ಬ್ರೇಕಿಂಗ್ ನ್ಯೂಸ್
13-03-21 11:16 pm Mangaluru correspondent ಕರಾವಳಿ
ಮಂಗಳೂರು, ಮಾ.13 : ಕುಂಪಲ ಆಶ್ರಯ ಕಾಲನಿ ನಿವಾಸಿ ಪ್ರೇಕ್ಷಾ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಮಗ್ರ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ ಘಟಕವು ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಭಾನುವಾರ ಬೆಳಗ್ಗೆ ಗಾಂಜಾ ವಿರುದ್ಧ ಕುಂಪಲದಲ್ಲಿ ಗ್ರಾಮಸ್ಥರು ಸೇರಿ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ.
ಸೋಮೇಶ್ವರ ಗ್ರಾಮದ ಕುಂಪಲದ ಆಶ್ರಯ ಕಾಲನಿ ನಿವಾಸಿ ಪಿಯುಸಿ ವಿದ್ಯಾರ್ಥಿನಿ ಪ್ರೇಕ್ಷಾ ಸಾವು ಅನುಮಾನಾಸ್ಪದವಾಗಿದ್ದು ಇದು ಆತ್ಮಹತ್ಯೆಯಲ್ಲ. ಕೊಲೆ ಎಂಬ ಸಂಶಯ ವ್ಯಕ್ತವಾಗುತ್ತಿದ್ದು, ಇದರ ಹಿಂದೆ 3 -4 ಯುವಕರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಸ್ಥಳೀಯರ ಮಾಹಿತಿ ಪ್ರಕಾರ ಮೂವರು ಯುವಕರನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದು ವಿಚಾರಣೆಗೊಳಪಡಿಸಿದ್ದರು.
ಯುವತಿ ಸಾವನ್ನಪ್ಪಿದ್ದ ಕೋಣೆಯ ರ್ಯಾಕ್ ಮೇಲೆ ಆಕೆಯ ಮೊಬೈಲ್ ಸಿಕ್ಕಿದ್ದು ,ಮನೆಯ ಮಖ್ಯ ಬಾಗಿಲು ಲಾಕ್ ಆಗಿದ್ದು ಹಿಂಬಾಗಿಲನ್ನು ಮುರಿದದ್ದು ಯಾರು..? ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಪ್ರಕಾರ, ಆ ನಾಲ್ಕು ಯುವಕರು ಆಕೆಯ ಮನೆಯ ಹತ್ತಿರ ಬಂದಿದ್ದಾರೂ ಏಕೆನ್ನುವ ಅಂಶಗಳು ಪ್ರೇಕ್ಷಳ ಸಾವಿನಲ್ಲಿ ಏನೋ ಸಮ್ ಥಿಂಗ್ ಇದೆ ಎನ್ನುವುದರ ಬಗ್ಗೆ ಅನುಮಾನಗಳನ್ನು ಮೂಡಿಸುತ್ತವೆ.
ಆಶ್ರಯ ಕಾಲನಿಯ ಸ್ಥಳೀಯ ಪಂಚಾಯತ್ ಮಾಜಿ ಸದಸ್ಯನೋರ್ವನ ಮನೆಗೆ ಮೊನ್ನೆ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಿದ್ದು ಪೊಲೀಸರು ಸುಮಾರು ಹದಿಮೂರು ಯುವಕರನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಅದರಲ್ಲಿ 11 ಯುವಕರ ವರದಿ ಪಾಸಿಟಿವ್ ಬಂದಿದೆಯಂತೆ. ಇದು ಕುಂಪಲದಲ್ಲಿ ಗಾಂಜಾ ಅವ್ಯಾವಹತವಾಗಿರುವುದಕ್ಕೆ ಕೈಗನ್ನಡಿಯಾಗಿದೆ.
ಯುವತಿಯ ನಿಗೂಢ ಸಾವಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ದುರ್ಗಾವಾಹಿನಿಯು ಡಿಸಿಪಿ ಹರಿರಾಂ ಶಂಕರ್ ಅವರ ಮುಖೇನ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದೆ. ಕುಂಪಲ ಪ್ರದೇಶದಲ್ಲಿ ಅವ್ಯಾಹತ ಗಾಂಜಾ ಮಾರಾಟ ಜಾಲಕ್ಕೆ ಕಡಿವಾಣ ಹಾಕಲು ಮತ್ತು ಪಂಚಾಯತ್ ಸದಸ್ಯ ಮೋಹನ್ ಅವರ ಮನೆ ಮೇಲೆ ನಡೆದ ದಾಳಿ ಖಂಡನೀಯ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದೆ.
ಭಾನುವಾರ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಕುಂಪಲ ಅಶ್ರಯ ಕಾಲನಿಯಿಂದ ಕುಂಪಲ ಶಾಲಾ ಮೈದಾನದ ವರೆಗೆ ಮಾದಕ ವ್ಯಸನದ ವಿರುದ್ಧ ಮೆರವಣಿಗೆ ನಡೆಯಲಿದ್ದು ಊರಿನ ಎಲ್ಲಾ ಸಂಘ ಸಂಸ್ಥೆ ಗಳು ಸಂಘಟನೆಗಳು ಮಹಿಳೆಯರು ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ.
ಇದೇ ವೇಳೆ, ಮೃತ ಯುವತಿಯ ಪ್ರಿಯಕರ ಎನ್ನಲಾದ ಯತಿರಾಜ್ ವಿರುದ್ಧ ಆಕೆಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆದರೆ, ಘಟನೆಯ ನೈಜಾಂಶ ಹೊರಗೆ ತೆಗೆದಿಲ್ಲ.
ಕುಂಪಲ ; ಬೆಡ್ಡಿನಲ್ಲೇ ನಿಂತ ಸ್ಥಿತಿಯಲ್ಲಿ ಮಾಡೆಲಿಂಗ್ ಯುವತಿ ಸಾವು !! ಗಾಂಜಾ ಗ್ಯಾಂಗಿನಿಂದ ಕೊಲೆ ಶಂಕೆ !
ವನ್ ಸೈಡ್ ಲವ್ ; ಆಕೆಯ ಮಾಡೆಲಿಂಗ್, ಫೋಟೋ ಶೂಟ್ ಬಗ್ಗೆ ವಿರೋಧ, ಹರೆಯದ ಹುಡುಗಿಯ ದುರಂತ ಅಂತ್ಯ !!
Durgavahini Members meet dcp Hari Ram in connection to the Suspicious death of Model Preksha in Kumpala, Mangalore
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm