚಾಟ, ಕಲ್ಲು ತೂರಾಟ ನಡೆಸಿದ್ದಾನೆ ಎನ್ನಲಾಗುತ್ತಿದೆ.
A man who tried to stop the koragajja kola by pelting stone at police jeep was nabbed by the public and thrashed at Thokottu in Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm