ಬ್ರೇಕಿಂಗ್ ನ್ಯೂಸ್
12-03-21 04:35 pm Mangalore Correspondent ಕರಾವಳಿ
ಮಂಗಳೂರು, ಮಾ.12: ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಕೋಚಿಂಗ್ ಅತಿಮುಖ್ಯ. ದೇಶದಲ್ಲಿ ಜೆಇಇ, ಮೆಡಿಕಲ್ ಶಿಕ್ಷಣದಲ್ಲಿ ಕೋಚಿಂಗ್ ಕಾರಣಕ್ಕೆ ಹೆಸರು ಪಡೆದಿರುವ ಸಂಸ್ಥೆ ಅಲೆನ್ ಕೇರಿಯರ್ ಇನ್ ಸ್ಟಿಟ್ಯೂಟ್. ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಅಲೆನ್ ಸಂಸ್ಥೆಯವರು ಇದೀಗ ಶಿಕ್ಷಣ ಕಾಶಿ ಎಂದೇ ಹೆಸರು ಗಳಿಸಿರುವ ಮಂಗಳೂರಿನಲ್ಲೂ ಶಾಖೆ ಆರಂಭಿಸಿದ್ದಾರೆ.
ಮಂಗಳೂರಿನ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಜೊತೆ ಅಲೆನ್ ಗ್ರೂಪ್ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದ್ದು, ಮೊದಲ ಬಾರಿಗೆ ಮಂಗಳೂರಿನಲ್ಲಿ ಉನ್ನತ ಶಿಕ್ಷಣಕ್ಕೆ ಹಾತೊರೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿ ನಗರದ ಸಿಟಿ ಪಾಯಿಂಟ್ ಬಿಲ್ಡಿಂಗಿನ ಮೂರನೇ ಮಹಡಿಯಲ್ಲಿ ಮತ್ತು ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಎರಡು ಕೋಚಿಂಗ್ ಕ್ಯಾಂಪಸ್ ಆರಂಭಿಸಿದೆ.
ಮಂಗಳೂರಿನಲ್ಲಿ ಅಲೆನ್ ಕೇರಿಯರ್ ಸಂಸ್ಥೆಯ ಅಧಿಕೃತ ತರಬೇತಿ ಕೇಂದ್ರವನ್ನು ಖ್ಯಾತ ವೈದ್ಯ ಹಾಗೂ ನಿಟ್ಟೆ ಯೂನಿವರ್ಸಿಟಿಯ ಸಹ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ ಉದ್ಘಾಟಿಸಿದರು. ವಿಕಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೃಷ್ಣ ಪಾಲೆಮಾರ್, ಅಲೆನ್ ಸಂಸ್ಥೆಯ ಉಪಾಧ್ಯಕ್ಷ ಪಂಕಜ್ ಅಗರ್ವಾಲ್, ಅಕಾಡೆಮಿಕ್ ಹೆಡ್ ಮಹೇಶ್ ಯಾದವ್, ಮಂಗಳೂರು ಕ್ಯಾಂಪಸ್ ಹೆಡ್ ವಿಪಿನ್ ನಾರಾಯಣ್ ಉಪಸ್ಥಿತರಿದ್ದರು.
ಇಂಜಿನಿಯರಿಂಗ್ ಅಥವಾ ಮೆಡಿಕಲ್ ವಿಭಾಗದಲ್ಲಿ ಉನ್ನತ ಅಧ್ಯಯನ ಮಾಡಬಯಸುವ 8ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಎರಡು ಕ್ಯಾಂಪಸ್ ತೆರೆಯಲಾಗಿದ್ದು, ಮಂಗಳೂರಿನ ವಿದ್ಯಾರ್ಥಿಗಳು ಇನ್ನು ಉನ್ನತ ಶಿಕ್ಷಣಕ್ಕಾಗಿ ಹೈದರಾಬಾದ್, ಬೆಂಗಳೂರು, ಮುಂಬೈ ತೆರಳಬೇಕಾಗಿಲ್ಲ. ತಮ್ಮ ಊರಲ್ಲೇ ಅದೇ ರೀತಿಯ ಹೈಲೆವೆಲ್ ಟೀಚಿಂಗ್ ಫೆಸಿಲಿಟಿ ಸಿಗಲಿದೆ ಎನ್ನುವ ಮಾತನ್ನು ಅಲೆನ್ ಸಂಸ್ಥೆಯ ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.
ಅಲ್ಲದೆ, ಪ್ರತಿ ವರ್ಷ ಜೆಇಇ ಪರೀಕ್ಷೆಯಲ್ಲಿ ಮೊದಲ ಹತ್ತು ರ್ಯಾಂಕ್ ವಿಜೇತರಲ್ಲಿ ಹೆಚ್ಚಿನವರು ಅಲೆನ್ ಸಂಸ್ಥೆಯಲ್ಲಿ ತರಬೇತು ಪಡೆದವರು. 33 ವರ್ಷಗಳ ಹಿಂದೆ ರಾಜಸ್ಥಾನದ ಕೋಟದಲ್ಲಿ ಆರಂಭಿಸಿದ ಅಲೆನ್ ಸಂಸ್ಥೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಐದು ವರ್ಷಗಳ ಹಿಂದೆ ಕೇಂದ್ರ ಆರಂಭಿಸಿದ್ದು, 12 ಸಾವಿರ ವಿದ್ಯಾರ್ಥಿಗಳಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ಸುಮಾರು 29 ಸಾವಿರ ವಿದ್ಯಾರ್ಥಿಗಳು ನಮ್ಮ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಪಂಕಜ್ ಅಗರ್ವಾಲ್ ಹೇಳಿದರು.
2014ರಲ್ಲಿ ಒಂದೇ ವರ್ಷದಲ್ಲಿ 66 ಸಾವಿರ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗೆ ಸೇರುವ ಮೂಲಕ ಅಲೆನ್ ಸಂಸ್ಥೆ ಲಿಮ್ಕಾ ದಾಖಲೆ ಸ್ಥಾಪನೆ ಮಾಡಿತ್ತು. ಒಂದೇ ವರ್ಷದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಅಡ್ಮಿಶನ್ ಮಾಡಿದ್ದಕ್ಕಾಗಿ ಲಾರ್ಜೆಸ್ಟ್ ಎಜುಕೇಶನ್ ಇನ್ ಸ್ಟಿಟ್ಯೂಟ್ ಎಂಬ ಹೆಗ್ಗಳಿಕೆಯನ್ನು ಲಿಮ್ಕಾ ಬುಕ್ ನೀಡಿತ್ತು. 2017ರಲ್ಲಿ ಅಲೆನ್ ಸಂಸ್ಥೆಯ ವಿದ್ಯಾರ್ಥಿಗಳು ಏಮ್ಸ್ ಪರೀಕ್ಷೆಯಲ್ಲಿ ಟಾಪ್ ಟೆನ್ ರ್ಯಾಂಕ್ ಪಡೆದಿದ್ದಕ್ಕಾಗಿ ಮತ್ತೊಮ್ಮೆ ಲಿಮ್ಕಾ ದಾಖಲೆ ಸೇರಿತ್ತು ಎಂದು ಮಾಹಿತಿ ನೀಡಿದ ಅಕಾಡೆಮಿಕ್ ಹೆಡ್ ಮಹೇಶ್ ಯಾದವ್, ನಮ್ಮಲ್ಲಿ ಯೂನಿಫಾರ್ಮ್ ಮತ್ತು ಶಿಸ್ತಿಗೆ ಮೊದಲ ಪ್ರಾಶಸ್ತ್ಯ. ಜೊತೆಗೆ ಭಾರತೀಯ ಸಂಸ್ಕೃತಿಯನ್ನು ಬೋಧಿಸುತ್ತೇವೆ. ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ಪ್ರಾರ್ಥನೆಯನ್ನು ಕಡ್ಡಾಯ ಮಾಡಿದ್ದೇವೆ ಎಂದು ಹೇಳಿದರು.
ಅಲೆನ್ ಸಂಸ್ಥೆಯ ಜೊತೆಗಿನ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ ವಿಕಾಸ್ ಕಾಲೇಜಿನ ಅಧ್ಯಕ್ಷ ಕೃಷ್ಣ ಪಾಲೆಮಾರ್, ನಮ್ಮ ವಿಕಾಸ್ ಕಾಲೇಜು ಕಟ್ಟಡದಲ್ಲಿ ಮತ್ತು ಸಿಟಿ ಪಾಯಿಂಟ್ ಬಿಲ್ಡಿಂಗ್ ನಲ್ಲಿ ಪ್ರತ್ಯೇಕ ಕೋಚಿಂಗ್ ಕ್ಯಾಂಪಸ್ ಮಾಡಲಿದ್ದೇವೆ. ನಮ್ಮ ಶಿಕ್ಷಣದ ಜೊತೆಗೆ ಹೆಚ್ಚುವರಿಯಾಗಿ ಅಲೆನ್ ಸಂಸ್ಥೆಯ ನುರಿತ ಶಿಕ್ಷಕರು ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣದ ತರಬೇತಿ ನೀಡಲಿದ್ದಾರೆ. ಈಗಲೇ ಆರು ಮಂದಿ ಸಿಬಂದಿ ಬಂದಿದ್ದಾರೆ. ಒಟ್ಟು 26 ಮಂದಿ ಅಲೆನ್ ಸಂಸ್ಥೆಯ ಸಿಬಂದಿ ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
Video:
Mangalore Allen career institute now opens in Mangalore for Quality Education with Vikas Groups of Institutions. The program of inauguration was held at Ocean Pearl in Mangalore here on 12th March 2021.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm