ಬ್ರೇಕಿಂಗ್ ನ್ಯೂಸ್
26-01-21 08:48 pm Mangaluru Correspondent ಕರಾವಳಿ
ಮಂಗಳೂರು, ಜ.26: ಈ ಬಾರಿ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಏಕೈಕ ವಿದ್ಯಾರ್ಥಿನಿ ಭಾಗವಹಿಸಿದ್ದಾಳೆ. ಪುತ್ತೂರಿನ ಫಿಲೋಮಿನಾ ಕಾಲೇಜಿನ ರಕ್ಷಾ ಅಂಚನ್ ಎನ್ ಸಿಸಿ ಕ್ಯಾಡೆಟ್ ಆಗಿ ಭಾಗವಹಿಸಿದ ವಿದ್ಯಾರ್ಥಿನಿ.
ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹತ್ತಕ್ಕೂ ಹೆಚ್ಚು ಮಂದಿ ಎನ್ ಸಿಸಿ ಕೆಡೆಟ್ ಗಳು ಭಾಗವಹಿಸುತ್ತಾರೆ. ಆದರೆ, ಈ ಬಾರಿ ಕೊರೊನಾ ನಿರ್ಬಂಧ ಇದ್ದ ಕಾರಣ ಒಬ್ಬರನ್ನು ಮಾತ್ರ ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ. ಪ್ರತಿ ವರ್ಷ ಗೋವಾ- ಕರ್ನಾಟಕ ಡೈರೆಕ್ಟರೇಟ್ ನಿಂದ 111 ಕೆಡೆಟ್ ಗಳು ರಿಪಬ್ಲಿಕ್ ಪರೇಡ್ ನಲ್ಲಿ ಭಾಗವಹಿಸುತ್ತಾರೆ. ಈ ಬಾರಿ ವಿಭಾಗದಿಂದ ಕೇವಲ 26 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದರಲ್ಲಿ 16 ಮಂದಿ ಹುಡುಗರಾಗಿದ್ದು, 10 ಮಂದಿ ಹುಡುಗಿಯರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಡಬ ತಾಲೂಕಿನ ರಕ್ಷಾ ಅಂಚನ್ ಒಬ್ಬರಷ್ಟೇ ಆಯ್ಕೆಯಾಗಿದ್ದರು. ರಕ್ಷಾ ಅವರು ನೆಲ್ಯಾಡಿಯ ಉದ್ಯಮಿ ರಮೇಶ್ ಹಾಗೂ ಕಾಂಗ್ರೆಸ್ ನಾಯಕಿ, ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆ ಉಷಾ ಅಂಚನ್ ಅವರ ಪುತ್ರಿ.


ಕಳೆದ ಡಿ.17ರಂದು ದೆಹಲಿಗೆ ಪ್ರಯಾಣ ಬೆಳೆಸಿದ್ದ ರಕ್ಷಾ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದು ಜ.3ರಿಂದ ಪರೇಟ್ ತರಬೇತಿಯನ್ನು ಪಡೆದಿದ್ದರು. ಅಂದಹಾಗೆ, ರಕ್ಷಾ ಅಂಚನ್ ಫಿಲೋಮಿನಾ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ. ಈ ಹಿಂದೆಲ್ಲಾ ಪ್ರತಿ ವರ್ಷ 11-12 ಮಂದಿ ಕೆಡೆಟ್ ಗಳಿಗೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿತ್ತು. ಆದರೆ, ಈ ಬಾರಿ ಕೊರೊನಾದಿಂದಾಗಿ ಜಿಲ್ಲೆಯಿಂದ ಒಬ್ಬಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಈ ಬಾರಿಯೂ ಹಲವು ಮಂದಿ ಪ್ರತಿಭಾವಂತ ಕೆಡೆಟ್ ಗಳಿದ್ದರು.
ಕಳೆದ ಬಾರಿ ರಕ್ಷಾ ಅಂಚನ್ ಅದೇ ಪರೇಡ್ ನಲ್ಲಿ ಭಾಗವಹಿಸುವುದರಿಂದ ಮಿಸ್ ಆಗಿದ್ದಳು. ಹೀಗಾಗಿ ರಕ್ಷಾಳನ್ನು ಈ ಬಾರಿ ಆಯ್ಕೆ ಮಾಡಲಾಯ್ತು ಎಂದು ಕಾಲೇಜಿನ ಎನ್ ಸಿಸಿ ಅಧಿಕಾರಿ ಜಾನ್ಸನ್ ಹೇಳಿದ್ದಾರೆ.
Raksha Anchan, a B Sc student from St Philomena College, Puttur is the ONLY NCC Cadet from Dakshina Kannada to participate in Republic Day Parade in New Delhi on 26 January 2021
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm