ಬ್ರೇಕಿಂಗ್ ನ್ಯೂಸ್
03-02-21 11:19 pm Mangaluru Correspondent ಕರಾವಳಿ
ಉಡುಪಿ, ಫೆ. 3: ಶಿರ್ವದ ಮುಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಸುಮಾರು 12ನೇ ಶತಮಾನಕ್ಕೆ ಸೇರಿದ ಅತ್ಯಾಕರ್ಷಕ ವಿಷ್ಣುಮೂರ್ತಿ ದೇವರ ಭಗ್ನ ಶಿಲ್ಪ ಪತ್ತೆಯಾಗಿದೆ ಎಂದು ವಿಭಾಗ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಉಡುಪಿ ತಾಲೂಕಿನ 80 ಬಡಗಬೆಟ್ಟು ಪಂಚಾಯಿತಿ ಕಚೇರಿಯ ಹಿಂಭಾಗದ ಕಾಡಿನಲ್ಲಿ ಪಾಳು ಬಿದ್ದ ದೇಗುಲವೊಂದಿದ್ದು, ದೇವಾಲಯದ ಪಕ್ಕದಲ್ಲಿ ಇರುವ ಹಾಳು ಬಾವಿಯಲ್ಲಿ ಪುರಾತತ್ವ ಅನ್ವೇಷಣೆ ವೇಳೆ ಸುಂದರವಾದ ಶಿಲ್ಪ ಪತ್ತೆಯಾಗಿದೆ ಎಂದವರು ತಿಳಿಸಿದ್ದಾರೆ.
ಶಿಲ್ಪದ ಮುಂದಿನ ಬಲಗೈಯಲ್ಲಿ ಪಿಂಡ, ಎಡಗೈ ಸೊಂಟದ ಮೇಲಿದ್ದು ತುಂಡಾದ ಗದೆ ದೊರೆತಿದೆ. ಬಲ ಹಿಂಬದಿಯ ಕೈ ಭಾಗ ಸಹ ತುಂಡಾಗಿದ್ದು ಅದು ದೊರೆತಿಲ್ಲ. ಎಡ ಹಿಂಬದಿಯ ಕೈಯಲ್ಲಿ ಆಕರ್ಷಕ ಶಂಖವಿದೆ. ಕಿವಿಯಲ್ಲಿ ಮಕರ ಕುಂಡಲವಿದೆ. ಕೊರಳಲ್ಲಿ ಕಂಠಾಭರಣ, ಆಕರ್ಷಕ ಉಪವೀತ, ಉದರಾಭರಣ ಹಾಗು ಮೊಳಕಾಲಿನ ವರೆಗೆ ಇಳಿಬಿದ್ದ ಕೌಸ್ತುಭ ಹಾರವಿದೆ.
ಚಿತ್ತಾಕರ್ಷಕವಾದ ಈ ಶಿಲ್ಪ ಕರಂಡ ಮುಕುಟಧಾರಿಯಾಗಿದ್ದು, ತೋಳಲ್ಲಿ ತೋಳ್ಬಂದಿ, ಕಡಗಗಳಿಂದ ಸಿಂಗರಿಸಲ್ಪಟ್ಟಿದೆ. ಸೊಂಟಪಟ್ಟಿ, ಸೊಂಟದ ಕೆಳಭಾಗದಲ್ಲಿ ವಸ್ತ್ರ, ವಡ್ಯಾಣಗಳಿವೆ. ಪಾದಗಳು ತುಂಡಾಗಿದ್ದು, ತುಂಡಾದ ಪಾದದ ಭಾಗಗಳು ಪಾಳು ಬಿದ್ದ ದೇವಾಲಯದ ಗರ್ಭಗುಡಿಯಲ್ಲಿ ಪಾಣಿ ಪೀಠದಲ್ಲಿವೆ. ಮುಖದ ಹಿಂಭಾಗದಲ್ಲಿ ಪ್ರಭಾವಳಿಯಿದ್ದು ಇಡೀ ಶಿಲ್ಪ 4 ಅಡಿ ಎತ್ತರವಿದೆ. ಶಿಲ್ಪದ ಶೈಲಿ ಮತ್ತು ಲಕ್ಷಣದ ಆಧಾರದ ಮೇಲೆ ಈ ಶಿಲ್ಪವನ್ನು 12-13ನೇ ಶತಮಾನದ ಶಿಲ್ಪವೆಂದು ನಿರ್ಧರಿಸಲಾಗಿದೆ. ಆಚಾರ್ಯ ಮಧ್ವರಿಗಿಂತ ಮೊದಲೇ ಭಾಗವತ ಪಂಥ ತುಳುನಾಡಿನಲ್ಲಿ ಜನಪ್ರಿಯವಾಗಿತ್ತು ಎಂಬುದಕ್ಕೆ ಈ ಶಿಲ್ಪ ಸಾಕ್ಷಿಯಾಗಿದೆ. ಅತೀವ ಸೌಂದರ್ಯ ದಿಂದ ಕಂಗೊಳಿಸುವ ಈ ಶಿಲ್ಪ, ಕರ್ನಾಟಕ ಕರಾವಳಿಯ ಒಂದು ಮಾಸ್ಟರ್ ಪೀಸ್ ಎಂಬುದರಲ್ಲಿ ಸಂಶಯವಿಲ್ಲ. ಅನ್ವೇಷಣೆ ಇನ್ನೂ ಮುಂದುವರಿದಿದೆ ಎಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಪ್ರೊ.ಮುರುಗೇಶಿ ಅವರ ಈ ಸಂಶೋಧನೆಯಲ್ಲಿ ಕಾಲೇಜಿನ ಅಂತಿಮ ಬಿ.ಎ. ಪುರಾತತ್ವ ವಿಭಾಗದ ಕಾವ್ಯ, ಭವ್ಯಾ, ಶ್ರೇಯಸ್, ನಾಗರಾಜ, ರಾಜೇಶ್, ಗೌತಮ್ ಹಾಗೂ ಸ್ಥಳೀಯರಾದ ಗಣೇಶ್ ಆಚಾರ್ಯ ಮತ್ತು ಗಣೇಶ್ ಸರಳೇಬೆಟ್ಟು ಸಹಕರಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Also Read: "ಅಡ್ಯಾರ್" ಮೂಲ ಹೆಸರು ಅಡಿಯಾರ ಆಗಿತ್ತೇ..? ಆಳುಪ ದೊರೆ ವೀರ ಕುಲಶೇಖರನ ಶಾಸನ ಕಲ್ಲು ಪತ್ತೆ !
12th-century Statue of Vishnu Murthy idol has been found in Udupi. The Idol was found inside an empty well right next to a very old temple.
09-05-26 10:41 pm
HK News Desk
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತ...
06-05-26 07:41 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am