ಬ್ರೇಕಿಂಗ್ ನ್ಯೂಸ್
22-01-21 10:39 am Mangalore Correspondent ಕರಾವಳಿ
ಮಂಗಳೂರು, ಜ.22 : ಹಿರಿಯ ವಿದ್ಯಾರ್ಥಿಗಳ ರ್ಯಾಗಿಂಗ್ ಹಾವಳಿಯಿಂದಾಗಿ ಬಿ ಫಾರ್ಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಕಾಲೇಜನ್ನೇ ತೊರೆದು ಪೊಲೀಸ್ ದೂರು ದಾಖಲಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನ ವಳಚಿಲ್ನಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ಮೊದಲ ವರ್ಷದ ಬಿ ಫಾರ್ಮಸಿ ಕಲಿಯುತ್ತಿರುವ ವಿದ್ಯಾರ್ಥಿ ರ್ಯಾಗಿಂಗ್ ಹಿನ್ನೆಲೆಯಲ್ಲಿ ಕಾಲೇಜು ತೊರೆಯಲು ನಿರ್ಧರಿಸಿದ್ದಾನೆ. ಈತ ಜ.10 ರಂದು ತರಗತಿ ಮುಗಿಸಿ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ವೇಳೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಅಡ್ಡಗಟ್ಟಿದ್ದು ಕಾಲೇಜಿಗೆ ಬರುವಾಗ ತಲೆಕೂದಲು ಹಾಗೂ ಮೀಸೆ ತೆಗೆದು ಬರಬೇಕೆಂದು ಬೆದರಿಸಿದ್ದಾರೆ. ಅದೇ ವೇಳೆ ಒಬ್ಬ ವಿದ್ಯಾರ್ಥಿ ಕೆನ್ನೆಗೆ ಹೊಡೆದಿದ್ದಾನೆ. ಜ.12 ರಂದು ಅದೇ ವಿದ್ಯಾರ್ಥಿಗಳು ಮತ್ತೆ ಅಡ್ಡಗಟ್ಟಿ ಮೀಸೆ ಹಾಗೂ ತಲೆಕೂದಲು ತೆಗೆಯದೇ ಬಂದ ಕಾರಣಕ್ಕೆ ಬೈದಿದ್ದಾರೆ. ನಾಳೆ ಕಾಲೇಜಿಗೆ ಬರುವಾಗ ಮೀಸೆ ಹಾಗೂ ತಲೆ ಕೂದಲು ತೆಗೆಯದೇ ಬಂದಲ್ಲಿ ಕೂದಲನ್ನು ಕತ್ತರಿಸುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆಯೂ ಓರ್ವ ವಿದ್ಯಾರ್ಥಿ ಕೆನ್ನೆಗೆ ಹೊಡೆದಿದ್ದಾನೆ.

ಭಯಗೊಂಡ ವಿದ್ಯಾರ್ಥಿ ಹಾಸ್ಟೆಲ್ಗೆ ಬಂದು ಮನೆಯವರಿಗೆ ಮಾಹಿತಿ ನೀಡಿದ್ದು, ಮನೆಯವರು ಅದೇ ದಿನ ಬಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಬಗ್ಗೆ ಸಂಬಂಧಿಕರಲ್ಲಿ ಚರ್ಚಿಸಿದ ಬಳಿಕ ರ್ಯಾಗಿಂಗ್ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅಸಾಧ್ಯವಾಗಿರುವುದರಿಂದ ಕಾಲೇಜಿಗೆ ನೀಡಿರುವ SSLC, PUC ಸರ್ಟಿಫಿಕೇಟ್, ಟಿಸಿ ಮತ್ತು1,63,000 ಹಣವನ್ನು ಹಿಂದಿರುಗಿಸಲು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
A ragging case has been reported at Srinivas college at Valachil in Mangalore. The student has discontinued his studies.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm