ಬ್ರೇಕಿಂಗ್ ನ್ಯೂಸ್
12-10-26 10:01 pm HK News Staffer ಕರಾವಳಿ
ಮಂಗಳೂರು, ಅ.12 : ಕರಾವಳಿಯ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳದ ಮೇಲೆ ಅಪಾರ ಗೌರವ ಮತ್ತು ಅಭಿಮಾನವಿದೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ತೀವ್ರ ಭೀಕರ ಬರಗಾಲವಿರುವ ಕಾರಣ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವುದು ಸೂಕ್ತವಲ್ಲ, ಇದನ್ನು ಕೈಬಿಡಬೇಕು. ಮೈಸೂರು ಕಂಬಳದಲ್ಲಿ ಭಾಗವಹಿಸಲು ನೋಂದಣಿ ಮಾಡಿರುವ ಕೋಣಗಳ ಮಾಲಕರು ನೋಂದಣಿ ರದ್ದುಪಡಿಸಿ ಮೈಸೂರು ಕಂಬಳದಿಂದ ಹಿಂದೆ ಸರಿಯಬೇಕು ಎಂದು ಪರಿಸರಕ್ಕಾಗಿ ನಾವು ಸಂಘಟನೆಯ ಅಧ್ಯಕ್ಷ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ, ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿಯಿದೆ. ಅಂತರ್ಜಲ ಕುಸಿದು ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ. ಮೈಸೂರು ಜಿಲ್ಲೆಯಲ್ಲೂ 2991 ಕೆರೆಗಳ ಪೈಕಿ 2928 ಕೆರೆಗಳು ಒಣಗಿದ್ದು, ಕೇವಲ 63 ಕೆರೆಗಳನ್ನು ಮಾತ್ರ ಕಾಲುವೆ ನೀರಿಂದ ತುಂಬಿಸಲಾಗಿದೆ. ಮೈಸೂರು ನಗರದ 10 ಕಿ.ಮೀ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳು ಬತ್ತಿಹೋಗಿದ್ದು, ಕಾವೇರಿ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ. ಇಂತಹ ಸಮಯದಲ್ಲಿ ಲಕ್ಷಾಂತರ ಲೀಟರ್ ನೀರು ಪೋಲು ಮಾಡಿ ಕಂಬಳ ಮಾಡುವ ಅಗತ್ಯವೇನು? ರೈತರು ನೀರಿಲ್ಲದೆ ತೀವ್ರ ಸಂಕಷ್ಟದಲ್ಲಿರುವಾಗ ಸಂಭ್ರಮವೇ ಇಲ್ಲದ ಪರಿಸ್ಥಿತಿಯಲ್ಲಿ ಕಂಬಳ ನಡೆಸುವುದು ಬೇಡ ಎಂದು ಹೇಳಿದರು.
ಕಂಬಳಕ್ಕಾಗಿ ಆಯ್ಕೆ ಮಾಡಿರುವ ಜಾಗ ಉದ್ಯಾನವನಕ್ಕೆ ಮೀಸಲಾಗಿತ್ತು. ಅಲ್ಲಿ ನೂರಾರು ಮರಗಳು, ಗಿಡಗಂಟಿಗಳು ಹಾಗೂ ಸಣ್ಣಪುಟ್ಟ ಪ್ರಾಣಿ-ಪಕ್ಷಿಗಳ ಜೀವ ಪರಿಸರ ವ್ಯವಸ್ಥೆ ಇತ್ತು. ಆದರೆ ಕಂಬಳ ಕ್ರೀಡೆಗಾಗಿ 50ಕ್ಕೂ ಹೆಚ್ಚು ಮರಗಳನ್ನು ಕಡಿದು, ಕೆರೆಯ ಅಂಗಳವನ್ನು ಮುಚ್ಚಿ ಪರಿಸರ ನಾಶಪಡಿಸಲಾಗಿದೆ. ಮರ ಕಡಿದಿರುವ ಬಗ್ಗೆ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ಬರಗಾಲದ ವೇಳೆ ಪರಿಸರವನ್ನೂ ಹಾಳು ಮಾಡಿ, ಕೃತಕವಾಗಿ ಕಂಬಳ ಕರೆ ನಿರ್ಮಿಸಿ ನೀರನ್ನೂ ಪೋಲು ಮಾಡಿ ಕಂಬಳ ಮಾಡಬೇಕಾ? ಎಂದು ಪ್ರಶ್ನಿಸಿದರು.
ರಾಜವಂಶಸ್ಥರಿಂದಲೂ ವಿರೋಧ
ಮೈಸೂರಿನ ರಾಜವಂಶಸ್ಥರೂ ದಸರಾದಲ್ಲಿ ಕಂಬಳ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿಂದ ವಿವಿಧ ಸಂಘಟನೆಗಳು ಮತ್ತು ಸಾಹಿತಿಗಳು ವಿರೋಧಿಸುತ್ತಿದ್ದರೂ ಸರ್ಕಾರ ಹಾಗೂ ಆಯೋಜಕರು ಸ್ಪಂದಿಸುತ್ತಿಲ್ಲ. ಆದ್ದರಿಂದ ಕರಾವಳಿಯ ಪ್ರಜ್ಞಾವಂತರು ಹಾಗೂ ಕಂಬಳ ಕೋಣಗಳ ಮಾಲೀಕರು ಸ್ವಯಂಪ್ರೇರಿತರಾಗಿ ನೋಂದಣಿ ರದ್ದುಪಡಿಸಿ ಕ್ರೀಡೆಯಿಂದ ಹಿಂದೆ ಸರಿಯಬೇಕು, ಮೈಸೂರು ಕಂಬಳಕ್ಕೆ ತಮ್ಮ ಕೋಣಗಳನ್ನು ತರಬಾರದು ಎಂದು ವಿನಂತಿಸಿದರು.
ಭೀಕರ ಬರಗಾಲದ ಸಂಕಷ್ಟದ ಸಮಯದಲ್ಲಿ ಬೆಳೆ ನಷ್ಟಕ್ಕೆ ಸರ್ಕಾರ ಘೋಷಿಸಿರುವ ಕೇವಲ 2500 ರೂ. ಪರಿಹಾರ ರೈತರಿಗೆ ಮಾಡಿದ ಅವಮಾನವಾಗಿದ್ದು, ಈ ಹಣ ಬಂದ ಕೂಡಲೇ 1 ರೂ. ಸೇರಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮರಳಿಸುವುದಾಗಿ ರೈತರು ತೀರ್ಮಾನಿಸಿದ್ದಾರೆ ಎಂದು ಎ.ಟಿ. ರಾಮಸ್ವಾಮಿ ಹೇಳಿದರು.
ಮೈಸೂರು ಕಂಬಳ ನಡೆಯುವ ಸ್ಥಳದಲ್ಲಿ 30 ಟಿಪ್ಪರ್ ಮರಳು ತಂದು ಹಾಕಿದ್ದಾರೆ. ನಮಗೆ ಮನೆ ಕಟ್ಟಲೂ ಮರಳು ಸಿಗದೆ ಇರುವಾಗ ಇಲ್ಲಿ ಎಲ್ಲಿಂದ ಮರಳು ಸಿಕ್ಕಿತು? ಮೈಸೂರಿಗೆ ಪ್ರಸ್ತುತ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕಂಬಳಕ್ಕೆ ಕನಿಷ್ಠ 25 ರಿಂದ 50 ಲಕ್ಷ ಲೀ ನೀರು ಬೇಕಾಗುತ್ತದೆ. ಕುಡಿಯಲು ನೀರಿಲ್ಲ, ಕಂಬಳಕ್ಕೆ ನೀರು ಎಲ್ಲಿಂದ ತರುತ್ತಾರೆ ಎಂದು ಲೀಲಾ ಶಿವಕುಮಾರ್ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪರಿಸರಕ್ಕಾಗಿ ನಾವು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪರಿಸರ ಹೋರಾಟಗಾರ್ತಿ ಲೀಲಾ ಶಿವಕುಮಾರ್, ಸಾಹಿತಿ ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm