ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ್‌ ಪಾರ್ಕ್‌ ಮಾಡೋ ಗ್ಯಾಪಲ್ಲೇ ಲವರ್‌ ಜೊತೆ ಗ್ರೇಟ್‌ ಎಸ್ಕೇಪ್

09-10-26 08:41 pm       HK News Staffer   ಕ್ರೈಂ

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನವ ವಿವಾಹಿತ ದಂಪತಿ ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ಪತಿ ಬೈಕ್ ನಿಲ್ಲಿಸಲು ತೆರಳಿದ್ದ ಕೆಲವೇ ನಿಮಿಷಗಳಲ್ಲಿ ಪತ್ನಿ ನಾಪತ್ತೆಯಾಗಿದ್ದು, ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗ್ವಾಲಿಯರ್, ಅ.9 : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನವ ವಿವಾಹಿತ ದಂಪತಿ ಮೃಗಾಲಯಕ್ಕೆ ಭೇಟಿ ನೀಡಿದ ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ಪತಿ ಬೈಕ್ ನಿಲ್ಲಿಸಲು ತೆರಳಿದ್ದ ಕೆಲವೇ ನಿಮಿಷಗಳಲ್ಲಿ ಪತ್ನಿ ನಾಪತ್ತೆಯಾಗಿದ್ದು, ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶಿವಪುರಿ ಜಿಲ್ಲೆಯ ನರ್ವಾರ್ ನಿವಾಸಿಯಾದ 21 ವರ್ಷದ ಯುವಕ ತನ್ನ 18 ವರ್ಷದ ಪತ್ನಿಯೊಂದಿಗೆ ಗ್ವಾಲಿಯರ್‌ಗೆ ಬಂದಿದ್ದ. ಇಬ್ಬರೂ ಮೃಗಾಲಯ ವೀಕ್ಷಿಸಿ, ಬಳಿಕ ಸಂಬಂಧಿಕರನ್ನು ಭೇಟಿಯಾಗಲು ಯೋಜಿಸಿದ್ದರು. ಆದರೆ ಅಷ್ಟರಲ್ಲೇ ಪತ್ನಿ ಪತಿಗೆ ಕೈಕೊಟ್ಟು ಲವರ್‌ ಜೊತೆ ಎಸ್ಕೇಪ್‌ ಆಗಿದ್ದಾಳೆ. 

ಪತಿ ಬೈಕ್ ನಿಲ್ಲಿಸುವಷ್ಟರಲ್ಲಿ ಪತ್ನಿ ನಾಪತ್ತೆ! 

ಮೃಗಾಲಯದ ಪ್ರವೇಶ ದ್ವಾರದ ಬಳಿ ಬಂದಾಗ ಪತ್ನಿಗೆ ಅಲ್ಲಿಯೇ ಕಾಯುವಂತೆ ಹೇಳಿ ಯುವಕ ಬೈಕ್ ನಿಲ್ಲಿಸಲು ತೆರಳಿದ್ದಾನೆ. ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದಾಗ ಪತ್ನಿ ಕಾಣೆಯಾಗಿದ್ದಳು. ಸುತ್ತಮುತ್ತ ಹುಡುಕಾಡಿದರೂ ಆಕೆಯ ಸುಳಿವು ಸಿಗಲಿಲ್ಲ. ಬಳಿಕ ಸಿಸಿಟಿವಿ ಚೆಕ್ ಮಾಡಿದಾಗ ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.

26 ಸೆಕೆಂಡ್‌ಗಳ ದೃಶ್ಯ ವೈರಲ್

ಈ ಘಟನೆ ಸುಮಾರು 26 ಸೆಕೆಂಡ್‌ಗಳಲ್ಲಿ ನಡೆದಿರಬಹುದು ಎಂದು ಹೇಳಲಾಗಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ಪತ್ನಿಯನ್ನು ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಯುವಕ ತನ್ನ ಚಿಕ್ಕಪ್ಪನೊಂದಿಗೆ ಪಡಾವ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ.‌ ಪತಿ ನೀಡಿರುವ ದೂರಿನಲ್ಲಿ ಅರ್ಮಾನ್ ಖಾನ್ ಎಂಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಆತ ತನ್ನ ಪತ್ನಿಯನ್ನು ಆಮಿಷವೊಡ್ಡಿ ಕರೆದೊಯ್ದಿದ್ದಾನೆ ಎಂದು ಯುವಕ ಆರೋಪಿಸಿದ್ದಾನೆ. 

ಪಡಾವ್ ಪೊಲೀಸ್ ಠಾಣೆಯ ಉಸ್ತುವಾರಿ ಶೈಲೇಂದ್ರ ಭಾರ್ಗವ್ ಅವರ ಪ್ರಕಾರ, ಮೃಗಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಮಹಿಳೆ ಯಾರೊಂದಿಗೆ ತೆರಳಿದ್ದಾಳೆ ಮತ್ತು ಯಾವ ಮಾರ್ಗದಲ್ಲಿ ಪ್ರಯಾಣಿಸಿದ್ದಾಳೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮಹಿಳೆ ಹಾಗೂ ಅರ್ಮಾನ್ ಖಾನ್ ಅವರ ಮೊಬೈಲ್ ಫೋನ್‌ಗಳ ಸ್ಥಳ ಮಾಹಿತಿಯನ್ನೂ ಪರಿಶೀಲಿಸಲಾಗುತ್ತಿದೆ.