ಬ್ರೇಕಿಂಗ್ ನ್ಯೂಸ್
09-04-21 08:36 pm Mangaluru correspondent ಕರಾವಳಿ
ಮಂಗಳೂರು, ಎ.9: ಕುಲಪತಿ ಹುದ್ದೆಗಾಗಿ ಲಂಚ ನೀಡಿದ್ದ ಆರೋಪದಲ್ಲಿ ಮಂಗಳೂರು ವಿವಿಯ ಪ್ರೊಫೆಸರ್ ಜಯಶಂಕರ್ ಅವರನ್ನು ಅಮಾನತು ಮಾಡಲಾಗಿದೆ.
ಮಂಗಳೂರು ವಿವಿಯಲ್ಲಿ ಇಂದು ಸಿಂಡಿಕೇಟ್ ಸಭೆ ನಡೆದಿದ್ದು ಸಭೆಯಲ್ಲಿ ಆರೋಪಿತ ಪ್ರೊಫೆಸರ್ ಜಯಶಂಕರ್ ಅವರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ. ಅಲ್ಲದೆ ನಿವೃತ್ತ ನ್ಯಾಯಾಧೀಶರ ಮೂಲಕ ಪ್ರಕರಣದ ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಮಂಗಳೂರು ಅಥವಾ ರಾಯಚೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವ ವಿಚಾರದಲ್ಲಿ ಪ್ರೊ. ಜಯಶಂಕರ್, ರಾಮಸೇನೆಯ ರಾಜ್ಯಾಧ್ಯಕ್ಷ ಪ್ರಸಾದ ಅತ್ತಾವರ ಮೂಲಕ 17.5 ಲಕ್ಷ ರೂ. ನೀಡಿದ್ದರು. ಹಣ ಕೊಟ್ಟು ವರ್ಷ ಕಳೆದರೂ, ಕುಲಪತಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಜಯಶಂಕರ್ ಮಂಗಳೂರಿನ ಕಂಕನಾಡಿ ಠಾಣೆಗೆ ದೂರು ನೀಡಿದ್ದರು. ದೂರಿನಂತೆ ತನಿಖೆ ನಡೆಸಿದ ಪೊಲೀಸರು ಪ್ರಸಾದ್ ಅತ್ತಾವರನನ್ನು ಬಂಧಿಸಿದ್ದರು.
ಪ್ರಕರಣ ಬೆಳಕಿಗೆ ಬರುತ್ತಲೇ ಕುಲಪತಿ ಹುದ್ದೆಗಾಗಿ ಲಂಚ ನೀಡಿದ್ದ ಸರಕಾರಿ ನೌಕರನಾಗಿರುವ ಪ್ರೊಫೆಸರ್ ಅನ್ನು ಅಮಾನತುಗೊಳಿಸಬೇಕೆಂದು ಆಗ್ರಹ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ, ಒತ್ತಾಯವೂ ಕೇಳಿಬಂದಿತ್ತು. ಈ ನಡುವೆ, ಪ್ರೊಫೆಸರ್ ಜೈಶಂಕರ್ ಗೆ ವಿವಿಯಿಂದ ಸ್ಪಷ್ಟನೆ ಕೇಳಿ ನೋಟಿಸ್ ನೀಡಲಾಗಿತ್ತು. ನೋಟೀಸಿಗೆ ವಿವಿಯ ಕುಲಪತಿ ಪ್ರೊ. ಯಡಪಡಿತ್ತಾಯರಿಗೆ ಪ್ರೊಫೆಸರ್ ಉತ್ತರವನ್ನೂ ನೀಡಿದ್ದರು. ನೋಟೀಸಿಗೆ ನೀಡಿದ್ದ ಉತ್ತರ ಮತ್ತು ಒಟ್ಟು ಪ್ರಕರಣ ಸಿಂಡಿಕೇಟ್ ಸಭೆಯಲ್ಲಿ ಇಂದು ಚರ್ಚೆಗೆ ಬಂದಿದೆ. ಒಬ್ಬ ಗೌರವಾನ್ವಿತ ಪ್ರೊಫೆಸರ್ ಆಗಿದ್ದುಕೊಂಡು ಕುಲಪತಿಯಾಗಲು ಲಂಚ ನೀಡಿರುವುದು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಾಬೀತಾಗಿದ್ದಲ್ಲದೆ ಮಂಗಳೂರು ವಿವಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆಂಬ ನೆಲೆಯಲ್ಲಿ ಅವರನ್ನು ಆರು ತಿಂಗಳ ಕಾಲ ಅಮಾನತು ಮಾಡಲು ಸಿಂಡಿಕೇಟ್ ಮಂಡಳಿ ಸಭೆ ನಿರ್ಧರಿಸಿದೆ.
Prof M Jayashanakar who had filed a cheating case against Prasad Attavar has been suspended by Managalore University Syndicate bench over bribe charges.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm