ಬ್ರೇಕಿಂಗ್ ನ್ಯೂಸ್
10-02-21 06:12 pm Mangalore Correspondent ಕರಾವಳಿ
ಮಂಗಳೂರು, ಫೆ.10: ಕೇಂದ್ರ ಸರಕಾರದ ಬಜೆಟ್ ಸೇಲ್ ಇಂಡಿಯಾ, ಲೂಟ್ ಇಂಡಿಯಾ ಆಗಿದೆ. ಜನರ ಮೇಲೆ ಇಲ್ಲಸಲ್ಲದ ತೆರಿಗೆಗಳನ್ನು ವಿಧಿಸಿ ಲೂಟಿ ಮಾಡಲಾಗುತ್ತಿದೆ. ತೈಲಕ್ಕೆ ಹೆಚ್ಚುವರಿ ತೆರಿಗೆ ವಿಧಿಸಿ, ಕಾನೂನು ಬದ್ಧವಾಗಿ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಪ್ರಯೋಜನ ಆಗಬಲ್ಲ ಯಾವುದೇ ಯೋಜನೆಯನ್ನು ಕೇಂದ್ರ ಸರಕಾರ ನೀಡಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಕರಾವಳಿಗೆ ಒಂದೇ ಒಂದು ಯೋಜನೆಯನ್ನು ಬಜೆಟಿನಲ್ಲಿ ನೀಡಲಾಗಿಲ್ಲ. ರಾಜ್ಯಕ್ಕೆ ಒಂದೂ ಯೋಜನೆ ನೀಡದಿದ್ದರೂ ರಾಜ್ಯದ ಸಂಸದರು ಯಾಕೆ ಮಾತನಾಡುತ್ತಿಲ್ಲ. ಸಂಸದರು ಜನರ ಧ್ವನಿಯಾಗಬೇಕಾಗಿತ್ತು. ಆದರೆ, ಬಜೆಟ್ ನಲ್ಲಿ ಜನರಿಗೆ ಅನ್ಯಾಯ ಆಗಿದ್ದರೂ, ಮಾತನಾಡದೆ ಕುಳಿತಿದ್ದಾರೆ. ಇವರು ಬಾಯಿಗೆ ಬೀಗ ಹಾಕಿದ ಕಾರಣ ಜನರಿಗೆ ಅನ್ಯಾಯ ಆಗುತ್ತಿದೆ. ಬೇರೆ ರಾಜ್ಯಗಳಿಗೆ ಮಾತ್ರ ಕೇಂದ್ರ ಸರಕಾರ ಭರಪೂರ ಯೋಜನೆಗಳನ್ನು ಪ್ರಕಟಿಸುತ್ತಿದೆ ಎಂದು ದೂರಿದರು.

ಕೋಟಿ ಚೆನ್ನಯರ ಅವಹೇಳನ ಖಂಡನೀಯ
ಕಾಂಗ್ರೆಸಿನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹಾಗೂ ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯರನ್ನು ಅವಮಾನಿಸಿದ್ದು ಖಂಡನೀಯ. ಜಗದೀಶ ಅಧಿಕಾರಿ, ನಾನು ಮತ್ತು ಕೆಲವರು ಪೂಜಾರಿಯವರ ಗರಡಿಯಲ್ಲಿ ಪಳಗಿದವರು. ಜಗದೀಶ ಅಧಿಕಾರಿ ಈಗ ಪೂಜಾರಿಯವರ ವಿರುದ್ಧವೇ ಮಾತನಾಡಿದ್ದನ್ನು ಖಂಡಿಸುತ್ತೇನೆ. ಹಾಗೆಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅಧಿಕಾರಿ ಮುಖಕ್ಕೆ ಮಸಿ ಬಳಿಯಲು ಪ್ರೇರೇಪಿಸುವುದನ್ನೂ ಖಂಡಿಸುತ್ತೇನೆ. ಅದನ್ನು ಯಾವತ್ತಿಗೂ ಸಮರ್ಥಿಸಲಾಗುವುದಿಲ್ಲ. ಅದು ಕಾಂಗ್ರೆಸಿನ ಸಂಸ್ಕೃತಿಯಲ್ಲ ಎಂದು ಹೇಳಿದರು.

ಸಿಸಿಬಿಯಲ್ಲಿ ನಡೆದಿರುವ ಕಾರು ಮಾರಾಟ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ಜನರಿಗೆ ಮಂಗಳೂರು ಪೊಲೀಸ್ ಮತ್ತು ಸಿಸಿಬಿ ಮೇಲೆ ಯಾವ ರೀತಿಯ ಸಂಶಯ ಇತ್ತೋ, ಅದು ನಿಜವಾಗುತ್ತಿದೆ. ಪೊಲೀಸರ ಒಳಗೆ ನಡೆಯುತ್ತಿರುವ ವಹಿವಾಟಿನ ಬಗ್ಗೆ ಜನರಿಗೆ ಅರಿವಾಗುತ್ತಿದೆ. ಇಲಾಖೆಯಲ್ಲಿ 90ರಷ್ಟು ಒಳ್ಳೆಯವರಿದ್ದಾರೆ. ಹತ್ತು ಶೇ. ಭ್ರಷ್ಟರಿಂದಾಗಿ ಪೊಲೀಸ್ ಇಲಾಖೆಗೇ ಕಳಂಕ ಬರುತ್ತಿದೆ. ಸಿಸಿಬಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಹೇಳಿದರು.
Budget 2021 is just to loot people of India slammed UT Khader in mangalore at the press meet held at congress office.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 09:56 pm
HK News Desk
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm