ಬ್ರೇಕಿಂಗ್ ನ್ಯೂಸ್
15-02-21 11:07 am Mangalore Correspondent ಕರಾವಳಿ
ಉಳ್ಳಾಲ: ಫೆ.15: ಕಾಲ ಮಿತಿಯನ್ನು ಮೀರಿ ನಡೆಸಲಾಗುತ್ತಿದ್ದ ಅದ್ಧೂರಿ ಹೈ ವೋಲ್ಟೇಜ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಪೊಲೀಸರು ಸ್ಥಗಿತಗೊಳಿಸಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಂಜಿತ್ ಬಂಡಾರು ನೇತೃತ್ವದ ಪೊಲೀಸರ ತಂಡವು ನಿನ್ನೆ ರಾತ್ರಿ ನಡೆಯುತ್ತಿದ್ದ ಹೊನಲು ಬೆಳಕಿನ ಅದ್ದೂರಿ ಕ್ರಿಕೆಟ್ ಪಂದ್ಯಾಟವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದೆ. ದೇರಳಕಟ್ಟೆ ಫ್ರೆಂಡ್ಸ್ ಸರ್ಕಲ್ ನೆರಳಲ್ಲಿ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಮೈದಾನದಲ್ಲಿ ಶನಿವಾರ ಸಂಜೆಯಿಂದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಡಿಎಫ್ ಸಿ ಪ್ರೆಸೆಂಟ್ ಸೌಹಾರ್ದ ಟ್ರೋಫಿ - 2021 ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಪೊಲೀಸರು ರಾತ್ರಿ 11 ಗಂಟೆಯ ವರೆಗೆ ಸಮಯದ ಅವಕಾಶ ಕೊಟ್ಟಿದ್ದರು. ಆದರೆ, ಶನಿವಾರವೂ ರಾತ್ರಿ 12 ಗಂಟೆ ತನಕ ಕ್ರಿಕೆಟ್ ನಡೆದಿತ್ತು. ಆದಿತ್ಯವಾರ ಸಂಜೆ ಶುರುವಾದ ಕ್ರಿಕೆಟ್ ರಾತ್ರಿ 12 ಕಳೆದರೂ, ನಿಂತಿರಲಿಲ್ಲ. ಬಳಿಕ ರಾತ್ರಿ ಒಂದು ಗಂಟೆ ಆದರೂ ಫೈನಲ್ ಪಂದ್ಯಾಟ ಮುಗಿದಿರಲಿಲ್ಲ. ಸ್ಥಳಕ್ಕೆ ಬಂದ ಎಸಿಪಿ ರಂಜಿತ್ ಬಂಡಾರು ಮತ್ತು ಕೊಣಾಜೆ ಪೊಲೀಸರು ಸೆಮಿಫೈನಲ್ ಮತ್ತು ಫೈನಲ್ ಎರಡು ಪಂದ್ಯ ಬಾಕಿ ಉಳಿದಿರುವಂತೆ ವಿದ್ಯುತ್ ದೀಪಗಳನ್ನು ಬಂದ್ ಮಾಡಿಸಿ ಕ್ರಿಕೆಟ್ ಪಂದ್ಯಾಟವನ್ನು ಸ್ಥಗಿತಗೊಳಿಸಿದ್ದಾರೆ.
ಎಸಿಪಿ ಮಾತಿಗೆ ಬೆಲೆ ಕೊಟ್ಟ ಪಂದ್ಯ ಆಯೋಜಕರು ಇಂದು ಮಧ್ಯಾಹ್ನ 2 ಗಂಟೆಗೆ ಒಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ನೆರೆದಿದ್ದ ಬೃಹತ್ ಕ್ರಿಕೆಟ್ ಅಭಿಮಾನಿಗಳು ಮತ್ತು ಆಟಗಾರರನ್ನು ಶಾಂತಿಯುತವಾಗಿ ಮನೆಗೆ ತೆರಳಲು ಸೂಚಿಸಿದ್ದಾರೆ.
ಶನಿವಾರ ರಾತ್ರಿ ಔಪಚಾರಿಕ ಓವರ್ ಆರ್ಮ್ ಕ್ರಿಕೆಟ್ ಪಂದ್ಯದಲ್ಲಿ ಕೊಣಾಜೆ ಪೊಲೀಸ್ ಮತ್ತು ಉಳ್ಳಾಲ ಪೊಲೀಸರ ನಡುವೆ ಪಂದ್ಯ ನಡೆದು ಕೊಣಾಜೆ ಪೊಲೀಸರು ಜಯ ಗಳಿಸಿದ್ದರು.
8 ಓವರ್ ಗಳ ಪಂದ್ಯಾಟವನ್ನು ಆಯೋಜಕರು 6 ಓವರ್ ಗಳಿಗೆ ಸೀಮಿತಗೊಳಿಸಿದರೂ ಸಮಯಕ್ಕೆ ಸರಿಯಾಗಿ ಪಂದ್ಯ ಮುಗಿಸಲು ಸಾಧ್ಯವಾಗಿಲ್ಲ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿ ಬಾಯ್ಸ್ ಅಳೇಕಳ ಮತ್ತು ಕೀರ್ತಿ ಸ್ಪೋರ್ಟಿಂಗ್ ಉಳ್ಳಾಲ ಬೈಲ್ ತಂಡಗಳು ಸೆಣಸಿ ಕೀರ್ತಿ ಉಳ್ಳಾಲಬೈಲ್ ತಂಡವು ಫೈನಲ್ ಪ್ರವೇಶಿಸಿತ್ತು. ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಯಂಗ್ ಪ್ರೆಂಡ್ಸ್ ಉರ್ವ ಮತ್ತು ಎನ್.ಎಮ್ ತಂಡಗಳು ಸೆಣಸಲು ರೆಡಿಯಾದಾಗಲೇ ಪೊಲೀಸರು ಎಂಟ್ರಿ ನೀಡಿ ಪಂದ್ಯವನ್ನು ಸ್ಥಗಿತಗೊಳಿಸಿದ್ದಾರೆ. ಒಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯವು ಇಂದು ಮಧ್ಯಾಹ್ನ 2 ಗಂಟೆಗೆ ಗ್ರೀನ್ ಗ್ರೌಂಡಲ್ಲಿ ನಡೆಯಲಿದೆ.
Police Stop High Voltage cricket tournament held at Derlakatte for playing the game than the scheduled time.
10-04-25 04:40 pm
Bangalore Correspondent
Lokayukta Shivamogga arrest: ಶಿವಮೊಗ್ಗ ಸ್ಮಾರ್ಟ...
09-04-25 09:31 pm
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
10-04-25 09:10 pm
HK News Desk
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
10-04-25 10:41 pm
Mangalore Correspondent
Mangalore, Netravati Bridge Repair, Traffic b...
10-04-25 09:48 pm
Mangalore Accident, Padil: ಪಡೀಲ್ ; ಚಾಲಕನ ನಿಯಂ...
09-04-25 10:57 pm
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
10-04-25 08:41 pm
HK News Desk
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm