ಬ್ರೇಕಿಂಗ್ ನ್ಯೂಸ್
09-04-21 03:52 pm Mangalore Correspondent ಕರಾವಳಿ
ಉಳ್ಳಾಲ, ಎ.9 : ತ್ರಿಬಲ್ ರೈಡ್ ನಲ್ಲಿದ್ದ ಯುವಕರ ಬೈಕೊಂದು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು ಮತ್ತಿಬ್ಬರು ಗಂಭೀರ ಗಾಯಗೊಂಡ ಘಟನೆ ಕುತ್ತಾರು ಪದವಿನ ಕೊರಗಜ್ಜನ ಕಟ್ಟೆ ಬಳಿ ನಡೆದಿದೆ.

ಬೈಕಲ್ಲಿ ಸಹ ಸವಾರನಾಗಿ ಸಂಚರಿಸುತ್ತಿದ್ದ ಪೊಳಲಿ ಕೊಳತ್ತಮಜಲು ನಿವಾಸಿ ಮಹಮ್ಮದ್ ಶಾಫಿ (20)ಮೃತ ಪಟ್ಟ ಯುವಕ. ನಿನ್ನೆ ಮಧ್ಯಾಹ್ನ ಕುತ್ತಾರು ಆದಿ ಸ್ಥಳ ಕೊರಗಜ್ಜನ ಕಟ್ಟೆಯ ಬಳಿ ಕುತ್ತಾರಿನಿಂದ ಎಲಿಯಾರ್ ಪದವಿಗೆ ಮೂವರನ್ನು ಕುಳ್ಳಿರಿಸಿಕೊಂಡು ಧಾವಿಸುತ್ತಿದ್ದ ಬೈಕ್ ಸವಾರ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಖಾಸಗಿ 44 ರೂಟ್ ನಂಬರ್ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕಲ್ಲಿದ್ದ ಮೂವರು ರಸ್ತೆಗೆಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸಹಸವಾರ ಮಹಮ್ಮದ್ ಶಾಫಿ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸಹಸವಾರ ರಾಣಿಪುರ ನಿವಾಸಿ ಮಹಮ್ಮದ್ ಇಮ್ರಾನ್ (20) ಮತ್ತು ಬೈಕ್ ಚಾಲಕ ಕಲ್ಲಡ್ಕ ನಿವಾಸಿ ಮಹಮ್ಮದ್ ಮೌಷಿನ್ (23)ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಯುವಕನ ಸಹಿತ ಬೈಕಲ್ಲಿ ಸಂಚರಿಸುತ್ತಿದ್ದ ಮೂರು ಮಂದಿ ಯುವಕರು ಹೆಲ್ಮೆಟ್ ಧರಿಸಿರಲಿಲ್ಲವೆಂದು ತಿಳಿದು ಬಂದಿದೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A triple ride kills one in an accident after the bike got skid and rammed into the bus at Kuthar in Mangalore. The deceased has been identified as Shaffi. The other two are said to be out of danger
26-03-26 10:27 pm
HK News Staffer
ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ...
26-03-26 09:21 pm
ಬಾಂಗ್ಲಾದೇಶದಲ್ಲಿ ನದಿಗೆ ಉರುಳಿ ಬಿದ್ದ ಬಸ್ ; 23 ಮಂ...
26-03-26 12:31 pm
ಆಂಧ್ರಪ್ರದೇಶ ; ಖಾಸಗಿ ಬಸ್- ಜಲ್ಲಿ ತುಂಬಿದ ಲಾರಿ ಮು...
26-03-26 11:14 am
ಮುಂದಿನ ಲೋಕಸಭೆ ವೇಳೆಗೆ 543 ಸ್ಥಾನ 816ಕ್ಕೆ ಹೆಚ್ಚಳ...
25-03-26 09:32 pm
26-03-26 09:44 pm
HK News Staffer
ಹೊರ್ಮುಜ್ ಜಲಸಂಧಿ ನಿರ್ಬಂಧಿಸಿದ್ದ ಇರಾನ್ ನೌಕಾಪಡೆ ಮ...
26-03-26 09:00 pm
ಮಂಗಳೂರಿಗೆ ಮತ್ತೆರಡು ಬೃಹತ್ ತೈಲ ಟ್ಯಾಂಕರ್ ಹಡಗು ;...
26-03-26 09:31 am
ಅಮೆರಿಕ- ಇರಾನ್ ಶಾಂತಿ ಮಾತುಕತೆ; ಯುದ್ಧ ನಿಲ್ಲಿಸಲು...
25-03-26 06:15 pm
ಟ್ರಂಪ್ ಯುದ್ಧ ವಿರಾಮ ನಡುವೆಯೂ ಇಸ್ರೇಲ್ ದಾಳಿ ಮುಂದು...
24-03-26 04:43 pm
26-03-26 10:51 pm
HK News Staffer
ಮಂಗಳೂರು ಸಿಟಿ ಪೊಲೀಸರ ಹೆಸರಲ್ಲೇ ನಕಲಿ ವೆಬ್ಸೈಟ್ !...
26-03-26 10:29 pm
ನವ ಮಂಗಳೂರು ಬಂದರು ಸ್ಥಾಪನೆಗೊಂಡ ಬಳಿಕ 40 ಸಾವಿರ ಹಡ...
26-03-26 07:19 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಸಾಮಾಜಿಕ ಜಾಲತಾಣದಲ್...
25-03-26 08:44 pm
ಭಾರತೀಯ ನೌಕಾಪಡೆ ರಕ್ಷಣೆ, ಆತಂಕದಿಂದ ಪಾರಾಗಿದ್ದೇವೆ...
25-03-26 05:23 pm
27-03-26 06:51 am
Mangaluru Staffer
ಅಕ್ರಮ ಸಂಬಂಧ ಶಂಕೆ ; ತಾಯಿಯನ್ನ ನಿಂದಿಸಿದ್ದಕ್ಕೆ ಇಬ...
26-03-26 06:48 pm
ಮೂಡುಬಿದ್ರೆ ಸಂದೇಶ್ ಕೇಸ್ ಬೆನ್ನಲ್ಲೇ ಬೆಂಗಳೂರಿನಲ್ಲ...
26-03-26 03:12 pm
ಪ್ರೇಮದ ನಾಟಕವಾಡಿ ವೈದ್ಯೆಯನ್ನೇ 'ಜೀವಂತ ಶವ' ಮಾಡಿದ್...
26-03-26 09:28 am
ಮದುವೆಯಾಗೋದಾಗಿ ನಂಬಿಸಿ ಮೋಸ ; ನೀನು ನಂಗೆ ದೈಹಿಕ ತೃ...
24-03-26 02:04 pm