ಬ್ರೇಕಿಂಗ್ ನ್ಯೂಸ್
12-02-21 08:34 pm Mangaluru Correspondant ಕರಾವಳಿ
ಮಂಗಳೂರು, ಫೆ.12: ಮಂಗಳೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೊಬ್ಬರಿಗೆ ಸೇರಿದ ಕಾರು ಡಿಕ್ಕಿಯಾಗಿ ನೇಪಾಳಿ ಮೂಲದ ಯುವಕ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಫೆ.7ರಂದು ಸಂಜೆ ನಾಲ್ಕು ಗಂಟೆಗೆ ಇನೋವಾ ಕಾರನ್ನು ಅದರ ಚಾಲಕ ಪ್ರದೀಪ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಅಪಘಾತ ನಡೆದಿದೆ. ನೇಪಾಳ ಮೂಲದ ಕಮಲ್ ಎಂಬ ಯುವಕ ಅಡ್ಯಾರಿನಲ್ಲಿ ಫಾಸ್ಟ್ ಫುಡ್ ಸೆಂಟರಿನಲ್ಲಿ ಕೆಲಸಕ್ಕಿದ್ದು ಅಂಗಡಿ ಮಾಲಕನ ಬೈಕಿನಲ್ಲಿ ಹೋಗುತ್ತಿದ್ದ. ಈ ವೇಳೆ, ಹಿಂದಿನಿಂದ ಇನೋವಾ ಕಾರು ಡಿಕ್ಕಿಯಾಗಿದೆ ಎನ್ನಲಾಗುತ್ತಿದ್ದು ಗಂಭೀರ ಗಾಯಗೊಂಡ ಕಮಲ್ ನನ್ನು ಕಂಕನಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮೊದಲು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಬಳಿಕ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಯುವಕನ ಸ್ಥಿತಿ ಗಂಭೀರ ಇದ್ದರೂ, ವಾರೀಸುದಾರರು ಇಲ್ಲದ ಕಾರಣ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಎರಡು ದಿನಗಳ ಬಳಿಕ ಫೆ.10ರಂದು ಯುವಕ ಮೃತಪಟ್ಟಿದ್ದಾನೆ. ಶವವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
ಮೃತ ಕಮಲ್ ನೇಪಾಳದಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊಂದಿದ್ದು ಶವ ಒಯ್ಯಲು ಮಂಗಳೂರಿಗೆ ಬರುತ್ತಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಈ ಬಗ್ಗೆ ಕಂಕನಾಡಿ ಸಂಚಾರಿ ಠಾಣೆಯಲ್ಲಿ ಕೆ ಎ 53 ಎಂಸಿ 0001 ನೋಂದಣಿ ಸಂಖ್ಯೆಯ ಇನೋವಾ ಕಾರು ಮತ್ತು ಚಾಲಕ ಪ್ರದೀಪ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕಾರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಒಂದು ದಿನ ಠಾಣೆಯಲ್ಲಿ ಇರಿಸಿದ್ದು ಎರಡು ದಿನದಲ್ಲಿ ಕಾಂಗ್ರೆಸ್ ಮುಖಂಡನ ಕಡೆಯವರು ಬಂದು ಬಿಡಿಸಿಕೊಂಡು ಹೋಗಿದ್ದಾರಂತೆ. ಬೇರೆಯವರ ಕಾರು ಆಗಿರುತ್ತಿದ್ದರೆ ಪೊಲೀಸರು ಕೂಡ ಬಿಟ್ಟು ಕೊಡುತ್ತಿರಲಿಲ್ಲ. ಒಮ್ಮೆಗೆ ಬಿಟ್ಟರೂ ಎರಡು ದಿನಗಳ ಬಳಿಕ ಯುವಕ ಮೃತಪಟ್ಟ ಕಾರಣ ಕಾರನ್ನು ಮತ್ತೆ ವಶಕ್ಕೆ ಪಡೆದು ಜಪ್ತಿ ಮಾಡುತ್ತಿದ್ದರು. ಅಲ್ಲದೆ, ಆರೋಪಿ ಚಾಲಕನನ್ನು ಬಂಧಿಸುತ್ತಿದ್ದರು.
ಕಾರು ಪ್ರಭಾವಿ ಮುಖಂಡನಿಗೆ ಸೇರಿದ್ದ ಕಾರಣ ಪೊಲೀಸರು ತಮ್ಮ ಕೆಲಸ ಮಾಡುವುದಕ್ಕೂ ಭಯ ಪಡುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ವೇಳೆ ಸಾಮಾನ್ಯವಾಗಿ ಫೋಟೊ ತೆಗೆದಿಡುತ್ತಾರೆ. ಆದರೆ, ಫೋಟೊ ಕೇಳಿದರೆ ಗಾಯಾಳು ಯುವಕನ ಫೋಟೊ ಕೊಡುವುದಕ್ಕೂ ಹಿಂಜರಿಕೆ ತೋರಿದ್ದಾರೆ. ಮೃತ ಯುವಕ ದೂರದ ನೇಪಾಳದವನು, ಕೇಳುವುದಕ್ಕೆ ಯಾರು ಕೂಡ ಬರುವುದಿಲ್ಲ ಎಂಬ ಅಸಡ್ಡೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ, ಕೇಸು ದಾಖಲಾಗಿ ಅಪಘಾತದಲ್ಲಿ ಸಾವು ಸಂಭವಿಸಿದ್ದರೂ, ಮಾಧ್ಯಮಗಳಿಗೆ ಮಾಹಿತಿ ನೀಡದೆ ಮುಚ್ಚಿಟ್ಟಿದ್ದಾರೆ.
A Nepali man who was working in a fast-food restaurant died after his bike was rammed by a popular Congress leader's car at Adyar in Mangalore. The case of accident has been registered at the Traffic police station in Kankanady.
10-04-25 04:40 pm
Bangalore Correspondent
Lokayukta Shivamogga arrest: ಶಿವಮೊಗ್ಗ ಸ್ಮಾರ್ಟ...
09-04-25 09:31 pm
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
10-04-25 09:10 pm
HK News Desk
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
10-04-25 10:41 pm
Mangalore Correspondent
Mangalore, Netravati Bridge Repair, Traffic b...
10-04-25 09:48 pm
Mangalore Accident, Padil: ಪಡೀಲ್ ; ಚಾಲಕನ ನಿಯಂ...
09-04-25 10:57 pm
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
10-04-25 08:41 pm
HK News Desk
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm