ಬ್ರೇಕಿಂಗ್ ನ್ಯೂಸ್
02-04-21 07:18 pm Mangaluru correspondent ಕರಾವಳಿ
ಮಂಗಳೂರು, ಎ.2: ಕರಾವಳಿಯಲ್ಲಿ ಮುಸ್ಲಿಂ ಲವ್ ಜಿಹಾದ್ ಕರಾಳ ಕೃತ್ಯಕ್ಕೆ ಮುಗ್ಧ ಹಿಂದು ಹೆಣ್ಮಕ್ಕಳು ಬಲಿಯಾಗುತ್ತಲೇ ಇದ್ದಾರೆ. ಕಳೆದ ಆರು ತಿಂಗಳಲ್ಲಿ ನೂರಾರು ಪ್ರಕರಣಗಳು ಕಂಡುಬಂದಿದ್ದು, ಹಲವು ಸಂದರ್ಭಗಳಲ್ಲಿ ಬಜರಂಗದಳ ಕಾರ್ಯಕರ್ತರು ಗಮನಿಸಿ, ಎಚ್ಚರಿಕೆ ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಆರೋಪಿಗಳಿಗೆ ಥಳಿತವೂ ನಡೆದಿದ್ದು, ಅದರಲ್ಲಿ ಇತರೇ ಸಾರ್ವಜನಿಕರ ಪಾತ್ರವೂ ಇರುತ್ತದೆ. ಆದರೆ, ಲವ್ ಜಿಹಾದ್ ಕೃತ್ಯಗಳ ವಿರುದ್ಧ ಸರಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಾವೇ ಕಾನೂನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುನಿಲ್ ಕೆ.ಆರ್., ನಿನ್ನೆ ಪಂಪ್ ವೆಲ್ ನಲ್ಲಿ ನಡೆದಿರುವುದೂ ಲವ್ ಜಿಹಾದ್ ಕೃತ್ಯ. ಆ ಹುಡುಗಿ ಮುಸ್ಲಿಂ ಹುಡುಗನ ಜೊತೆ ತಿರುಗಾಡುವುದನ್ನು ನಮ್ಮ ಕಾರ್ಯಕರ್ತರು ಹಲವು ಸಮಯದಿಂದ ಗಮನಿಸಿದ್ದಾರೆ. ಬೆಂಗಳೂರಿಗೆ ಹೋಗುವುದನ್ನು ತಿಳಿದು ಅಡ್ಡಹಾಕಿದ್ದಾರೆ. ಹಿಂದು ಹೆಣ್ಮಕ್ಕಳನ್ನು ಮುಸ್ಲಿಂ ಹುಡುಗರು ಉಪಾಯದಿಂದ ಕೊಂಡೊಯ್ದು ತಮ್ಮ ಕೃತ್ಯಕ್ಕೆ ಬಳಸಿಕೊಂಡು ಬ್ಲಾಕ್ ಮೇಲ್ ನಡೆಸುತ್ತಾರೆ. ಬಳಿಕ ಈ ಜಾಲದಲ್ಲಿ ಸಿಲುಕಿ ಒದ್ದಾಡುವ ಹೆಣ್ಮಕ್ಕಳು ಅವರು ಹೇಳಿದಂತೆ ಕೇಳಬೇಕಾಗುತ್ತದೆ.
ಈ ರೀತಿಯ ಪ್ರಕರಣಗಳು ಕೇರಳ, ಕರ್ನಾಟಕ ಸೇರಿ ದೇಶಾದ್ಯಂತ ನಡೆಯುತ್ತಿದೆ. ಕರಾವಳಿಯಲ್ಲಿ ಹಲವಾರು ಹೆಣ್ಮಕ್ಕಳು ಈ ಜಾಲದಲ್ಲಿ ಸಿಲುಕಿ ನಾಪತ್ತೆಯಾಗಿರುವುದನ್ನು ಕಂಡಿದ್ದೇವೆ. ಹೀಗಾಗಿ ಹಿಂದು ಹೆಣ್ಮಕ್ಕಳನ್ನು ರಕ್ಷಿಸುವುದು ನಮ್ಮ ಸಂಘಟನೆಗಳ ಜವಾಬ್ದಾರಿ ಎನ್ನುವ ಧ್ಯೇಯ ಇಟ್ಟುಕೊಂಡು ಈ ಕಾರ್ಯವನ್ನು ಬಜರಂಗದಳ ನಿರಂತರವಾಗಿ ಮಾಡುತ್ತಿದೆ. ರಾಜ್ಯ ಸರಕಾರ ಲವ್ ಜಿಹಾದ್ ಕೃತ್ಯದ ವಿರುದ್ಧ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾನೂನು ಜಾರಿಮಾಡಬೇಕು. ಈ ರೀತಿ ಹಿಂದು ಹೆಣ್ಮಕ್ಕಳನ್ನು ಪೀಡಿಸುತ್ತಿರುವ ಮುಸ್ಲಿಂ ಹುಡುಗರನ್ನು ಶಿಕ್ಷಿಸಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸುತ್ತೇವೆ ಎಂದು ಸುನಿಲ್ ಹೇಳಿದರು.
ಇದೇ ವೇಳೆ, ಸುಳ್ಳು ಕೇಸು ಹೊರಿಸಿ, ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ ಎಂದ ಅವರು, ಇಂಥ ಸಂದರ್ಭದಲ್ಲಿ ಪೊಲೀಸರು ಘಟನೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ನಮ್ಮ ಸಂಘಟನೆಯವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಕಾರ್ಯ ಮಾತ್ರ ಮಾಡುತ್ತಾರೆ. ಹಲ್ಲೆ ನಡೆಸುವ ಉದ್ದೇಶ ಇರುವುದಿಲ್ಲ. ಘಟನೆ ವೇಳೆ ಉದ್ರಿಕ್ತರಾದ ಗುಂಪು ಇದನ್ನು ಮಾಡುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಮುರಲಿಕೃಷ್ಣ ಹಸಂತಡ್ಕ, ಭುಜಂಗ ಕುಲಾಲ್, ಶ್ರೀಧರ್ ತೆಂಕಿಲ, ದೀಪಕ್ ಮರೋಳಿ ಉಪಸ್ಥಿತರಿದ್ದರು.
We will take law into hands if police fail to take action against love jihad in Mangalore warned vishwa hindu parishad.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm