ಬ್ರೇಕಿಂಗ್ ನ್ಯೂಸ್
13-03-21 08:09 pm Mangaluru correspondent ಕರಾವಳಿ
ಮಂಗಳೂರು, ಮಾ.13: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಒಂದೂವರೆ ವರ್ಷ ಪೂರೈಸಿರುವ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆ ಕೇಂದ್ರದ ವರಿಷ್ಠರು ಅತೃಪ್ತಿ ಹೊಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಎರಡು ವರ್ಷದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದ್ದು, ಇಂಥ ಸಂದರ್ಭದಲ್ಲಿ ನಳಿನ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಅಸಾಧ್ಯ ಎಂಬ ಸಂದೇಶವನ್ನು ರಾಜ್ಯ ಉಸ್ತುವಾರಿ ಹೊಂದಿರುವ ಅರುಣ್ ಸಿಂಗ್ ಕೇಂದ್ರಕ್ಕೆ ರವಾನಿಸಿದ್ದಾರೆ ಎನ್ನಲಾಗುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ರಾಜ್ಯಾಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರು ಪ್ರಭಾವಿಗಳಿದ್ದು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಚಾಣಾಕ್ಷರಿದ್ದಾರೆ. ಆದರೆ, ಬಿಜೆಪಿ ರಾಜ್ಯದಲ್ಲಿ ಆಡಳಿತ ಹೊಂದಿದ್ದರೂ, ಆಡಳಿತ ಪಕ್ಷದ ಅಧ್ಯಕ್ಷರಾಗಿ ನಳಿನ್ ಕುಮಾರ್ ಮತ್ತು ಅವರ ತಂಡದ ನಿರ್ವಹಣೆ ಹೇಳಿಕೊಳ್ಳುವಷ್ಟರ ಮಟ್ಟಿಗಿಲ್ಲ. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಹೊಂದಿರುವ ಅರುಣ್ ಸಿಂಗ್ ತಮ್ಮದೇ ವಲಯದಲ್ಲಿ ಮಾಹಿತಿಗಳನ್ನು ಸಂಗ್ರಹಿಸಿದ್ದು, ರಾಜ್ಯ ಬಿಜೆಪಿಯ ಸಂಘಟನೆ ಮತ್ತು ಈಗಿನ ತಂಡದ ನಿರ್ವಹಣೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ರವಾನಿಸಿದ್ದಾರೆ ಎಂಬುದನ್ನು ನಂಬಲರ್ಹ ಮೂಲಗಳು ತಿಳಿಸಿವೆ.
ಅನಂತ ಕುಮಾರ್ ನಿಧನದ ಬಳಿಕ ರಾಜ್ಯದಲ್ಲಿ ಯಡಿಯೂರಪ್ಪ ವಿರುದ್ಧ ಪರ್ಯಾಯ ಬಣ ಸೃಷ್ಟಿಸಿಕೊಂಡಿರುವ ಬಿ.ಎಲ್. ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೆಸರಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಮತ್ತು ರಾಜ್ಯದ ಬಿಜೆಪಿ ತಂಡದ ಮೇಲೆ ಹಿಡಿತ ಸಾಧಿಸಿದ್ದಾರೆ ಎನ್ನುವುದು ಅರುಣ್ ಕುಮಾರ್ ಅರಿವಿಗೆ ಬಂದಿದೆ. ಯಡಿಯೂರಪ್ಪ ಮತ್ತು ಸಂತೋಷ್ ಬಣದ ಬಗ್ಗೆ ಪಕ್ಷದಲ್ಲಿ ಬದಿಗೆ ಸರಿಸಲ್ಪಟ್ಟ ನಾಯಕರು ಅರುಣ್ ಕುಮಾರ್ ಗಮನಕ್ಕೆ ತಂದಿದ್ದಾರೆ. ನಳಿನ್ ಕುಮಾರ್ ಅಧ್ಯಕ್ಷರಾಗಿ ನೇಮಕವಾದ ಬಳಿಕ ರಾಜ್ಯ ಘಟಕದಲ್ಲಿಯೂ ಹಲವು ಬದಲಾವಣೆಗಳಾಗಿದ್ದವು. ಸಂತೋಷ್ ಬಣಕ್ಕೆ ನಿಷ್ಠರಾದವರನ್ನು ಪಕ್ಷದ ಆಯಕಟ್ಟಿನ ಜಾಗಗಳಲ್ಲಿ ಕೂರಿಸಲಾಗಿತ್ತು ಎನ್ನುವ ಆರೋಪಗಳಿದ್ದವು.
ಮುಂದಿನ ಚುನಾವಣೆ ಹೊತ್ತಿಗೆ ಬಿ.ಎಸ್. ಯಡಿಯೂರಪ್ಪ ಅವರಿಗೆ 81 ವರ್ಷ ತುಂಬಲಿದ್ದು, ಚುನಾವಣೆ ಸ್ಪರ್ಧೆಯ ಜೊತೆ ಹಿಂದಿನ ರೀತಿ ರಾಜ್ಯದಲ್ಲಿ ಓಡಾಟ ಮತ್ತು ಚುನಾವಣೆ ಎದುರಿಸುವುದೂ ಅವರಿಂದ ಸಾಧ್ಯವಾಗಲ್ಲ. ಇಂಥ ಪರಿಸ್ಥಿತಿಯಲ್ಲಿ ಈಗಿನ ತಂಡವನ್ನು ನೆಚ್ಚಿಕೊಂಡರೆ, ಪಕ್ಷದ ಗೆಲುವು ಕಷ್ಟ ಎನ್ನುವ ಸಂದೇಶ ಕೇಂದ್ರಕ್ಕೆ ಹೋಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಅಧ್ಯಕ್ಷರ ರೀತಿ ಪ್ರಭಾವಿಗಳನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಈಗಿನ ಸಂಪೂರ್ಣ ತಂಡವನ್ನು ಬದಲಾಯಿಸಲು ಕೇಂದ್ರದ ವರಿಷ್ಠರು ಚಿಂತಿಸಿದ್ದಾರೆ ಎನ್ನಲಾಗುತ್ತಿದೆ.
ಯಾಕಂದ್ರೆ, ರಾಜ್ಯದಲ್ಲಿ ಬಿಜೆಪಿಯ ಮಟ್ಟಿಗೆ ಯಡಿಯೂರಪ್ಪ ಬಿಟ್ಟರೆ ಬೇರೊಬ್ಬ ಪ್ರಭಾವಿ ನಾಯಕರಿಲ್ಲ. ಆರ್.ಅಶೋಕ್, ಈಶ್ವರಪ್ಪ, ಪ್ರಹ್ಲಾದ ಜೋಷಿ, ಜಗದೀಶ ಶೆಟ್ಟರ್ ಈ ಹಿಂದೆ ಅಧ್ಯಕ್ಷರಾಗಿ ಮತ್ತು ಮಂತ್ರಿಗಳಾಗಿದ್ದರೂ ಯಡಿಯೂರಪ್ಪ ರೀತಿ ಪ್ರಭಾವ ಬೆಳೆಸ್ಕೊಳ್ಳಲು ಸಾಧ್ಯವಾಗಿಲ್ಲ. ಇಂಥ ಸ್ಥಿತಿಯಲ್ಲೇ ಕಳೆದ ಬಾರಿ ಸಂತೋಷ್ ಮತ್ತು ಬಣ ಸಾಮಾನ್ಯ ಕಾರ್ಯಕರ್ತನಿಗೆ ಅಧ್ಯಕ್ಷ ಪದವಿ ನೀಡಿದ್ದೇವೆ ಎನ್ನುವ ಸಂದೇಶವನ್ನು ರವಾನಿಸುವ ನೆಪದಲ್ಲಿ ನಳಿನ್ ಕುಮಾರ್ ಅವರನ್ನು ರಾಜ್ಯಾಧ್ಯಕ್ಷ ಪದವಿಗೆ ತಂದು ಕೂರಿಸಿತ್ತು.
ಇದೇ ವೇಳೆ, ಸಿಎಂ ಬದಲಾವಣೆ ಮಾಡಬೇಕೆಂಬ ಕೂಗು ಎದ್ದಿದ್ದರೂ, ಅದನ್ನು ಶಮನಗೊಳಿಸಲು ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಈ ನಡುವೆ ಕೇಂದ್ರದ ವರಿಷ್ಠರು ಸಿಎಂ ಬದಲಾವಣೆಗೆ ಮನ ಮಾಡಿದ್ದರೂ, ಈ ರೀತಿಯ ಬದಲಾವಣೆಯಿಂದ ಸರಕಾರಕ್ಕೆ ಕಷ್ಟ ಎದುರಾಗಲಿದೆ ಎನ್ನುವ ಸಂದೇಶ ರವಾನೆಯಾಗಿತ್ತು. ಹೀಗಾಗಿ ಯಡಿಯೂರಪ್ಪ ಅವರನ್ನು ಬದಲಾಯಿಸಲು ಹೋಗಿ ಅಪಾಯ ತಂದೊಡ್ಡುವ ಕೆಲಸಕ್ಕೆ ಕೇಂದ್ರ ವರಿಷ್ಠರು ಮುಂದಾಗಿರಲಿಲ್ಲ. ಇನ್ನೆರಡು ವರ್ಷ ಹೇಗೂ ಕಾಲ ತಳ್ಳಿದರೂ, ಮುಂದಿನ ಅವಧಿಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಈಗ ಚಿಂತೆಗೆ ಕಾರಣವಾಗಿದೆ.
ಯತ್ನಾಳ್ ಜೊತೆ ಕಾಣಿಸಿದ್ದ ನಳಿನ್ !
ಎರಡು ದಿನಗಳ ಹಿಂದೆ ಮಾ.10ರಂದು ರಾತ್ರಿ ಬಿಜೆಪಿಯಲ್ಲಿ ರೆಬಲ್ ಆಗಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜೊತೆಯಾಗಿ ಮಂಗಳೂರು ಏರ್ಪೋರ್ಟಲ್ಲಿ ಕಾಣಿಸಿಕೊಂಡಿದ್ದರು. ಪ್ರತಿ ಬಾರಿ ಬಿಜೆಪಿ ನಾಯಕರು ಮತ್ತು ಸಿಎಂ ಯಡಿಯೂರಪ್ಪ ಅವರನ್ನು ಟೀಕಿಸುತ್ತಾ ಕಾಲೆಳೆಯುತ್ತಿರುವ ಯತ್ನಾಳ್ ಜೊತೆ ನಳಿನ್ ಕುಮಾರ್ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಇವರ ನಡುವೆ, ಒಳಗೊಳಗೆ ಕನೆಕ್ಷನ್ ಇದೆಯೆಂಬ ಮಾತು ಹರಿದಾಡುತ್ತಿದ್ದರೂ, ಎರಡು ದಿನಗಳ ಹಿಂದೆ ಇಬ್ಬರು ಕೂಡ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದ ಫೋಟೋಗಳು ಬಿಜೆಪಿ ವಲಯದಲ್ಲಿ ಹರಿದಾಡಿದ್ದವು.
ಈ ಬೆಳವಣಿಗೆ ನಡೆದ ಎರಡೇ ದಿನದಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೊರಬಿದ್ದಿದ್ದು, ಚರ್ಚೆಗೆ ಗ್ರಾಸವಾಗಿದೆ. ಮಂಗಳೂರಿಗೆ ಬಂದಿದ್ದ ಯತ್ನಾಳ್ ಮತ್ತು ನಳಿನ್ ಕುಮಾರ್ ರಹಸ್ಯ ಜಾಗದಲ್ಲೇನಾದ್ರೂ ಮಾತುಕತೆ ನಡೆಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಯತ್ನಾಳ್ ಅವರ ಆಪ್ತರಲ್ಲಿ ಕೇಳಿದರೆ, ಏನೋ ಖಾಸಗಿ ಮೀಟಿಂಗ್ ವಿಚಾರಕ್ಕೆ ಬಂದಿದ್ದರು, ನಮಗೇನು ಗೊತ್ತಿಲ್ರೀ ಎಂದಿದ್ದಾರೆ.
ಈ ಮಧ್ಯೆ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕುಂದಾಪುರದಲ್ಲಿ ಸುದ್ದಿಗಾರರು ಸ್ವತಃ ನಳಿನ್ ಕುಮಾರ್ ಅವರನ್ನೇ ಪ್ರಶ್ನೆ ಮಾಡಿದ್ದು, ಅದು ದೆಹಲಿ ವರಿಷ್ಠರಿಗೆ ಬಿಟ್ಟಿದ್ದು. ನನಗೇನು ಮಾಹಿತಿ ಇಲ್ಲ ಎಂದು ಮುಖ ತಿರುಗಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ ಒಳಗೆ ಎಲ್ಲವೂ ಸರಿಯಿಲ್ಲ ಎನ್ನೋದಂತೂ ಹೊರಗೆ ಬಿದ್ದಿದೆ.
Karnataka BJP state president Naleen Kumar Kateel to soon loose his post as Bjp state incharge minister Arun Kumar sends a negative opinion report on Naleens work to the central govt.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm