ಬ್ರೇಕಿಂಗ್ ನ್ಯೂಸ್
18-11-26 12:46 pm HK News Staffer ಕ್ರೈಂ
ಬೆಂಗಳೂರು, ನ 18: ಪ್ರಾಜೆಕ್ಟ್ ಕೆಲಸಕ್ಕೆ ಎಂದು ಕುಣಿಗಲ್ಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು, ಇಬ್ಬರು ಇಂಜಿನಿಯರ್ ವಿದ್ಯಾರ್ಥಿನಿಯರು ಸಾವನ್ನಪ್ಪಿರುವ ಘಟನೆ ನೆಲಮಂಗಲ ಬಳಿಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ.
ವೈಷ್ಣವಿ (19), ಗಾನವಿ (19) ಸ್ಥಳದಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿನಿಯರು. ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣ ಎಸ್ಪಿ ರೋಹನ್ ಜಗದೀಶ್, ಇಂದು ಬೆಳಗ್ಗೆ 5:30 ಮತ್ತು 6:30 ನಡುವೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಸಂಬಂಧಿಸಿದ ಪ್ರಾಜೆಕ್ಟ್ ಸಂಬಂಧ ಬೆಂಗಳೂರಿನಿಂದ ಕುಣಿಗಲ್ಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ಅತಿವೇಗದ ಚಾಲನೆಯಿಂದ ಪೋರ್ಡ್ ಕಾರು ರಸ್ತೆ ಬದಿಗೆ ಬಂದು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಎರಡು ಕಾರಿನಲ್ಲಿ ವಿದ್ಯಾರ್ಥಿಗಳ ತಂಡ ಪ್ರಾಜೆಕ್ಟ್ ಕೆಲಸಕ್ಕೆಂದು ಹೋಗಿದ್ದು, ಒಂದು ಕಾರು ಮುಂದೆ ಪಾಸ್ ಆಗಿದ್ದು, ಹಿಂದೆ ಬರುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ರಸ್ತೆಯ ಮೇಲೆ ಕಾರಿನ ಚಕ್ರ ತಿರುವು ತೆಗೆದುಕೊಂಡಿರುವ ಗುರುತು ಇದ್ದು, ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ತಾಂತ್ರಿಕ ಅಂಶಗಳ ಆಧಾರ ಮೇಲೆ ಟೈರ್ ಬ್ಲಾಸ್ಟ್ನಿಂದ ಅಪಘಾತವಾಗಿದೆಯೋ ಅಥವಾ ಅತಿವೇಗದ ಚಾಲನೆಯಿಂದ ಅಪಘಾತವಾಗಿದೆಯೋ ಎಂಬುದು ತಿಳಿಯಲಿದೆ ಎಸ್ಪಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18-11-26 11:03 pm
HK News Desk
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
ರೇಸ್ ಕೋರ್ಸ್ ವ್ಯಾಪ್ತಿಯ 79 ಎಕರೆ ಸರ್ಕಾರದ ವಶಕ್ಕೆ...
18-11-26 05:38 pm
ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣ ; ಆಯೋಗದ ಅಧ್ಯಕ್ಷ...
17-11-26 12:09 pm
ಆಟವಾಡುತ್ತಿದ್ದ ವೇಳೆ ದುರಂತ ; ಬಿಸಿ ಕೆಮಿಕಲ್ ಬಕೆಟ್...
14-11-26 09:24 pm
18-11-26 11:28 pm
HK News Desk
ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...
16-11-26 10:56 pm
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
18-11-26 07:27 pm
HK News Staffer
Bolas Factory Raid, Mangalore: ಗ್ರಾಹಕರನ್ನು ದಾ...
18-11-26 01:18 pm
Ideal Icecream Raid, Mangalore: ಕೊಲ್ಯ ಐಡಿಯಲ್...
17-11-26 08:15 pm
ಸೌಜನ್ಯಾ ಪ್ರಕರಣ ; ಮೂವರು ತಜ್ಞ ವೈದ್ಯರ ಕಮಿಟಿ ರಚನೆ...
17-11-26 06:42 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ರೆಕಾರ್ಡ್ ಮಾಡಿದ್ದ...
17-11-26 03:15 pm
18-11-26 07:20 pm
HK News Staffer
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm
ಕೇರಳದಲ್ಲಿ ಟ್ರಾಫಿಕ್ ಉಲ್ಲಂಘನೆ ದಂಡ ; ಇ-ಚಲನ್ ಏಪ್...
16-11-26 09:56 pm
ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ...
16-11-26 04:31 pm