ಬ್ರೇಕಿಂಗ್ ನ್ಯೂಸ್
25-01-21 01:18 pm Mangalore Correspondent ಕರಾವಳಿ
ಮಂಗಳೂರು, ಜ.25: ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಮತ್ತು ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.
ದೇಶಾದ್ಯಂತ ಚಳವಳಿ ನಿರತ ರೈತರನ್ನು ಬೆಂಬಲಿಸಿ ಕಾಂಗ್ರೆಸ್ ಹೋರಾಟ ಹಮ್ಮಿಕೊಂಡಿದ್ದು, ಕರ್ನಾಟಕದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ಮತ್ತು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಅದರಂತೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಪ್ರತಿಭಟನೆಯಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೋ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು ಈಗ ರೈತರನ್ನೇ ವಂಚಿಸುತ್ತಿವೆ. ಎರಡು ತಿಂಗಳಿನಿಂದ ರೈತರು ಬೀದಿಯಲ್ಲಿದ್ದಾರೆ, ಅರುವತ್ತರಷ್ಟು ರೈತರು ಚಳವಳಿ ಮಾಡುತ್ತಲೇ ಮರಣ ಹೊಂದಿದ್ದಾರೆ. ಆದರೆ ಮೋದಿ ಸರಕಾರವು ಮಾನವೀಯತೆ ಇಲ್ಲದ ರೀತಿ ರೈತರನ್ನು ನಡೆಸಿಕೊಳ್ಳುತ್ತಿದೆ. ಈ ದೇಶದ ಬುನಾದಿಯಾಗಿರುವ ರೈತರಿಗೆ ನ್ಯಾಯ ಕೊಡಿಸಲಾಗದ ಬಿಜೆಪಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕು ಇಲ್ಲ. ಕಾಂಗ್ರೆಸ್ ಸರಕಾರ ಸಾಧಿಸಿದ ಕೃಷಿ ಕ್ರಾಂತಿ, ಭೂಸುಧಾರಣೆ ಎಲ್ಲವನ್ನೂ ಬಿಜೆಪಿ ನಾಶ ಪಡಿಸುತ್ತಿದೆ. ಇದು ಬಿಜೆಪಿಯ ಅವನತಿಗೆ ಕಾರಣವಾಗಲಿದೆ ಎಂದರು.

ಸ್ಥಳೀಯ ಕಾರ್ಪೊರೇಟರ್ ವಿನಯರಾಜ್ ಮಾತನಾಡಿದರು. ಪ್ರತಿಭಟನೆಯಲ್ಲಿ ನಮಿತಾ ರಾವ್, ಗೀತಾ, ಮರಿಯಮ್ಮ ಥಾಮಸ್, ಮಂಜುಳ ನಾಯಕ್, ಜೀನತ್ ಸಂಶುದ್ದೀನ್, ಶಶಿಧರ ಹೆಗ್ಡೆ, ಕೇಶವ ಮರೋಳಿ, ನೀರಜ್ ಪಾಲ್, ಭರತೇಶ್ ಅಮೀನ್, ಟಿ. ಕೆ. ಸುಧೀರ್, ವಿಶ್ವಾಸ್ ದಾಸ್, ಯೂಸುಫ್ ಉಚ್ಚಿಲ, ಗಣೇಶ ರಾವ್ ಮೊದಲಾದವರು ಸೇರಿದ್ದರು.
Video:
In a show of support to the farmers protesting against the farm laws in New Delhi and Karnataka Mangalore, Congress leaders held a mass protest.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm