ಬ್ರೇಕಿಂಗ್ ನ್ಯೂಸ್
15-03-21 05:02 pm Mangalore Correspondent ಕರಾವಳಿ
ಮಂಗಳೂರು, ಮಾ.15: ಎರಡು ಬೈಕ್ ಗಳಲ್ಲಿ ಪ್ರಯಾಣಿಸುತ್ತಿದ್ದ ವಿಭಿನ್ನ ಕೋಮಿನ ಯುವಕರು ಸೈಡ್ ಕೊಡದ ವಿಚಾರದಲ್ಲಿ ತಗಾದೆ ತೆಗೆದು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಶನಿವಾರ ರಾತ್ರಿ ಸಿರಾಜ್, ಹಸನ್ ಮತ್ತು ಹಿನಾಯತ್ ಎಂಬವರು ಒಂದೇ ಬೈಕಿನಲ್ಲಿ ಮಂಗಳೂರಿನಿಂದ ತೊಕ್ಕೊಟ್ಟಿನತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ, ಜತಿನ್ ಮತ್ತು ನಿತಿನ್ ಎಂಬ ಯುವಕರು ಬೈಕಿನಲ್ಲಿ ತೊಕ್ಕೊಟ್ಟಿಗೆ ತೆರಳುತ್ತಿದ್ದು ಕಲ್ಲಾಪಿನಲ್ಲಿ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಬೈಕ್ ನಿಲ್ಲಿಸಿ, ಕೈಯಿಂದ ಹೊಡೆದಾಡಿದ್ದು, ಬಳಿಕ ಪೊಲೀಸರು ಬಂದು ಎರಡೂ ಕಡೆಯ ಹುಡುಗರನ್ನು ವಶಕ್ಕೆ ಪಡೆದು ಉಳ್ಳಾಲ ಠಾಣೆಗೆ ಒಯ್ದು ಕೂರಿಸಿದ್ದರು.

ಗಾಂಜಾ ಮತ್ತು ಮದ್ಯದ ನಶೆಯಲ್ಲಿ ಹೊಡೆದಾಟ ನಡೆದಿತ್ತೆಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿತ್ತು. ಪೊಲೀಸರು ಬಳಿಕ ಎರಡೂ ಕಡೆಯ ಯುವಕರನ್ನು ಸೆಕ್ಷನ್ 323 ಮತ್ತು 279 ಪ್ರಕಾರ ಕೇಸು ಬರೆಸಿಕೊಂಡು ಸ್ಟೇಶನ್ ಜಾಮೀನಲ್ಲೇ ಬಿಡುಗುಡೆ ಮಾಡಿದ್ದರು. ಬೆಳಗ್ಗಿನ ವರೆಗೆ ಠಾಣೆಯಲ್ಲಿ ಇರಿಸಿಕೊಂಡು ಗಾಂಜಾ ಮತ್ತು ಮದ್ಯದ ನಶೆಯ ಬಗ್ಗೆ ಮೆಡಿಕಲ್ ಮಾಡಿಸಿ, ಕಳಿಸಿದ್ದರು. ಗಾಂಜಾ ಸೇವಿಸಿದ್ದ ಬಗ್ಗೆ ವರದಿಯಲ್ಲಿ ಪಾಸಿಟಿವ್ ಆಗಿಲ್ಲ. ಮದ್ಯದ ಸೇವಿಸಿದ್ದುದು ಪತ್ತೆಯಾಗಿತ್ತು.


ಪೊಲೀಸರ ವಿರುದ್ಧ ಪಿಎಫ್ಐ ಪ್ರತಿಭಟನೆ
ಆದರೆ, ಠಾಣೆಯಿಂದ ಬಿಡುಗಡೆಯಾಗಿದ್ದ ಮೂವರು ಯುವಕರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಉಳ್ಳಾಲ ಪೊಲೀಸರು ಠಾಣೆಯಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ. ಸಿರಾಜ್, ಹಸನ್ ಮತ್ತು ಹಿನಾಯತ್ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದು, ಸಂಘಟನೆ ವತಿಯಿಂದ ಮಂಗಳೂರಿನ ಜ್ಯೋತಿ ವೃತ್ತದಲ್ಲಿ ವಿದ್ಯಾರ್ಥಿಗಳು ಸೇರಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಇನ್ನೊಂದು ತಂಡದ ಒಬ್ಬಾತ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.

ತಾವೇ ಹೊಡೆದಾಡಿ ಪೊಲೀಸರಿಗೆ ಆರೋಪ
ಈ ಬಗ್ಗೆ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ಬಳಿ ಕೇಳಿದಾಗ, ಎರಡೂ ತಂಡಗಳು ತಾವೇ ಹೊಡೆದಾಡಿಕೊಂಡು ಅದರಿಂದ ಕೈ ಮತ್ತು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅದರಿಂದ ಸಣ್ಣ ಪುಟ್ಟ ಗಾಯಗಳಾಗಿದ್ದವು. ಅದನ್ನೇ ಮುಂದಿಟ್ಟು ಈಗ ಪೊಲೀಸರು ಹಲ್ಲೆ ನಡೆಸಿದ್ದಾಗಿ ಆರೋಪ ಮಾಡುತ್ತಿದ್ದಾರೆ. ಹಿಂದು- ಮುಸ್ಲಿಂ ಯುವಕರಾಗಿದ್ದರಿಂದ ಅದು ಕೋಮು ದ್ವೇಷಕ್ಕೆ ತಿರುಗಬಾರದು ಎಂದು ಸಣ್ಣ ಮಟ್ಟಿನ ಕೇಸು ದಾಖಲಿಸಿ, ಹಿಂದಕ್ಕೆ ಕಳಿಸಿದ್ದೆವು. ಯುವಕರ ಭವಿಷ್ಯ ಹಾಳಾಗಬಾರದೆಂಬ ಕಾಳಜಿಯಿಂದ 307 ಕೇಸ್ ಬುಕ್ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
After a bike accident there was a clash between two groups and also the arrested youths have alleged of brutal assault by the Ullal police.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm