ಬ್ರೇಕಿಂಗ್ ನ್ಯೂಸ್
19-01-21 10:42 pm Mangaluru Correspondent ಕರಾವಳಿ
ಉಳ್ಳಾಲ, ಜ.19: ಉಳ್ಳಾಲ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡಮ್ ಗಳನ್ನು ಹಾಕಿದ್ದಲ್ಲದೆ, ಸಿಎಂ ಬಿಎಸ್ವೈ ಮತ್ತು ಅವರ ಪುತ್ರ ವಿಜಯೇಂದ್ರ ಭಾವಚಿತ್ರಕ್ಕೆ ಶಿಲುಬೆಯಾಕೃತಿ ಚಿತ್ರ ಬಿಡಿಸಿ, ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹ ಬರೆದ ವಿಕೃತಿ ಕಂಡುಬಂದಿದೆ.
ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಪ್ರತೀ ತಿಂಗಳ ಸಂಕ್ರಾತಿಯಂದು ಕಾಣಿಕೆ ಡಬ್ಬಿಯ ಹಣ ತೆಗೆಯುವ ವಾಡಿಕೆ ಇಟ್ಟಿದ್ದಾರೆ. ಈ ಬಾರಿ ಸ್ವಲ್ಪ ತಡವಾಗಿ ಇಂದು ಸಂಜೆ ಕಾಣಿಕೆ ಡಬ್ಬಿ ತೆರೆದಿದ್ದು ಡಬ್ಬಿಯ ಒಳಗೆ ಕಾಂಡೋಮ್ ಗಳು ಮತ್ತು ಪ್ರಚೋದನಕಾರಿ ಬರಹಗಳಿದ್ದ ಪ್ಲೆಕ್ಸ್ ಒಂದು ಲಭಿಸಿದೆ.
ಬೆಂಗಳೂರಿನ K.R.I.D .L ನಿಗಮ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭಕೋರಿದ ಪ್ಲೆಕ್ಸ್ ಇದಾಗಿದ್ದು ಫ್ಲೆಕ್ಸಲ್ಲಿರುವ ಸಿಎಂ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಅಮಿತ್ ಷಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿಕ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರ ಭಾವ ಚಿತ್ರಗಳಿದ್ದು ಎಲ್ಲವನ್ನು ಗೀಚಿ ಕುರೂಪಗೊಳಿಸಲಾಗಿದೆ. ಬಿ.ಎಸ್.ವೈ ಮತ್ತು ಅವರ ಪುತ್ರ ವಿಜಯೇಂದ್ರ ಫೋಟೊದ ಕತ್ತಲ್ಲಿ ಶಿಲುಬೆಯ ಹಾರದ ಚಿತ್ರ ಬಿಡಿಸಲಾಗಿದೆ.
ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು..!
ದೇವಲೋಕದಿಂದ ಹೊರಹಾಕಲ್ಪಟ್ಟ ದ್ರೋಹಿ ದೂತರುಗಳು ಸೇಡಿನ ಸ್ವಭಾವ ಹೊಂದಿದ್ದು ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ ನಕಲಿ ದೇವರಾಗಿ ಅನಾದಿ ಕಾಲದಿಂದ ಮೆರೆಯಲ್ಪಡುತ್ತಿವೆ, ಎಚ್ಚರ.
ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ ,ಬಾಚಿ ತಿಂದು ತೇಗುವ ಈ ಹಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆದು , ಹಿಡಿದು ಕೊಲ್ಲ ಬೇಕಾಗಿದೆ. ಜನರು ಸಿದ್ಧರಾಗಬೇಕು ಎಂದು ಪ್ಲೆಕ್ಸಲ್ಲಿ ಬರೆಯಲಾಗಿದೆ.
ಕೊರಗಜ್ಜ ಸೇವಾ ಸಮಿತಿಯವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಮಂಗಳೂರು ನಗರದ ಕೊಟ್ಟಾರದ ಬಬ್ಬುಸ್ವಾಮಿ ಮತ್ತು ಅತ್ತಾವರದ ಬಾಬುಗುಡ್ಡೆಯ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯಲ್ಲೂ ಇದೇ ರೀತಿಯ ಅವಹೇಳನ ಬರಹದ ಪತ್ರ ಮತ್ತು ಕಾಂಡೋಮ್ ಕಂಡುಬಂದಿತ್ತು.
Also Read: ಹಿಂದುಗಳನ್ನು ನಿಂದಿಸಿ ಬರಹ ; ಕಾಣಿಕೆ ಡಬ್ಬಿಯಲ್ಲಿ ಕಿಡಿಗೇಡಿ ಕೃತ್ಯ
Hate message towards Karnataka cm BSY and son with condoms found in Koragajja Temple offering box in Ullal. The same was found a couple of days with fake curreny notes in Attavar Temple.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 12:54 pm
Mangalore Correspondent
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
Mangalore, Bantwal Accident, Melroy D’Sa: ಬಂಟ...
16-04-25 10:58 pm
18-04-25 08:14 pm
HK News Desk
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm
Sullia, Drugs, Mangalore, Ccb Police; ದೆಹಲಿಯಿ...
17-04-25 11:39 am