ಬ್ರೇಕಿಂಗ್ ನ್ಯೂಸ್
09-02-21 03:58 pm Mangalore Correspondent ಕರಾವಳಿ
ಕೊಣಾಜೆ, ಫೆ.9: SDPI ಮುಖಂಡ ರಿಯಾಝ್ ಪರಂಗಿಪೇಟೆ ತಾಂಟ್ರೆ ಬಾ ತಾಂಟ್ ಎಂದು ಕೋಮು ಪ್ರಚೋದನಕಾರಿ ಭಾಷಣ ಮಾಡಿ ಹಿಂದು ಪರ ಸಂಘಟನೆಗಳ ಅವಹೇಳನ ಮಾಡಿ ಬೆದರಿಕೆ ಹಾಕಿದ್ದು ಈತ ಸಮಾಜದ ಸ್ವಾಸ್ಥ್ಯ ಕದಡಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದು ಪೊಲೀಸರು ತಕ್ಷಣ ಆತನನ್ನು ಬಂಧಿಸಲು ಆಗ್ರಹಿಸಿ ಹಿಂದು ಜಾಗರಣ ವೇದಿಕೆ ಮುಡಿಪು ವಲಯಯದ ಪದಾಧಿಕಾರಿಗಳು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾಷಣದ ವಿಡಿಯೋ ತುಣುಕು ಹರಿದಾಡುತ್ತಿದ್ದು ಆ ಭಾಷಣದಲ್ಲಿ ರಿಯಾಝ್ ಪರಂಗಿಪೇಟೆ RSS ಮತ್ತು ಅದರ ಪರಿವಾರ ಸಂಘಟನೆಗಳಲ್ಲಿ ತನಗೆ ಹೇಳಲಿರುವುದು ಒಂದೇ..ನಿಮ್ಮನ್ನು ಎದುರಿಸಲು ನಾವು ಯಾವತ್ತೂ ಎಲ್ಲಿಯೂ ಸಿದ್ಧ. ನೀವು ತಾಂಟಲು ಬಂದರೆ ಬನ್ನಿ ತಾಂಟುವ, ಪ್ರತೀ ಗಲ್ಲಿಗಳಲ್ಲಿಯೂ ನಮ್ಮ ಯುವ ಪಡೆಯನ್ನು ನಿರ್ಮಿಸಿ ಸಂಘ ಪರಿವಾರದ ವಿರುದ್ಧ ಛೂ ಬಿಡುತ್ತೇವೆ. ಈ ಆಟ ಇನ್ನು ಆರಂಭವಾಗಲಿದೆ ಎಂಬಿತ್ಯಾದಿ ಮಾತುಗಳನ್ನು ಆಡಿ ಹಿಂದು ಪರ ಸಂಘಟನೆಗಳನ್ನು ನೇರವಾಗಿ ಸಂಘರ್ಷಕ್ಕೆ ಆಹ್ವಾನಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕುರ್ನಾಡು ಗ್ರಾಮದ ಮಿತ್ತಕೋಡಿಯಲ್ಲಿ ಈ ಕೋಮು ಪ್ರಚೋದಕ ಭಾಷಣ ಮಾಡಿದರ ಪರಿಣಾಮ ಶಾಂತಿ ಸೌಹಾರ್ದವಾಗಿದ್ದ ಕುರ್ನಾಡು ಪರಿಸರ ಅಶಾಂತಿಗೊಳಗಾಗಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈತನ ಕೋಮು ಪ್ರಚೋದಕ ಭಾಷಣದಿಂದಾಗಿ ಮಂಗಳೂರಿನ ಲಾಲ್ ಬಾಗ್ ನಲ್ಲಿ ಹಿಂದು ಯುವಕನಿಗೆ ಚೂರಿ ಇರಿತವಾಗಿದೆ. ಈತನು ಈ ಮೊದಲೂ ಪ್ರಚೋದನಕಾರಿ ಭಾಷಣ ಮಾಡಿದ್ದು ಈತನ ವಿರುದ್ಧ ಯಾವುದೇ ಕಠಿಣ ಕ್ರಮ ಜರಗಿಲ್ಲ. ಈತನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೊಂದು ದಿನ ಜಿಲ್ಲೆಯಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆಗಳಿವೆ ಎಂದು ಜಾಗರಣ ವೇದಿಕೆ ಮುಖಂಡರು ಪೊಲೀಸ್ ಇಲಾಖೆಗೆ ದೂರಿದ್ದಾರೆ.
ಹಿರಿಯ ಮುಖಂಡರಾದ ಟಿ.ಜಿ ರಾಜಾರಾಂ ಭಟ್, ಜಗದೀಶ್ ಆಳ್ವ ಕುವೆತ್ತಬೈಲು, ಹಿಂ.ಜಾ.ವೇ ಮುಡಿಪು ವಲಯಾಧ್ಯಕ್ಷ ಪ್ರಶಾಂತ್ ಅನಂಗ, ಪ್ರಮುಖರಾದ ದಿವ್ಯರಾಜ್ ಶೆಟ್ಟಿ, ವಿಶ್ವನಾಥ ಕಡುವಾಯಿ, ರಂಜಿತ್ ಹೂಹಾಕುವಕಲ್ಲು ಇದ್ದರು.
The Hindu Jagarana Vedike activists of Konaje have filed a complaint against Riyaz Farangipete for his speech of communal disharmony in Mangalore.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 09:56 pm
HK News Desk
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm