ಬ್ರೇಕಿಂಗ್ ನ್ಯೂಸ್
22-02-21 02:12 pm Mangalore Correspondent ಕರಾವಳಿ
ಮಂಗಳೂರು, ಫೆ.22 : ಪಿಎಫ್ಐ, ಎಸ್ಡಿಪಿಐ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿದ್ದರೂ, ಅವನ್ನು ನಿಷೇಧಿಸಲು ಬಿಜೆಪಿ ಮುಂದಾಗಲ್ಲ. ಬಿಜೆಪಿಗೆ ಎಸ್ ಡಿಪಿಐ ಬೇಕು, ಇವರದ್ದೇ 'ಬಿ' ಟೀಂ ಪಿಎಫ್ಐ, ಎಸ್ಡಿಪಿಐ ಗಳಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಉಡುಪಿಗೆ ತೆರಳಲು ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಪಿಎಫ್ಐ ರ್ಯಾಲಿ ನಡೆಸಲು ಅನುಮತಿ ಕೊಟ್ಟಿದ್ದು ಯಾರು ? ಇದೇ ಬಿಜೆಪಿ ಆಡಳಿತವೇ ಅಲ್ಲವೇ..? ಈಗ ಪಿಎಫ್ಐ, ಎಸ್ ಡಿಪಿಐ ರದ್ದು ಮಾಡುತ್ತೇವೆ, ಆಕ್ಷನ್ ತಗೊಳ್ತೀವಿ ಅಂತಿದ್ದಾರೆ. ಇವ್ರು ಆ ಕೆಲಸಾನ ಮಾಡಲ್ಲ. ಯಾಕಂದ್ರೆ, ಇವರದ್ದೇ ಬಿ ಟೀಮ್ ಅವರದ್ದು ಎಂದು ಬಿಜೆಪಿ ನಾಯಕರನ್ನು ಮೂದಲಿಸಿದರು.

ಪಿಎಫ್ಐ ರದ್ದು ಮಾಡಬೇಕೆಂದಿದ್ದರೆ ಸಾಕಷ್ಟು ಸಾಕ್ಷ್ಯಗಳು ಇವರ ಮುಂದೆನೇ ಇವೆ. ನಿಷೇಧ ಮಾಡಬೇಕೂಂತ ಇದ್ದರೆ ಅದನ್ನು ಕೇಂದ್ರಕ್ಕೆ ಕಳುಹಿಸಿ ನಿಷೇಧ ಮಾಡಬಹುದು. ಇವರದೇ ಸರಕಾರ ಕೇಂದ್ರದಲ್ಲೂ ಇದೆ. ಆದರೆ, ಇವರಿಗೆ ಅದು ಬೇಕಿಲ್ಲ. ಎಸ್ಡಿಪಿಐಯನ್ನು ಬೆಳೆಸುತ್ತಿರುವುದು ಕೂಡ ಇದೇ ಬಿಜೆಪಿ. ಇವರು ತಮ್ಮ ಬೇಳೆ ಬೇಯಿಸಿಕೊಳ್ಳಲೆಂದೇ ಇಂಥವನ್ನು ಪೋಷಿಸಿಕೊಂಡು ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಪುದುಚೇರಿಯಲ್ಲಿ ಸಿಎಂ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿದ್ದು ಹೋದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾರಾಯಣಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಇರಬಾರದು. ಅವರ ಅಧಿಕಾರಾವಧಿಯಲ್ಲಿ ಚುನಾವಣೆ ನಡೆಯಬಾರದು ಎಂದು ಸರ್ಕಾರ ಕಿತ್ತು ಹಾಕುತ್ತಿದ್ದಾರೆ. ಇದು ಅಸಾಂವಿಧಾನಿಕವಾಗಿದ್ದು, ಶಾಸಕರನ್ನು ಖರೀದಿಸಿ ರಾಜೀನಾಮೆ ಕೊಡಿಸುತ್ತಿದ್ದಾರೆ ಎಂದು ಆಪಾದಿಸಿದರು.
Video:
Congress leader Siddaramaiah who arrived in Mangalore slammed the BJP government for Not Banning SDPI and PFI though they are in full power in country.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm