ಬ್ರೇಕಿಂಗ್ ನ್ಯೂಸ್
08-04-21 11:49 am Mangalore Correspondent ಕರಾವಳಿ
ಮಂಗಳೂರು, ಎ.8 : ಕಟ್ಟಡ ನಿರ್ಮಾಣಕ್ಕಾಗಿ ಅಗೆದಿದ್ದ ಹೊಂಡದಲ್ಲಿದ್ದ ನೀರಿಗೆ ಬಿದ್ದು ಮುಳುಗೇಳುತ್ತಾ ಪ್ರಾಣ ಸಂಕಟದಲ್ಲಿದ್ದ ಪಾರಿವಾಳವನ್ನು ಅಗ್ನಿಶಾಮಕದಳ ಸಿಬಂದಿ ರಕ್ಷಿಸಿದ ಘಟನೆ ನಡೆದಿದೆ.
ನಗರದ ಟಿಎಂಎ ಪೈ ಸಭಾಂಗಣದ ಮುಂಭಾಗದಲ್ಲಿ ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಪ್ರದೇಶದಲ್ಲಿ ಪಾರ್ಕಿಂಗ್ ಸ್ಥಳಕ್ಕೆಂದು 10-15 ಅಡಿ ಹೊಂಡ ಕೊರೆಯಲಾಗಿತ್ತು. ಬೃಹತ್ ಹೊಂಡದಲ್ಲಿ ಮಳೆಯಿಂದಾಗಿ ನೀರು ತುಂಬಿದ್ದು, ಈ ಹೊಂಡಕ್ಕೆ ನೀರು ಕುಡಿಯಲೆಂದು ಬಂದಿದ್ದ ಪಾರಿವಾಳ ಅಕಸ್ಮಾತ್ತಾಗಿ ಹೊಂಡಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಅದು ಮೇಲೆ ಬರಲಾಗದೆ ನೀರಿನಲ್ಲಿ ಮುಳುಗೇಳುತ್ತಾ ಒದ್ದಾಡುತ್ತಿತ್ತು. ಇದನ್ನು ಕಂಡು ಮೇಲೆ ಹಾರುತ್ತಿದ್ದ ಹದ್ದುಗಳು ಪಾರಿವಾಳದ ಬೇಟೆಗೆ ಮುಂದಾಗಿತ್ತು.
ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ ಏನೋ ಕೆಲಸ ನಿಮಿತ್ತ ಅದರ ಮುಂಭಾಗದ ಫ್ಲ್ಯಾಟ್ ಗೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಹೋಗಿದ್ದು ಪಾರಿವಾಳ ಅಪಾಯಕ್ಕೀಡಾದ ದೃಶ್ಯ ಕಂಡಿದ್ದಾರೆ. ತಕ್ಷಣ ಅವರು ಪಾಂಡೇಶ್ವರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸತತ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಪಾರಿವಾಳವನ್ನು ರಕ್ಷಿಸಿದ್ದಾರೆ.
ಪೂರ್ತಿ ಒದ್ದೆಯಾಗಿ ಒದ್ದಾಡುತ್ತಿದ್ದ ಪಾರಿವಾಳವನ್ನು ಸಹಜ ಸ್ಥಿತಿಗೆ ಬರುವವರೆಗೂ ಪೋಷಣೆಗಾಗಿ ಎನಿಮಲ್ ಕೇರ್ ಟ್ರಸ್ಟ್ ನ ತೌಸೀಫ್ ಅವರ ಸುಪರ್ದಿಗೆ ಒಪ್ಪಿಸಲಾಗಿದೆ. ಪಾರಿವಾಳದ ರಕ್ಷಣೆಗೆ ಅಗ್ನಿಶಾಮಕ ಸಿಬಂದಿ ಬಂದು ಕಾರ್ಯಾಚರಣೆ ನಡೆಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
Video:
In a sublime gesture of humanitarian concern, the entire fire brigade came calling after learning that a baby pigeon was facing peril to its life. A large water body has been formed in a private land where construction work is going on opposite Dr T M A Pai convention hall on M G Road in Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm