ಬ್ರೇಕಿಂಗ್ ನ್ಯೂಸ್
06-02-21 04:20 pm Mangalore Correspondent ಕರಾವಳಿ
ಮಂಗಳೂರು, ಫೆ.6: ಕೊರೊನಾ ಲಾಕ್ಡೌನ್ ಬಳಿಕ ಸಾಕಷ್ಟು ಮಂದಿ ಉದ್ಯೋಗ ಕಳಕೊಂಡಿದ್ದಾರೆ. ಇದಲ್ಲದೆ, ಪ್ರತಿ ವರ್ಷ ಸಾವಿರಾರು ಮಂದಿ ಡಿಪ್ಲೊಮಾ, ಡಿಗ್ರಿ, ಸ್ನಾತಕೋತ್ತರ, ಇಂಜಿನಿಯರಿಂಗ್, ಐಟಿಐ ಪೂರೈಸಿ ಹೊರಬರುತ್ತಿದ್ದಾರೆ. ಈ ನಡುವೆ, ಸರಕಾರದ ಉದ್ಯೋಗ ವಿನಿಮಯ ಕಚೇರಿಯೇ ಉದ್ಯೋಗ ಮೇಳ ಏರ್ಪಡಿಸಿದರೆ ಹೇಳಬೇಕೆ..? ಮಂಗಳೂರಿನ ಕೆಪಿಟಿ ಬಳಿಯ ಕದ್ರಿ ಐಟಿಐನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು, ಉದ್ಯೋಗ ರಹಿತರು ಭಾಗವಹಿಸಿದ್ದರು.
ಹನ್ನೊಂದು ಗಂಟೆ ವೇಳೆಗೆ, ಕದ್ರಿ ಐಟಿಐ ಆವರಣ ತುಂಬಿ ತುಳುಕಿತ್ತು. ಎರಡು ಸಾವಿರಕ್ಕೂ ಹೆಚ್ಚು ಜನ ಉದ್ಯೋಗಕ್ಕಾಗಿ ತಮ್ಮ ಬಯೋಡಾಟಾ ಹಿಡಿದು ಸಾಲುಗಟ್ಟಿದ್ದರು. ಮುಂಭಾಗದಲ್ಲಿ ಶಾಮಿಯಾನ ಅಳವಡಿಸಿದ್ದ ಎಂಟ್ರಿ ಜಾಗದಲ್ಲಿ ನೊಂದಣಿ ಮಾಡಿಕೊಂಡು ಒಳಗೆ ಹೋಗುತ್ತಿದ್ದರು. ಆದರೆ, ಒಳಗೆ ಹೋಗಿ ನೋಡಿದರೆ ನಿರಾಸೆಯಾಗುವ ಸರದಿ. ಅಲ್ಲಿ ಟೆಕ್ನಿಕಲ್ ರಿಲೇಟೆಡ್ ಕಂಪನಿಗಳೇ ಇರಲಿಲ್ಲ.
ಜೋಯ್ ಆಲುಕ್ಕಾಸ್, ಮಾಂಡೋವಿ ಬಿಟ್ಟರೆ ಬೇರೆ ಯಾವುದೇ ರೆಪ್ಯುಟೆಡ್ ಕಂಪನಿಗಳು ಅಲ್ಲಿರಲಿಲ್ಲ. ಜಸ್ಟ್ ಡಯಲ್, ವಿನ್ ಟೆಕ್, ಯುರೇಕಾ ಫೋರ್ಬ್ಸ್, ಪ್ರಸನ್ನ ಟೆಕ್ನಾಲಜಿ, ಖಾಸಗಿ ಇನ್ ಶೂರೆನ್ಸ್ ಕಂಪನಿಗಳು ಇರುವ ಬಗ್ಗೆ ಅಲ್ಲಿ ಬೋರ್ಡ್ ಹಾಕಲಾಗಿತ್ತು. ಅಲ್ಲಿಗೆ ಬಂದಿದ್ದ ಕಂಪನಿಗಳಿಗೆ ಸೇಲ್ಸ್ ಎಕ್ಸಿಕ್ಯೂಟಿವ್, ಡಾಟಾ ಎಂಟ್ರಿಗಳ ರೀತಿಯ ನೌಕರರಷ್ಟೇ ಬೇಕಾಗಿದ್ದವು. ಹಾಗಿದ್ದರೂ, ಉದ್ಯೋಗಾಕಾಂಕ್ಷಿಗಳು ಮುಗಿಬಿದ್ದು, ತಮ್ಮ ನೋಂದಣಿ ಮಾಡಿಕೊಳ್ಳುತ್ತಿದ್ದರು. ಹೆಚ್ಚಿನ ಮಂದಿಗೆ ಈ ಕಂಪನಿಗಳ ಬಗ್ಗೆಯೇ ಗೊತ್ತಿರಲಿಲ್ಲ. ಕೆಲವರು ಇಲ್ಲಿ ಟೆಕ್ನಿಕಲ್ ರಿಲೇಟೆಡ್ ಕಂಪನಿಗಳೇ ಇಲ್ಲ ಎಂದು ಗೊಣಗುತ್ತಿದ್ದರು. ಬಿಇ, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಕಲಿತವರೂ ಸಾಕಷ್ಟು ಮಂದಿ ಇದ್ದರು. ಯಾರಿಗೂ ಉದ್ಯೋಗದ ಭರವಸೆ ಅಲ್ಲಿ ಸಿಗಲಿಲ್ಲ.
ಈ ಬಗ್ಗೆ ಕದ್ರಿ ಐಟಿಐ ಕೇಂದ್ರದ ಪ್ರಿನ್ಸಿಪಾಲ್ ಬಳಿ ಕೇಳಿದರೆ, ನನಗೆ ಈ ಬಗ್ಗೆ ಗೊತ್ತೇ ಇಲ್ಲ. ನಮ್ಮ ಆಶ್ರಯ ಅಷ್ಟೇ. ಎರಡು ದಿನಗಳ ಹಿಂದೆ ಉದ್ಯೋಗ ಮೇಳ ಮಾಡುವ ಬಗ್ಗೆ ಉದ್ಯೋಗ ವಿನಿಯಮ ಕಚೇರಿಯವರು ಹೇಳಿದ್ದರು. ಯಾವೆಲ್ಲಾ ಕಂಪನಿಗಳು ಇವೆ ಅನ್ನೋದನ್ನು ಅವರೇ ಮಾಡಿಕೊಳ್ಳಬೇಕು. ಮುಂದಕ್ಕೆ ಈ ರೀತಿಯ ಮೇಳ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.
ಅಲ್ಲೇ ಇದ್ದ ಉದ್ಯೋಗ ವಿನಿಮಯ ಕಚೇರಿಯ ಎಫ್ ಡಿಎ ಆಗಿರುವ ಎಚ್.ಆರ್ ಬಡಿಗೇರ ಅವರಲ್ಲಿ ಕೇಳಿದರೆ, ಫೆ.3ರಂದು ಜಿಲ್ಲಾಧಿಕಾರಿ ಕಡೆಯಿಂದ ಎಪ್ರೂವ್ ಆಗಿತ್ತು. ತುರ್ತಾಗಿ ಮೇಳ ಮಾಡಬೇಕೆಂದು ಮೇಲಿನಿಂದ ಸೂಚನೆ ಇತ್ತು. ಇಲ್ಲದಿದ್ದರೆ, ಫಂಡ್ ಲ್ಯಾಪ್ಸ್ ಆಗುವುದಾಗಿ ಹೇಳಿದ್ದರು. ಈ ಉದ್ಯೋಗ ಮೇಳಕ್ಕೆ ಒಂದು ಲಕ್ಷ ಫಂಡ್ ಬಂದಿತ್ತು ಎಂದು ಹೇಳಿದರು. ಇಷ್ಟೆಲ್ಲಾ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಬಂದಿದ್ದಾರಲ್ಲಾ ಎಂದು ಕೇಳಿದ್ದಕ್ಕೆ, ನಮಗೇ ಅಚ್ಚರಿಯಾಗುತ್ತಿದೆ. ಇಷ್ಟು ಜನ ಬಂದಿದ್ದಾರೆ. ನಾವು ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಅಲ್ಲಿ ನೋಡಿದರೆ, 20ರಷ್ಟು ಕಂಪನಿ ಪ್ರತಿನಿಧಿಗಳು ಕಾಟಾಚಾರಕ್ಕೆ ಬಂದ ರೀತಿ ಇದ್ದರು. ಯಾರಿಗೂ ಆಫರ್ ಲೆಟರ್ ನೀಡಿದ ಬಗ್ಗೆ ಅಭ್ಯರ್ಥಿಗಳಲ್ಲಿ ಮಾಹಿತಿ ಇರಲಿಲ್ಲ. ಉದ್ಯೋಗ ವಿನಿಮಯ ಕಚೇರಿಯ ಇನ್ನೊಬ್ಬ ಅಧಿಕಾರಿ ದಯಾನಂದ್, 25ರಿಂದ 30 ಕಂಪನಿಗಳು ಮೇಳಕ್ಕೆ ಬಂದಿದ್ದಾಗಿ ಹೇಳಿಕೊಂಡರು. ಯಾವ್ಯಾವುದೋ ಕಂಪನಿಗಳ ಹೆಸರನ್ನು ಲಿಸ್ಟ್ ಮಾಡಿಕೊಂಡಿದ್ದರು. ನೀವು ಎಷ್ಟು ಮಂದಿಗೆ ಉದ್ಯೋಗ ಕೊಡಿಸುತ್ತೀರಿ ಎಂದಿದ್ದಕ್ಕೆ ನಮಗೆ ಕಂಪನಿಗಳು ಉದ್ಯೋಗ ನೀಡಿರುವ ಬಗ್ಗೆ ವಾರದ ಬಳಿಕ ಮೇಲ್ ಮಾಡುತ್ತಾರೆ ಎಂದು ಹೇಳಿದರು.
ಸರಕಾರದ ಉದ್ಯೋಗ ಮೇಳವೇ ಬೋಗಸ್
ಆದರೆ, ಈ ಬಗ್ಗೆ ಇಲಾಖೆಯಿಂದ ದೊರೆತ ಮಾಹಿತಿ ಪ್ರಕಾರ, ಇಂಥ ಉದ್ಯೋಗ ಮೇಳಗಳೇ ಬೋಗಸ್ ಅಂತೆ. ಕಾಟಾಚಾರಕ್ಕೆ ಒಂದಷ್ಟು ಕಂಪನಿಗಳನ್ನು ಕರೆಸಿ ಪ್ರತಿ ಬಾರಿ ಉದ್ಯೋಗ ಮೇಳ ಮಾಡುತ್ತಾರೆ. ಅದಕ್ಕೊಂದಿಷ್ಟು ಫಂಡ್ ಬರುತ್ತದೆ, ಅದನ್ನು ಖರ್ಚು ಮಾಡಿದ್ದಾಗಿ ತೋರಿಸುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಇದೇ ಹಿನ್ನೆಲೆಯಲ್ಲಿ ಹೆಡ್ ಲೈನ್ ಕರ್ನಾಟಕ ಫ್ಯಾಕ್ಟ್ ಚೆಕ್ ಮಾಡಿದ್ದು, ಅಧಿಕಾರಿಗಳ ಬಳಿ ಈ ಬಗ್ಗೆ ಕೇಳಿದಾಗ ತಡಬಡಾಯಿಸಿದ್ದು ಈ ಮೇಳವೂ ಬೋಗಸ್ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಒಂದು ಕಂಪನಿ ಕೂಡ ಟೆಕ್ನಿಕಲ್ ರಿಲೇಟೆಡ್ ಬರದೇ ಇದ್ದುದೇ ಇದಕ್ಕೆ ಸಾಕ್ಷಿಯಾಗಿತ್ತು. ಒಂದು ಲಕ್ಷ ಫಂಡ್ ಬಂದಿದ್ದು, ಅಲ್ಲಿ ಸಣ್ಣ ಶಾಮಿಯಾನ, ಕಂಪನಿ ಪ್ರತಿನಿಧಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಬಿಟ್ಟರೆ ಬೇರಾವುದೇ ಖರ್ಚು ಇರಲಿಲ್ಲ. ಆದರೂ, ಮೇಳಕ್ಕೆ ಒಂದು ಲಕ್ಷ ಪೂರ್ತಿ ಖರ್ಚಾಗಿದ್ದಾಗಿ ಇಲಾಖೆಗೆ ವರದಿ ನೀಡಿ ಹಣ ಹೊಡೆಯುವ ಹುನ್ನಾರ ಇದರ ಹಿಂದಿರುತ್ತದೆ.
ಪ್ರಸನ್ನ ಟೆಕ್ನಾಲಜಿ ಸಂಸ್ಥೆಯವರು ಟೆಕ್ನಿಕಲ್ ಪರ್ಸನ್ ಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ನೀಡಿದರೂ, ಕಂಪನಿ ಪ್ರತಿನಿಧಿಗಳಲ್ಲಿ ಕೇಳಿದರೆ, ತಮಗೆ ಡಾಟಾ ಎಂಟ್ರಿಗಳಷ್ಟೇ ಬೇಕು. ಬೇರಾವುದೇ ವೇಕೆನ್ಸಿ ಇಲ್ಲ ಎಂದು ಹೇಳಿದ್ದು ಕಚೇರಿ ಸಿಬಂದಿಯ ಅವಾಂತರಕ್ಕೆ ನಿದರ್ಶನವಾಗಿತ್ತು. ಕೊನೆಗೆ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಉದ್ಯೋಗ ಮೇಳದ ಉದ್ಘಾಟನೆಗೆಂದು ಬಂದಿದ್ದರು. ಶಾಸಕರಿಗೂ ಇಲ್ಲಿನ ಬೋಗಸ್ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಲಾಯ್ತು. ಎಲ್ಲವನ್ನೂ ಕೇಳಿಕೊಂಡ ಅವರು, ಅಲ್ಲಿದ್ದ ಉದ್ಯೋಗ ವಿನಿಮಯ ಕಚೇರಿಯ ಸಿಬಂದಿಯನ್ನು ಕರೆಸಿ ಮಾಹಿತಿ ಪಡೆದರು. ಅಲ್ಲದೆ, ಕನಿಷ್ಠ 200 ಮಂದಿಗಾದ್ರೂ ಉದ್ಯೋಗ ಒದಗಿಸಿರುವ ಬಗ್ಗೆ ಮಾಹಿತಿ ಖಚಿತಪಡಿಸಬೇಕು ಎಂದು ಸೂಚನೆ ನೀಡಿದರು.
ಎಪ್ರಿಲ್ ನಲ್ಲಿ ಬೃಹತ್ ಉದ್ಯೋಗ ಮೇಳ ; ಕಾಮತ್
ಅಲ್ಲದೆ, ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ಮಾಡುತ್ತೇವೆ. ಉದ್ಯೋಗ ವಿನಿಮಯ ಕಚೇರಿಯಿಂದ ಸ್ಥಳೀಯ 50 ಕಂಪನಿಗಳನ್ನು ಕರೆಸುವ ವ್ಯವಸ್ಥೆ ಮಾಡುತ್ತೇನೆ. ವೈಯಕ್ತಿಕ ನೆಲೆಯಲ್ಲಿ ಖರ್ಚು ಮಾಡಿ ರಾಷ್ಟ್ರ ಮಟ್ಟದ 50 ಕಂಪನಿಗಳನ್ನು ಕರೆಸುವ ಕೆಲಸ ಮಾಡುತ್ತೇನೆ. ಬೃಹತ್ ಮೇಳದಲ್ಲಿ ಒಂದು ಸಾವಿರ ಮಂದಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದರು.
Thousands cheated in the name of giving jobs by udyog Mela in mangalore. Bogus exposed by Headline Karnataka.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm