ಬ್ರೇಕಿಂಗ್ ನ್ಯೂಸ್
03-03-21 11:07 pm Mangaluru correspondent ಕರಾವಳಿ
ಪುತ್ತೂರು, ಮಾ.3: ಇತ್ತೀಚೆಗೆ ರಕ್ಷಿತಾರಣ್ಯದಲ್ಲಿ ಮರ ಕಳ್ಳತನ ಆಗಿರುವ ಬಗ್ಗೆ ದೂರು ನೀಡಿ, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದ ವ್ಯಕ್ತಿಯ ಮನೆಗೆ ಮಧ್ಯರಾತ್ರಿ ಸ್ಥಳೀಯ ಅರಣ್ಯ ಅಧಿಕಾರಿಗಳ ತಂಡ ದಾಳಿ ನಡೆಸಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಮರಗಳ್ಳತನದಲ್ಲಿ ಅರಣ್ಯ ಅಧಿಕಾರಿಗಳ ಶಾಮೀಲಾತಿ ಬಗ್ಗೆ ಕಡಬ ಸಮೀಪದ ಪ್ರಸಾದ್ ಎಂಬವರು ದೂರು ನೀಡಿದ್ದರು. ಇದರಿಂದ ತಮ್ಮ ಹುಳುಕು ಹೊರಬರುವ ಭಯದಲ್ಲಿ ನಿನ್ನೆ ರಾತ್ರಿ 1:30 ರ ವೇಳೆಗೆ ಏಕಾಏಕಿ ದಾಳಿ ನಡೆಸಿ, ಮನೆಯವರನ್ನು ದಬಾಯಿಸಿದ್ದಾರೆ ಎನ್ನಲಾಗಿದೆ.10 ರಿಂದ 15 ಜನ ಅಧಿಕಾರಿಗಳು ದಾಳಿ ನಡೆಸಿದ್ದು ಮನೆಯಲ್ಲಿದ್ದ ಪ್ರಸಾದ್ ಅವರ ಪತ್ನಿ ಮತ್ತು ಪುಟ್ಟ ಮಗುವಿಗೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಪ್ರಸಾದ್ ಅವರ ವೃದ್ಧ ತಂದೆ ತಾಯಿಯ ಮೇಲೆಯೂ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಮನೆಯ ಒಳಗೆ ಜಾಲಾಡಿದ ಸಿಬಂದಿ ಹಣ, ಕೆಲವು ಉಪಕರಣಗಳು, ಹಳೆಯ ಹಲಗೆ ಹೊತ್ತೊಯ್ದಿದ್ದಾರೆ ಎಂದು ಪ್ರಸಾದ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಸಾದ್ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು ದಾಳಿ ವೇಳೆ, ನೀವು ಮಾಧ್ಯಮಗಳಿಗೆ ತಿಳಿಸಿ ನಮ್ಮ ಮಾನ ತೆಗೆದಿದ್ದೀರಿ ಎಂದು ಗದರಿದ್ದು ದಾಖಲಾಗಿದೆ. ಈ ವೇಳೆ, ಕಡಬ ಪೊಲೀಸ್ ಸಿಬ್ಬಂದಿಯೂ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಆಗಮಿಸಿದ್ದರು.
Forest officials in Puttur assault on a man and his family for giving complaint against forest officers being involved in illegal activties.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm