ಬ್ರೇಕಿಂಗ್ ನ್ಯೂಸ್
20-11-26 09:51 pm HK News Staffer ಕರಾವಳಿ
ಉಳ್ಳಾಲ, ನ.20: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆವರಣದಿಂದ ವಿದ್ಯಾರ್ಥಿನಿ ಅಪಹರಿಸಿದ ವಿಚಾರದಲ್ಲಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ಅಹರಿಸಲಾಗಿದ್ದ ಯುವತಿಯನ್ನು ಪೊಲೀಸರು ಕೇರಳದಲ್ಲಿ ಪತ್ತೆ ಮಾಡಿದ್ದು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಓದುತ್ತಿರುವ ಬೆಳ್ತಂಗಡಿ ಮೂಲದ ಮುಸ್ಲಿಂ ಯುವತಿಯನ್ನ ಆಕೆಯ ಕುಟುಂಬಸ್ಥರೇ ಕಾಲೇಜು ಕ್ಯಾಂಪಸ್ ನಿಂದ ಬಲವಂತವಾಗಿ ಜೀಪಿನಲ್ಲಿ ಅಪಹರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಘಟನೆ ಬಗ್ಗೆ ತನಿಖೆಗೆ ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದರು. ಇದರಂತೆ, ಅಪಹರಣ ಸ್ಥಳದಲ್ಲಿ ಸಾಕ್ಷಿಯಾಗಿದ್ದ ಸೆಕ್ಯೂರಿಟಿ ಮ್ಯಾನೇಜರ್ ನಿಂದ ದೂರು ಪಡೆದು ಅಪಹರಣ ಪ್ರಕರಣ ದಾಖಲಿಸಲಾಗಿದೆ.
ಯುವತಿ ಮಂಗಳೂರಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿರುವ ಬಾಗಲಕೋಟ ಮೂಲದ ಹಿಂದು ವಿದ್ಯಾರ್ಥಿಯನ್ನ ಪ್ರೀತಿಸುತ್ತಿರುವ ವಿಚಾರ ತಿಳಿದ ಆಕೆಯ ಕುಟುಂಬಸ್ಥರೇ ನ.19ರ ಮಧ್ಯಾಹ್ನ ಕಾಲೇಜಿನ ಕ್ಯಾಂಪಸಿನಿಂದ ಆಕೆಯನ್ನು ಬಲವಂತವಾಗಿ ಎಳೆದೊಯ್ದಿದ್ದರು. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಇಂದು ಬೆಳಗ್ಗೆ ಜಾಲತಾಣದಲ್ಲಿ ವೈರಲ್ ಆಗಿತ್ತು.
ಗುರುವಾರ ಮಧ್ಯಾಹ್ನ ಕ್ಯಾಂಪಸಿನಲ್ಲಿದ್ದ ವಿದ್ಯಾರ್ಥಿನಿಯನ್ನ ತಡೆದ 3-4 ಯುವಕರಿದ್ದ ತಂಡವು ಕಪ್ಪು ಬಣ್ಣದ ಥಾರ್ ಜೀಪಿನಲ್ಲಿ ಹಾಕಿ ಕರೆದೊಯ್ದಿದ್ದರು. ಈ ವೇಳೆ, ಬೊಬ್ಬೆ ಹೊಡೆದು ವಿರೋಧಿಸಿದರೂ ಜೀಪಿನ ಡೋರ್ ಬಂದ್ ಮಾಡಿ ಬಲವಂತದಿಂದ ಕರೆದೊಯ್ದಿದ್ದ ವಿಡಿಯೋ ಸೆರೆಯಾಗಿತ್ತು. ಯುವತಿ ಕಾಲೇಜಿಗೆ ಶುಕ್ರವಾರ ಗೈರಾಗಿದ್ದಲ್ಲದೆ, ಆಕೆಯನ್ನ ಯಾರೋ ಬಲತ್ಕಾರವಾಗಿ ಅಪಹರಿಸಿ ಹೋಗಿರುವುದಾಗಿ ಸೆಕ್ಯುರಿಟಿ ಮುಖ್ಯಸ್ಥ ಇಮ್ತಿಯಾಝ್ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಇದರಂತೆ ಬಿಎನ್ ಎಸ್ 2023,(u/s 126(2),140(3),3(5) ಪ್ರಕರಣ ದಾಖಲಾಗಿದೆ.
ಮುಸ್ಲಿಂ ಯುವತಿ ಹಾಗೂ ಬಾಗಲಕೋಟೆ ಮೂಲದ ವಿದ್ಯಾರ್ಥಿ ಪರಸ್ಪರ ಪ್ರೀತಿಸುತ್ತಿದ್ದು ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಒಂದು ವರ್ಷದ ಹಿಂದೆ ನೀಟ್ ಪರೀಕ್ಷೆ ಬರೆದಿದ್ದಾಗ ಇವರ ನಡುವೆ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಈಗ ವಿಚಾರ ತಿಳಿದ ಯುವತಿ ಮನೆಯವರು ವಿರೋಧಿಸಿ ರಾದ್ಧಾಂತ ಸೃಷ್ಟಿಸಿದ್ದಾರೆ.
ಘಟನೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಅಪಹರಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಪ್ರಾಯ ಪ್ರಬುದ್ಧ ಆಗಿರುವ ಕಾರಣ ಅವರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕಿದ್ದು ಬಲವಂತವಾಗಿ ಕಿಡ್ನಾಪ್ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಇದೇ ವೇಳೆ, ಆಕೆಯನ್ನು ಕೇರಳದ ಸಂಬಂಧಿಕರ ಮನೆಯಲ್ಲಿ ಪತ್ತೆ ಮಾಡಲಾಗಿದ್ದು ಮನೆಯವರ ಜೊತೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾಳೆ. ವೈದ್ಯಕೀಯ ಪರೀಕ್ಷೆ ಬಳಿಕ ಸಾಂತ್ವನ ಕೇಂದ್ರ ಅಥವಾ ಆಕೆ ಇಚ್ಚಿಸುವ ಜಾಗಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳಿಸಿಕೊಡುತ್ತೇವೆ. ಆಕೆಯನ್ನು ಠಾಣೆಗೆ ಕರೆತಂದ ಇಬ್ಬರಿಗೆ ನೋಟಿಸ್ ನೀಡಲಾಗಿದೆ ಎಂದು ಸುಧೀರ್ ರೆಡ್ಡಿ ತಿಳಿಸಿದ್ದಾರೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
20-11-26 12:58 pm
HK News Staffer
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...
16-11-26 10:56 pm
20-11-26 09:53 pm
HK News Staffer
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯ...
20-11-26 02:32 pm
‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ...
19-11-26 07:09 pm
ದೀಪಾವಳಿಗೆ ಪಟಾಕಿ ಸಿಡಿಸಿದ್ದಕ್ಕೆ ವಿದ್ಯಾರ್ಥಿಗಳ ಫ್...
19-11-26 03:22 pm
19-11-26 09:20 pm
HK News Staffer
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm
Fr Cyprian Pinto Arrest: ಪೋಕ್ಸೋ ಕೇಸು ; ಎರಡನೇ...
18-11-26 07:20 pm
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm