ಬ್ರೇಕಿಂಗ್ ನ್ಯೂಸ್
01-04-21 06:19 pm Mangalore Correspondent ಕರಾವಳಿ
ಮಂಗಳೂರು, ಎ.1: ಬೆಂಗಳೂರಿನ ಜೈಲಿನಿಂದಲೇ ಮಂಗಳೂರಿನ ರೌಡಿಸಂ ಜಗತ್ತನ್ನು ಕೈಯಲ್ಲಿರಿಸಿಕೊಂಡಿರುವ ರೌಡಿ ಆಕಾಶ್ ಭವನ ಶರಣ್ ಗ್ಯಾಂಗಿನ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶರಣ್ ಸೂಚನೆಯಂತೆ ಹಫ್ತಾ ವಸೂಲಿ ಮತ್ತು ತಮ್ಮ ವಿರೋಧಿಗಳನ್ನು ಮುಗಿಸಲು ಸಂಚು ನಡೆಸಿದ್ದ ಆರೋಪದಲ್ಲಿ ಶರಣ್ ತಮ್ಮ ದೀರಜ್ ಅಲಿಯಾಸ್ ಕುಟ್ಟ ಆಕಾಶಭವನ(26), ಮತ್ತು ಇವರಿಗೆ ಮಧ್ಯಪ್ರದೇಶದಿಂದ ಮಾರಕಾಸ್ತ್ರಗಳನ್ನು ಪೂರೈಸುತ್ತಿದ್ದ ರಾಜೇಶ್ ತೋಮರ್ ಅಲಿಯಾಸ್ ರಾಜ್ಬೀರ್ (31), ಮರಳು ದಂಧೆಯಲ್ಲಿ ತೊಡಗಿಸ್ಕೊಂಡು ಹಣಕಾಸು ಡೀಲ್ ನಡೆಸುತ್ತಿದ್ದ ಅದ್ಯಪಾಡಿ ನಿವಾಸಿ ರಾಕೇಶ್ ಕಂಬಳಿ(25), ಎಕ್ಕಾರಿನ ರಾಜೇಶ್ ಆಚಾರ್ಯ(38), ಆಕಾಶ್ಭವನ ನಂದನಪುರ ನಿವಾಸಿ ಸಾಗರ್ (23) ಎಂಬವರನ್ನು ಬಂಧಿಸಲಾಗಿದೆ.
ಈಗಾಗ್ಲೇ ಬೈಕ್ ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ದೀಕ್ಷಿತ್ ಪೂಜಾರಿ, ಚಂದ್ರಹಾಸ, ಪ್ರಜ್ವಲ್ ಮತ್ತು ಸಂತೋಷ್ ಪೂಜಾರಿಯನ್ನು ವಿಚಾರಣೆ ನಡೆಸಿದಾಗ, ಅವರು ಆಕಾಶಭವನ್ ಶರಣ್ ಸೂಚನೆಯಂತೆ ಕೆಲಸ ಮಾಡುತ್ತಿರುವುದು ತಿಳಿದುಬಂದಿತ್ತು. ಅಲ್ಲದೆ, ಮಂಗಳೂರಿನಲ್ಲಿ ತಾನೇ ಅಂಡರ್ ವರ್ಲ್ಡ್ ಕಿಂಗ್ ಆಗಬೇಕೆಂದು ಬಯಸುತ್ತಿದ್ದ ಆಕಾಶಭವನ ಶರಣ್ ವಿರುದ್ಧ ಇದ್ದವರನ್ನು ಕೊಲ್ಲಲು ಸಂಚು ರೂಪಿಸಿದ್ದು ಬಯಲಾಗಿತ್ತು. ಅದರಂತೆ, ವಿಚಾರಣೆ ನಡೆಸಿದಾಗ ಈ ಹಿಂದೆ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದು ತಿಳಿದು ಬಂದಿತ್ತು.
ಇದಲ್ಲದೆ, ಆಕಾಶಭವನ್ ಶರಣ್ ಸೂಚನೆಯಂತೆ ಕಂಕನಾಡಿ ಠಾಣೆ ವ್ಯಾಪ್ತಿಯ ಹಳೇ ರೌಡಿ ಗೌರೀಶ್ ಅಲಿಯಾಸ್ ಗೌರಿಯನ್ನು ಕೊಲೆ ಮಾಡಲು ಆತನ ತಮ್ಮ ಧೀರಜ್ ಮುಂದಾಗಿರುವುದು ತಿಳಿದುಬಂದಿತ್ತು. ಧೀರಜ್ ಗೆ ನೆರವು ನೀಡುತ್ತಿದ್ದ ಇತರ ಮೂವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ರೌಡಿಸಂ ಲೋಕದಲ್ಲಿ ತನ್ನದೇ ಪಾರುಪತ್ಯ ಪಡೆಯುವುದಕ್ಕಾಗಿ ಆಕಾಶಭವನ್ ಶರಣ್ ಈ ಕೆಲಸವನ್ನು ಮಾಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಮೂವರ ಕೊಲೆ ಸಂಚಿನ ಆರೋಪದಲ್ಲಿ ಕಂಕನಾಡಿ ಪೊಲೀಸರು ಬೆಂಗಳೂರು ಜೈಲಿನಲ್ಲಿರುವ ಆಕಾಶಭವನ್ ಶರಣ್ ನನ್ನು ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
Mangalore Plotting murder and robbery Police arrest four of akash bhavan gang. The Kankandy Town police have succeeded in arresting the four.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm