ಬ್ರೇಕಿಂಗ್ ನ್ಯೂಸ್
06-02-21 04:39 pm Mangalore Correspondent ಕರಾವಳಿ
ಮಂಗಳೂರು, ಫೆ.6: ಕಂಬಳ ಕರಾವಳಿಯ ಜನಪದ ಕ್ರೀಡೆ. ಆದರೆ, ಕಂಬಳ ಬರೀಯ ಕ್ರೀಡೆಯಾಗಿ ಉಳಿಯಬಾರದು. ಅದು ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವ ಆಗಬೇಕು. ಮಂಗಳೂರಿಗೆ ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಕಂಬಳವನ್ನು ಉತ್ಸವದ ನೆಲೆಯಲ್ಲಿ ನಡೆಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನಗರದ ಪತ್ತುಮುಡಿ ಸೌಧದಲ್ಲಿ 4ನೇ ವರ್ಷದ ಮಂಗಳೂರು ಕಂಬಳದ ಪೂರ್ವಭಾವಿ ಸಭೆಯು ಸಮಿತಿ ಅಧ್ಯಕ್ಷರಾದ ಕ್ಯಾ.ಬೃಜೇಶ್ ಚೌಚ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಂಗಳೂರು ಕಂಬಳದ ಬಗ್ಗೆ ಮಾತನಾಡಿದ ಕ್ಯಾ.ಕಾರ್ಣಿಕ್, ಮಂಗಳೂರು ನಗರದಲ್ಲಿ ನಡೆಯುತ್ತಿರುವ ಏಕೈಕ ಕಂಬಳ ಇದಾಗಿದ್ದು, ನಗರ ವ್ಯಾಪ್ತಿಯ ಜನರ ಪಾಲಿಗೆ ಇದು ತುಳುವರ ಉತ್ಸವದ ರೀತಿ ನಡೆಯಬೇಕು. ಕಂಬಳದ ಜೊತೆಗೆ ತುಳುನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಪ್ರದರ್ಶನಗಳು, ಸ್ಪರ್ಧೆಗಳನ್ನು ಹಮ್ಮಿಕೊಂಡರೆ ಎಲ್ಲ ರೀತಿಯ ವಯೋಮಾನದ ಜನರು ಭಾಗವಹಿಸಲು ಪ್ರೇರಣೆ ಸಿಗುತ್ತದೆ. ಜೊತೆಗೆ, ಕಂಬಳವೂ ಆಕರ್ಷಣೆ ಪಡೆಯುತ್ತದೆ. ಟೂರಿಸಂ ಆಕರ್ಷಿಸುವ ನೆಲೆಯಲ್ಲಿ ಇಂತಹ ಉತ್ಸವಗಳು ಆಯೋಜನೆ ಆಗಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೇಲು ಮಾತನಾಡಿ, ಕಳೆದ ಬಾರಿ ಕಂಬಳಕ್ಕೆ ನಿಷೇಧದ ತೂಗುಗತ್ತಿ ಬಂದಾಗ ಜಿಲ್ಲೆಯ ರಾಜಕಾರಣಿಗಳು ಪಕ್ಷ ಭೇದ ಮರೆತು ಬೆಂಬಲ ನೀಡಿದ್ದರು. ಗಣೇಶ್ ಕಾರ್ಣಿಕ್, ಸದಾನಂದ ಗೌಡ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಮುಖಂಡರು ಸಹಕಾರ ನೀಡಿದ್ದರು. ಈ ಬಾರಿಯೂ ಕೋವಿಡ್ ಕಾರಣದಿಂದ ಕಂಬಳ ಅಸಾಧ್ಯ ಎನ್ನುವಾಗ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಕಂಬಳ ನಡೆಯುವಂತಾಗಲು ಸಹಕಾರ ನೀಡಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಮಂಗಳೂರು ಕಂಬಳವನ್ನು ಸಿಗ್ನೇಚಟ್ ಈವೆಂಟ್ ಆಗಿ ಪರಿವರ್ತಿಸಲು ಎಲ್ಲರ ಸಹಕಾರವೂ ಬೇಕು. ಕಂಬಳ ಅಭಿಮಾನಿಗಳ ಜೊತೆಗೆ ಸರಕಾರ, ಸಾರ್ವಜನಿಕರು, ವಿವಿಧ ಸಂಘಟನೆಗಳ ಬೆಂಬಲ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರು ಕಂಬಳವನ್ನು ಸಾಂಸ್ಕೃತಿಕ ಉತ್ಸವದ ರೂಪದಲ್ಲಿ ನಡೆಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ, ಭಾರತ ಸರಕಾರದ ಸಾಮಾಜಿಕ ಹಕ್ಕು ಸಚಿವಾಲಯದ ಸದಸ್ಯರಾದ ಭಾಸ್ಕರದಾಸ್ ಎಕ್ಕಾರು, ಕರ್ನಾಟಕ ಕ್ರೈಸ್ತ ನಿಗಮದ ಅಧ್ಯಕ್ಷರಾದ ಜೋಯಲ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ರಾಧಾಕೃಷ್ಣ , ಕಿರಣ್ ಕುಮಾರ್ ಕೋಡಿಕಲ್, ಸಂದೀಪ್ ಗರೋಡಿ, ಭರತ್ ಕುಮಾರ್, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಚಿನ್ ಶೆಟ್ಟಿ, ಖಜಾಂಚಿ ಪ್ರೀತಮ್ ರೈ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 08:49 pm
HK News Desk
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm