ಬ್ರೇಕಿಂಗ್ ನ್ಯೂಸ್
12-03-21 08:41 pm Mangaluru correspondent ಕರಾವಳಿ
ಉಳ್ಳಾಲ, ಮಾ.12: ಕುಂಪಲದ ಆಶ್ರಯ ಕಾಲನಿಯ ತನ್ನ ಮನೆಯಲ್ಲೇ ಅನುಮಾನಸ್ಪದವಾಗಿ ಸಾವು ಕಂಡಿದ್ದ ಅಪ್ರಾಪ್ತ ಯುವತಿ, ರೂಪದರ್ಶಿ ಪ್ರೇಕ್ಷಾಳ ಮನೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಸಚಿವ ಅಂಗಾರರಲ್ಲಿ ಮೃತ ಪ್ರೇಕ್ಷಾಳ ತಂದೆ ಚಿತ್ತಪ್ರಸಾದ್ ಅವರು ಅಳಲನ್ನು ತೋಡಿದ್ದಾರೆ. ಮಗಳ ಮಾಡೆಲಿಂಗ್ ಹವ್ಯಾಸಕ್ಕೆ ನಾವು ಸಂಪೂರ್ಣ ಬೆಂಬಲ ನೀಡಿದ್ದೆವು. ಬುಧವಾರ ಮಧ್ಯಾಹ್ನ ಬೆಂಗಳೂರಿಗೆ ಫೋಟೊ ಶೂಟ್ ತೆರಳಬೇಕಿದ್ದ ನನ್ನ ಮಗಳು ಹೆಣವಾಗಿ ಮಸಣ ಸೇರಿದ್ದರ ಹಿಂದೆ ಕಾಣದ ಕೈಗಳ ನೆರಳಿದೆ. ಶಂಕಿತರ ಹೆಸರನ್ನು ಈಗಾಗಲೇ ಪೊಲೀಸರಿಗೆ ತಿಳಿಸಿದ್ದು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸಚಿವರಲ್ಲಿ ವಿನಂತಿಸಿದ್ದಾರೆ.
ಗಾಂಜಾ ಗ್ಯಾಂಗ್ ಮುಂದೆ ಕುಂಪಲ ಗಢ ಗಢ !
ಯುವತಿಯ ಅಸಹಜ ಸಾವಿನ ಬಗ್ಗೆ ಆರಂಭದಲ್ಲೇ ಗಟ್ಟಿ ಧ್ವನಿ ಎತ್ತಿದ್ದ ಸ್ಥಳೀಯ ಮಾಜಿ ಪುರಸಭಾ ಸದಸ್ಯ ಮೋಹನ್ ಶೆಟ್ಟಿ ಈ ಸಾವಿನ ಹಿಂದೆ ಸ್ಥಳೀಯ ಗಾಂಜಾ ಗ್ಯಾಂಗಿನ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಈ ಕಾರಣಕ್ಕೋ ಏನೋ ಗುರುವಾರ ಮಧ್ಯರಾತ್ರಿ ಗುಂಪೊಂದು ಮೋಹನ್ ಶೆಟ್ಟಿ ಅವರ ಮನೆಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಂಪಲ ಪರಿಸರದ ಶಂಕಿತ ಹತ್ತಕ್ಕೂ ಹೆಚ್ಚು ಗಾಂಜಾ ವ್ಯಸನಿಗಳನ್ನು ವಶಕ್ಕೆ ತೆಗೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆಂದು ತಿಳಿದು ಬಂದಿದೆ.
ಕುಂಪಲ ಪರಿಸರದಲ್ಲಿ ಹದಿಹರೆಯದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿದ್ದು ಗಾಂಜಾ ವಹಿವಾಟು ನಡೆಸುವ ಹುಡುಗರ ದೊಡ್ಡ ತಂಡವೇ ಕುಂಪಲದಲ್ಲಿ ಸಕ್ರಿಯವಾಗಿದೆ. ಗಾಂಜಾ ಗ್ಯಾಂಗ್ ಇದೀಗ ಕುಂಪಲವನ್ನು ಗಢ ಗಢ ನಡುಗಿಸಲಾರಂಭಿಸಿದೆ. ಸ್ಥಳೀಯರು ಮತ್ತು ಮಾಜಿ ಜಿಪಂ ಉಪಾಧ್ಯಕ್ಷರೂ ಆದ ಸತೀಶ್ ಕುಂಪಲ ಕೂಡ ತನಗೆ ಈ ಹಿಂದೆ ಗಾಂಜಾ ಗುಂಪು ಅಟ್ಯಾಕ್ ಮಾಡಿದ್ದರ ಬಗ್ಗೆ ಸಚಿವರ ಮುಂದೆ ನೋವು ಹೇಳ್ಕೊಂಡಿದ್ದಾರೆ. ಸಚಿವ ಅಂಗಾರ ಅವರು ಗಾಂಜಾ ಮಾಫಿಯಾದ ವಿರುದ್ಧ ಗ್ರಾಮಸ್ಥರೆಲ್ಲರೂ ಒಂದಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.
Suspicious Murder Death of Model girl Preksha in Kumpala in Mangalore, Minister Angara visits her house and consoles family.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm