ಬ್ರೇಕಿಂಗ್ ನ್ಯೂಸ್
13-03-21 12:01 pm Mangalore Correspondent ಕರಾವಳಿ
ಉಳ್ಳಾಲ, ಮಾ.13: ಪತ್ನಿಗೆ ಸೀಮಂತ ಮಾಡಿ ಹೆರಿಗೆಗೆಂದು ತವರು ಮನೆಗೆ ಕಳುಹಿಸಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ವ್ಯಕ್ತಿ ಇಂದು ಬೆಳಗ್ಗೆ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕುಂಪಲ ಮೂರುಕಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಕಡಬ ಮರ್ದಾಳ, ಬಲ್ಯ ನಿವಾಸಿ ರಾಧಾಕೃಷ್ಣ ಗೌಡ (40) ಯಾನೆ ಬಿಟ್ಟು ಮೃತ ವ್ಯಕ್ತಿ. ಉಳ್ಳಾಲ ಬೈಲಲ್ಲಿ ರಿಕ್ಷಾ ಗ್ಯಾರೇಜ್ ಹೊಂದಿದ್ದ ರಾಧಾಕೃಷ್ಣ ಅವರು ಸುಮಾರು 25 ವರುಷಗಳಿಂದಲೂ ಕುಂಪಲ ಪರಿಸರದಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸಿ ಎಲ್ಲರಿಗೂ ಪರಿಚಿತರಾಗಿದ್ದರು. ಎರಡು ವರ್ಷದಿಂದ ಮೂರುಕಟ್ಟೆಯ ರಾಜ್ ಮೋಹನ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ನೆಲೆಸಿದ್ದು ವರ್ಷದ ಹಿಂದಷ್ಟೆ ಕಡಬ ನಿವಾಸಿ ಜಯಂತಿ ಎಂಬವರನ್ನು ಮದುವೆ ಆಗಿದ್ದರು. ಪತ್ನಿ ಜಯಂತಿ ಅವರು ದೇರಳಕಟ್ಟೆ ಯೆನಪೋಯದಲ್ಲಿ ನರ್ಸ್ ಆಗಿದ್ದು ಕಳೆದ ಎರಡು ವಾರದ ಹಿಂದಷ್ಟೆ ಹೆರಿಗೆಗೆಂದು ತವರು ಮನೆ ಸೇರಿದ್ದರು.
ಮನೆ ಮಾಲಿಕ ರಾಜ್ ಮೋಹನ್ ಅವರು ಇಂದು ಬೆಳಗ್ಗೆ ಎದ್ದಾಗ ದಿನ ನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದು ಅಂಗಳದಲ್ಲಿ ತಿರುಗುತ್ತಿದ್ದ ರಾಧಾಕೃಷ್ಣ ಅವರು ಎದ್ದಿರಲಿಲ್ಲ. ಸ್ವಲ್ಪ ತಡವಾಗಿ ನೋಡಿದಾಗಲೂ ಎದ್ದಿರದನ್ನು ಕಂಡು ಪಕ್ಕದ ಬಾಡಿಗೆ ಮನೆಯವರಲ್ಲಿ ವಿಚಾರಿಸಿದಾಗ ರಾಧಾಕೃಷ್ಣ ತಂಗಿದ್ದ ಮನೆಯೊಳಗೆ ನಡು ರಾತ್ರಿ ವ್ಯಕ್ತಿ ಬಿದ್ದ ಶಬ್ದ ಮತ್ತು ವಾಂತಿ ಮಾಡಿದ ವಾಕರಿಕೆ ಸದ್ದು ಕೇಳಿದೆ ಎಂದು ಹೇಳಿದ್ದಾರೆ.
ಅನುಮಾನಗೊಂಡ ಮನೆ ಮಾಲಿಕ ರಾಜ್ ಮೋಹನ್ ಅವರು ಮುಖ್ಯ ಬಾಗಿಲ ಎಡೆಯಿಂದ ನೋಡಿದಾಗ ರಾಧಾಕೃಷ್ಣ ಅವರು ಒಳ ಉಡುಪಲ್ಲೇ ಅಡುಗೆ ಕೋಣೆಯಲ್ಲಿ ಬಿದ್ದಿರುವುದನ್ನ ಕಂಡಿದ್ದು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಎಸ್.ಐ ಪ್ರದೀಪ್ ಅವರು ಮುಖ್ಯ ಬಾಗಿಲು ಒಡೆದು ಒಳ ನುಗ್ಗಿ ಪರಿಶೀಲಿಸಿದಾಗ ರಾಧಾಕೃಷ್ಣ ಅವರು ಸಾವನ್ನಪಿರುವ ಬಗ್ಗೆ ತಿಳಿದಿದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು
ಕುಂಪಲ ಮತ್ತು ಉಳ್ಳಾಲ ಪ್ರದೇಶದಲ್ಲಿ ಆತ್ಮೀಯರಾಗಿದ್ದ ರಾಧಾಕೃಷ್ಣ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದರಂತೆ. ನಿನ್ನೆ ರಾತ್ರಿ ರಾಧಾಕೃಷ್ಣ ಅವರು ತೊಕ್ಕೊಟ್ಟಲ್ಲಿ ಚರುಮುರಿ ತಿನ್ನುತ್ತಿದ್ದುದನ್ನು ಪರಿಚಯದ ರಿಕ್ಷಾ ಚಾಲಕ ನೋಡಿದ್ದಾರೆ. ಅಧಿಕ ರಕ್ತದೊತ್ತಡದಿಂದಲೇ ರಾಧಾಕೃಷ್ಣ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕುಂಪಲ ; ಬೆಡ್ಡಿನಲ್ಲೇ ನಿಂತ ಸ್ಥಿತಿಯಲ್ಲಿ ಮಾಡೆಲಿಂಗ್ ಯುವತಿ ಸಾವು !! ಗಾಂಜಾ ಗ್ಯಾಂಗಿನಿಂದ ಕೊಲೆ ಶಂಕೆ !
ವನ್ ಸೈಡ್ ಲವ್ ; ಆಕೆಯ ಮಾಡೆಲಿಂಗ್, ಫೋಟೋ ಶೂಟ್ ಬಗ್ಗೆ ವಿರೋಧ, ಹರೆಯದ ಹುಡುಗಿಯ ದುರಂತ ಅಂತ್ಯ !!
A man was found dead inside his house in a suspicious way at Kampala, Ullal in Mangalore. It is believed that his wife was pregnant and she was at her parent's house. Then the deceased has been identified as Radhakrishna Gowda (40).
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm