ಬ್ರೇಕಿಂಗ್ ನ್ಯೂಸ್
10-10-26 02:27 pm HK News Staffer ಕ್ರೈಂ
ಮಂಗಳೂರು, ಅ.10: ಇನ್ ಸ್ಟಾ ಗ್ರಾಮ್ ಜಾಲತಾಣದ ಮೂಲಕ ಪರಿಚಯವಾಗಿದ್ದ ಡಾ.ಅಶ್ವಿನ್ ಶೆಟ್ಟಿ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯೊಬ್ಬ ಮಾಡೆಲಿಂಗ್, ಫೋಟೊ ಶೂಟ್ ಮಾಡಿಸುವುದಾಗಿ ಹೇಳಿ ಮೂಡುಬಿದ್ರೆಯ ಯುವ ವೈದ್ಯೆಯೊಬ್ಬರನ್ನು ನಂಬಿಸಿ ಗೋಲ್ಡ್ ಬಿಸ್ಕಟ್, ಕಪ್ಪು ಹಣದ ಬ್ಯಾಗ್ ಇದೆಯೆಂದು ಹೇಳಿ 10.32 ಲಕ್ಷ ಹಣ ಮತ್ತು 32 ಗ್ರಾಮ್ ಚಿನ್ನಾಭರಣವನ್ನು ಪಡೆದು ವಂಚಿಸಿದ್ದಾನೆಂದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಲಾಗಿದೆ.
ತನ್ನನ್ನು ಅಶ್ವಿನ್ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯು ಮಾಡೆಲಿಂಗ್ ಹಾಗೂ ಫೋಟೋಶೂಟ್ ಮಾಡಿಸುವುದಾಗಿ ಹೇಳಿ ನಂಬಿಕೆ ಗಳಿಸಿಕೊಂಡಿದ್ದ. ಇದಲ್ಲದೆ, ಮಂಗಳೂರಿಗೆ ಹಡಗಿನ ಮೂಲಕ ಕಪ್ಪು ಹಣವಿರುವ ಬ್ಯಾಗ್ಗಳು ಬರುತ್ತಿದ್ದು, ಅವುಗಳನ್ನು ಪಡೆಯಲು ಮುಂಗಡ ಹಣ ಬೇಕೆಂದು ಹೇಳಿ ನಂಬಿಸಿದ್ದ. ಇದಕ್ಕಾಗಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ರೂ.1,70,000 ಹಣವನ್ನು ವರ್ಗಾಯಿಸಿಕೊಂಡಿದ್ದ.
ನಂತರ ಆದಾಯ ತೆರಿಗೆ ಸಮಸ್ಯೆ ಪರಿಹರಿಸುವ ನೆಪದಲ್ಲಿ ಗುರುತಿನ ಕಾರ್ಡ್, PAN ಕಾರ್ಡ್, ಫೋಟೋಗಳು ಮತ್ತು ಇತರ KYC ದಾಖಲೆಗಳನ್ನು ಪಡೆದಿದ್ದು ಆನಂತರ, ಪ್ರವೀಣ್ ಶೆಟ್ಟಿ ಎಂಬ ವ್ಯಕ್ತಿಯೊಬ್ಬ 16 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ Whisky ಮತ್ತು Breezer ಬಾಟಲಿಗಳನ್ನು ಪಡೆದುಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಸುಮಾರು ರೂ.1,35,000/- ಮೌಲ್ಯದ iPhone Pro Max ಮೊಬೈಲ್ ಫೋನ್ ಖರೀದಿಸಿ ನೀಡುವಂತೆ ಮಾಡಿದ್ದಾನೆ.
ಆಬಳಿಕ ಯುವ ವೈದ್ಯೆಯ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಸಿದ್ದು ಮತ್ತೆ ಸೆ.17ರಂದು ರೂ.50,000/- ನಗದು ಹಾಗೂ ಸುಮಾರು 8 ಗ್ರಾಂ ಚಿನ್ನದ ಬ್ರಾಸ್ಲೆಟ್ ಪಡೆದುಕೊಂಡಿದ್ದಾನೆ. ಇದಲ್ಲದೆ, ಸೆ.22ರಂದು ರೂ.8,00,000/- ನಗದು ಹಣವನ್ನು ಚಾಲಕ ಸಂದೀಪ್ ಕೋಟ್ಯಾನ್ ಮೂಲಕ ಉಡುಪಿಯ ಕಲ್ಯಾಣ್ ಜ್ಯುವೆಲ್ಲರ್ಸ್ ಬಳಿ ಪಡೆದುಕೊಂಡಿದ್ದಾಗಿ ಆರೋಪಿಸಲಾಗಿದೆ.
ಹೀಗೆ ನಾನಾ ರೀತಿಯಲ್ಲಿ ಅಶ್ವಿನ್ ಎಂಬ ಅಪರಿಚಿತ ವ್ಯಕ್ತಿ ಮಾಡೆಲಿಂಗ್, ಕಪ್ಪು ಹಣ, ಇನ್ಕಂ ಟ್ಯಾಕ್ಸ್ ಹಾಗೂ ಬ್ಯಾಂಕ್ ಖಾತೆ ತೆರೆಯುವ ನೆಪದಲ್ಲಿ ದೂರುದಾರರನ್ನು ವಂಚಿಸಿದ್ದು, ಒಟ್ಟು ಸುಮಾರು ರೂ.10,20,000/- ನಗದು ಹಣ, ಸುಮಾರು 32 ಗ್ರಾಂ ಚಿನ್ನಾಭರಣ ಪಡೆದಿದ್ದಾನೆ. ರೂ.1,35,000/- ಮೌಲ್ಯದ ಮೊಬೈಲ್ ಫೋನ್ ಸೇರಿದಂತೆ ಒಟ್ಟು 15,35,000/- ಮೌಲ್ಯದ ಸೊತ್ತುಗಳನ್ನು ಪಡೆದುಕೊಂಡಿದ್ದಾನೆ. ಅಲ್ಲದೆ, ವೈದ್ಯೆ ಯುವತಿಯ ವೈಯಕ್ತಿಕ ದಾಖಲೆಗಳು ಮತ್ತು ಫೋಟೋಗಳನ್ನು ದುರುಪಯೋಗಪಡಿಸಿ ಮಾನಹಾನಿ ಮಾಡುವುದಾಗಿ ಬೆದರಿಸಿದ್ದಾಗಿ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
10-10-26 10:31 pm
HK News Staffer
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm